ವಿಷಯಕ್ಕೆ ಹೋಗು

ನಿವೇದನ

ವಿಕಿಸೋರ್ಸ್ದಿಂದ

ನಿವೇದನೆ

[ಸಂಪಾದಿಸಿ]
  • ಕವಿ: ಡಿ.ವಿ.ಜಿ.

ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ||ವನಸುಮದೊಳೆನ್ನ ಜೀವನವು ---

ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ ||ವನಸುಮದೊಳೆನ್ನ ಜೀವನವು ---

ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದೂ
ವಿಪುಲಾಶ್ರಯವನೀವ ಸುಫಲ ಸುಮಭರಿತ
ಪಾದಪದಂತೆ ನೈಜಮಾ ದೊಳ್ಪಿನಲಿ ಬಾಳ್ವವೊಲು||ವನಸುಮದೊಳೆನ್ನ ಜೀವನವು --- [][][]

ಪರಿವಿಡಿ

[ಸಂಪಾದಿಸಿ]


ಉಲ್ಲೇಖ

[ಸಂಪಾದಿಸಿ]
  1. ನಿವೇದನ ಕವನಸಂಗ್ರಹ- ಡಿ.ವಿ.ಜಿ
  2. http://chitra-durga.blogspot.com/2008/05/blog-post.html chitradurga blogspot
  3. DVG ;Remembering the legacy
"https://kn.wikisource.org/w/index.php?title=ನಿವೇದನ&oldid=231821" ಇಂದ ಪಡೆಯಲ್ಪಟ್ಟಿದೆ