ನೋಡಿರೇ ನೋಡಿರೇ ಪೂರ್ವದತ್ತವ;
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ನೋಡಿರೇ ನೋಡಿರೇ ಪೂರ್ವದತ್ತವ; ವರುಣ ಹೆಳವ
ರವಿ ಕುಷ್ಟ
ಶುಕ್ರನಂಧಕ
ಶನಿಗೆ ಸಂಕಲೆ
ಬಲಿಗೆ ಬಂಧನ
ಸೀತೆಗೆ ಧ್ರೌಪದಿಗೆ ಸೆರೆ
ಹರಿ ಹಂದಿಯಾದ
ಅರುಹಂಗೆ ಲಜ್ಜೆ
ಬ್ರಹ್ಮನ ಶಿರಹೋಯಿತ್ತು
ಬಲ್ಲಿದನೆಂಬವನ ಕೊಡೆವಿಡಿಸದೆ ವಿದ್ಥಿ ಜತ್ತಕನೆಂಬವನ ಕತ್ತೆಯ ಮಾಡಿತ್ತು. ದಶಮುಖನ ನಾಯ ಡೋಣಿಯಲ್ಲಿ ಉಣಿಸಿತ್ತು. ದೇವೇಂದ್ರನ ಮೈಯ್ಯ ನಾಣುಗೆಡಿಸಿತ್ತು. ಶೂದ್ರಕನ ತಲೆ ಕಂಚಿಯಾಲದಲ್ಲಿ ನೇರಿತ್ತು. ಕೂಡಲಸಂಗಮದೇವಯ್ಯಾ
ನೀ ಮಾಡಿದ ಮಾಯೆಯನಂತರನಾಳಿಗೊಂಡಿತ್ತು.