ವಿಷಯಕ್ಕೆ ಹೋಗು

ನಿಮ್ಮ ಭಕ್ತಂಗೆ ಮಲತ್ರಯವಿಲ್ಲ;

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನಿಮ್ಮ ಭಕ್ತಂಗೆ ಮಲತ್ರಯವಿಲ್ಲ; ಅದೇನು ಕಾರಣವೆಂದಡೆ; ತನುವ ಸದಾಚಾರಕ್ಕರ್ಪಿಸಿ
ಮನವ ಮಹಾಲಿಂಗಭಾವದಲಿರಿಸಿ
ಧನವ ನಿಮ್ಮ ಶರಣರ ದಾಸೋಹಕ್ಕೆ ಸವೆಯಬಲ್ಲವನಾಗಿ_ ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟಬಳಿಕ ಆ ಭಕ್ತನ ತನು ನಿರ್ಮಲ
ಆ ಭಕ್ತನ ಮನ ನಿಶ್ಚಿಂತ
ಆ ಭಕ್ತನ ಧನ ನಿರ್ವಾಣ. ಇಂತಪ್ಪ ಭಕ್ತ ಪ್ರಸಾದಕಾಯನಯ್ಯಾ ಕೂಡಲಚೆನ್ನಸಂಗಮದೇವಾ.