ದಾಸನ ಮಾಡಿಕೊ ಎನ್ನ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ದಾಸನ ಮಾಡಿಕೊ ಎನ್ನ
by ಪುರಂದರದಾಸರು

ದಾಸನ ಮಾಡಿಕೊ ಎನ್ನ
ಸ್ವಾಮಿ ಸಾಸಿರನಾಮದ ವೆಂಕಟರಮಣ || ಪ ||

ದುರುಬುದ್ಧಿಗಳನೆಲ್ಲ ಬಿಡಿಸೊ
ನಿನ್ನ ಕರುಣಕವಚವೆನ್ನ ಹರಣಕ್ಕೆ ತೊಡಿಸೊ |
ಚರಣಸೆವೆ ಎನಗೆ ಕೊಡಿಸೊ ಅಭಯ
ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||
|ದಾಸನ |

ದೃಢಭಕ್ತಿ ನಿನ್ನಲ್ಲಿ ಬೇಡಿ
ನಾ ಅಡಿಗೆರಗುವೆನಯ್ಯ ಅನುದಿನ ಪಾಡಿ |
ಕಡೆಗಣ್ಣಲೆ ಎನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ ||
 |ದಾಸನ |

ಮೊರೆಹೊಕ್ಕವರ ಕಾಯ್ವ ಬಿರುದು
ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು |
ದುರಿತಗಳೆಲ್ಲವ ತರಿದು
ಸಿರಿ ಪುರಂದರವಿಠ್ಠಲ ಎನ್ನನು ಪೊರೆದು || ೩ || |ದಾಸನ |

ಗಾಯನ[ಸಂಪಾದಿಸಿ]