ಪರಿವಿಡಿ ಚರ್ಚೆ:ಕನ್ನಡದ ಬಾವುಟ.djvu

Page contents not supported in other languages.
ವಿಕಿಸೋರ್ಸ್ದಿಂದ

ಇದು ಪರಿವಿಡಿ:ಕನ್ನಡದ ಬಾವುಟ.djvu ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಪುಸ್ತಕದ ಮುನ್ನುಡಿಯಲ್ಲಿ ಈ ಕೆಳಗಿನ ಕುತೂಹಲಕಾರಿ ವಿಷಯ ಓದಲು ಸಿಗುತ್ತದೆ. ಮಾಡಿರುವ ಮಾರ್ಪಾಟುಗಳು ಅಚ್ಚು ಕೂಟಗಳ ತೊಡಕುಗಳನ್ನು ಕಡಿಮೆಮಾಡುವುದಕ್ಕೆ ಮಾಡಿರುವ ಪ್ರಯೋಗ ಕಂಡುಬಂದರೂ, ಕನ್ನಡದ ಅಚ್ಚು ಸಾಂಪ್ರದಾಯಿಕ ಅಕ್ಷರಗಳಿಗೆ ಹೊಂದಿಕೊಂಡೆ ಬೆಳೆದುಬಂದು, ಈ ೧೯೩೮ರ "ನವೀನ-ಪ್ರಯೋಗಾತ್ಮಕ" ಅಕ್ಷರಗಳು ಇಂದು ಗಣಕದಲ್ಲಿ ಊಡಿಸುವುದಕ್ಕೆ ಅಸಾಧ್ಯವಾಗಿವೆ. ಆದರೆ, ಇಂತಹ ಪ್ರಯೋಗಗಳ ಗುರುತಾಗಿ, ಈ ಪುಸ್ತಕವು ಒಂದು ಮೈಲುಗಲ್ಲಿನಂತೆ ಇದೆ. ಒಂದು ವೇಳೆ ಇವೇ ಅಕ್ಷರಗಳು ಪ್ರತೀತಿಗೆ ಬಂದಿದ್ದರೆ, ಒತ್ತಕ್ಷರಗಳ ಇಂದಿಗೂ ಆಗಾಗ ಬಂದು ಕಾಡುವ ತೊಂದರೆಗಳು ಇರುತ್ತಿಲ್ಲವೇನೋ! (ಉದಾ: ಲಕ್ಷ್ಯ)

ಕನ್ನಡದ ಬಾವುಟ ಎಂಬ ಕವಿತೆಯ ಅಚ್ಚಿನ ವಿಷಯದಲ್ಲಿ ಒಂದು ಮಾತು:

ಕನ್ನಡ ಬರವಣಿಗೆಯಲ್ಲಿ ಈಗಿರುವ ಅಕ್ಷರ ಸಂಯೋಜನೆಯ ಕ್ರಮ ಹಲವು ದೃಷ್ಟಿಗಳಿಂದ, ಅದರಲ್ಲಿಯೂ ಮುದ್ರಣದೃಷ್ಟಿಯಿಂದ, ಬಳೆ ತೊಡಕಾದ್ದೆಂದೂ ಯಾವ ರೀತಿಯಲ್ಲಾದರೂ ಕೊಂಚಮಟ್ಟಿಗಾದರೂ ತೊಡಕು ಬಿಡಿಸಿ ಸರಳ ಮಾಡಬೇಕೆಂದೂ ಹಲವರು ಅಭಿಪ್ರಾಯಪಟ್ಟು, ಕರ್ಣಾಟಕ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಒಂದು ಸಮಿತಿಯನ್ನು ಏರ್ಪಡಿಸಿ ಆಗಬೇಕಾದ ಮಾರ್ಪಾಟುಗಳ ಪರ್ಯಾಲೋಚನೆಯನ್ನು ಆ ಸಮಿತಿಗೆ ವಹಿಸಿದರು.

ಆ ಸಮಿತಿ ಚರ್ಚೆಗಳನ್ನು ನಡೆಸಿ ಕೆಲವು ತೀರ್ಮಾನಗಳಿಗೆ ಬಂತು. ಅದು

ಸೂಚಿಸಿದ ಕೆಲವು ಮಾರ್ಪಾಟುಗಳನ್ನು ಇಲ್ಲಿ ಬಳಕೆಗೆ ತಂದಿದೆ. ಮುಖ್ಯವಾಗಿ ಮಾಡಿರುವ ಮಾರ್ಪಾಟುಗಳು ಮೂರು: (i) ದೀರ್ಘ ಚಿಹ್ನೆಯನ್ನು ಎಲ್ಲ ಕಡೆಯೂ ಒಂದೇ ರೀತಿ ಬರೆಯುವುದು- ಆ - - ಅ, ಬಾ ಒ, ಕೂ ಕು; (ii) ಒತ್ತಕ್ಷರವನ್ನು ಬಿಡಿಸಿ ಪಕ್ಕದಲ್ಲಿ ಬರೆಯುವುದು - ಕನ್ನಡ ಕನ್ನಡ, ಶ್ರೀ=ಶ್ರೀ ; (iii) ಎಲ್ಲಾ ಮಹಾಪ್ರಾಣ ಚಿಹ್ನೆಗಳನ್ನೂ ಅಲ್ಪಪ್ರಾಣ ಚಿಹ್ನೆ ಗಳ ಹೊಕ್ಕುಳು ಸೀಳಿಯೆ ಮಾಡಿಕೊಳ್ಳುವುದು - ಭ ಭ ; ಭ:- ಭ. ಈ ಸಣ್ಣ ಮಾರ್ಪಾಟುಗಳನ್ನು ತಾಳ್ಮೆಯಿಂದಲೂ ದೂರದೃಷ್ಟಿಯಿಂದಲೂ ನೋಡಿ ಎಲ್ಲರೂ ಒಪ್ಪಿಕೊಂಡು ಆದಷ್ಟು ಬೇಗ ಬಳಕೆಗೆ ತಂದರೆ ಎಳೆಯ ಮಕ್ಕಳ ಹೊರೆ, ಅಚ್ಚು ಕೂಟಗಳ ತೊಡಕು ಅರ್ಧಕ್ಕರ್ಧ ಕಡಮೆಯಾಗುವುದೆಂದು ನಂಬಿದ್ದೇನೆ.