ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
(೪೦)
ಅಕಬರಬೀರಬಲ ಚಾತುರವಾದ ವಿನೋದಕಥೆಗಳು.
೩೧೨


ಒಳ್ಳೇದು, ಏನಾದರೂ ಹಂಚಿಕೆಯನ್ನು ಮಾಡಿ, ಮುಯ್ಯಕ್ಕೆ ಮುಯ್ಯತೀ ರಿಸಿದರಾಯಿತು ” ಎಂದು ನಿಶ್ಚಯಿಸಿಕೊಂಡು " ಮಹಾರಾಜ ! ನಾನು ಹೋಗುವದಕ್ಕೆ ಸಿದ್ಧನಿದ್ದೇನೆ, ನಾನು ಅಲ್ಲಿಗೆ ಹೋದಮೇಲೆ ನಿಮ್ಮ ಪಿತನು ನನ್ನನ್ನು ಅಲ್ಲಿ ಕೆಲವುದಿವಸ ಇಟ್ಟುಕೊಂಡರೆ ಇಲ್ಲಿ ನನ್ನ ಸತಿಸುತರ ಪರಾ ಮರ್ಷಯನ್ನು ತೆಗೆದುಕೊಳ್ಳುವರಾರು ! ನಾನುಬರುವವರೆಗೆ ಅವರ ಉವಜೀ ವನಾರ್ಥವಾಗಿ ತಮ್ಮಿಂದ ಒಂದು ಲಕ್ಷರೂಪಾಯಿಗಳು ದೊರೆತರೇ ನಾನು ಸ್ವಸ್ಥಚಿತ್ತನಾಗಿ ಹೋಗಿಬರುತ್ತೇನೆ, ಈ ದಿವಸವೇ ತಮ್ಮಿಂದ ಹಣದೊರೆ ದರೆ ಯಾವತ್ತು ವ್ಯವಸ್ಥೆಯನ್ನು ಮಾಡಬೇಕಾದರೆ ಒಂದು ಮಾಸದವಧಿ ಯು ಬೇಕಾಗುವದು ಆಮೇಲೆ ಹೊರಡಲು ಸಿದ್ಧನಾಗುತ್ತೇನೆ” ಎಂದನು. ಬೀರಬಲನು ನಿವೇದಿಸಿದ ಸಂಗತಿಗೆ ಬಾದಶಹನು ಸಮ್ಮತಿಸಿದನು ಆಮೇ ಲೆ ಬೀರಬಲನು ತನ್ನ ಮನೆಗೆ ಬಂದು ಸ್ಮಶಾನದಿಂದ ತನ್ನ ಗೃಹದವರೆಗೆ ಒಂ ದು ವಿವರವನ್ನು ಗುಪ್ತವಾಗಿ ರಚಿಸುವದಕ್ಕೆ ಆರಂಭಮಾಡಿದನು. ಆ ಕಾರ್ಯ ವು ಒಂದು ತಿಂಗಳಲ್ಲಿ ಸಂಪೂರ್ಣ ವಾಯಿತು, ಆಮೇಲೆ ಬಾದಶಹನ ಬಳಿಗೆ ಬಂದು ಆ ಖಾವಂದ ? ನನ್ನ ಗೃಹಕೃತ್ಯದ ಯಾವತ್ತೂ ತೊಂದರೆಗಳಿಂದ ನಿವೃತ್ತನಾಗಿದ್ದೇನೆ ” ಎಂದು ಹೇಳಿದನು. ಬಾದಶಹನು ತನ್ನ ಅನುಯಾ ಯಿಗಳನ್ನೆಲ್ಲ ಒಡಗೊಂಡು ಸ್ಮಶಾನಕ್ಕೆ ಹೊರಟನು, ಅದನ್ನು ಕಂಡು ಆ ನಾವಲಿಗನಿಗೆ ಹಿಡಿಸಲಾರದಷ್ಟು ಆನಂದವಾಯಿತು ಬೀರಬಲನು ವಿವರವಿದ್ದ ಸ್ಥಳದ ಮೇಲ್ಬಾಗದಲ್ಲಿ ಕುಳಿತುಕೊಂಡನು ಗೋಪುರಾಕೃತಿಯಾಗಿ ಉರುವ ಲಗಳನ್ನು ರಚಿಸಲು ಉದ್ಯುಕ್ತರಾಗಿ ಅರ್ಧಮರ್ಧ ರಚನೆಮಾಡುವದರೊಳ ಗಾಗಿ ಆ ವಿವರದೊಳಗಿಂದ ಪಾರಾಗಿ ತನ್ನ ಗೃಹಕ್ಕೆ ಬಂದು ಪ್ರಚ್ಛನ್ನ ವೇಷ ಧಾರಿಯಾಗಿ ಸ್ಮಶಾನಕ್ಕೆ ಬಂದು ಅಲ್ಲಿಯ ವರ್ತಮಾನವನ್ನು ನೋಡಹತ್ತಿ ದನು. ಉರುವಲ ರಚನೆಯು ನಮಾಪ್ತವಾದ ಕೂಡಲೆ ಬೆಂಕಿಯನ್ನು ಹೋ ತ್ತಿಸಿದರು, ಬುದ್ಧಿವಂತರಾದ ಹಿಂದುಗಳು ಬಾದಶಹನ ವಿವೇಕತನಕ್ಕೆ ದೂ ಷಿಸಲಾರಂಭಿಸಿದರು, ಬೀರಬಲನು ಮುಸಲ್ಮಾನರು ನೆರೆದಲ್ಲಿಗೆ ಹೋಗಿ, ಬಹಳೇ ನೆಟ್ಟಗಾಯಿತು ನಮ್ಮ ಧರ್ಮದ ವೈರಿಯೊಬ್ಬನು ನಾಶವಾದನು ಆ ಮಂತ್ರಿಪದವಿಯು ನಮ್ಮ ಮುಸಲ್ಮಾನಜಾತಿಯ ಮನುಷ್ಯನಿಗೇ ದೊರೆದರೆ ನಮ್ಮ ಆನಂದಕ್ಕೆ ಪಾರಾವಾರವೇ ಇಲ್ಲ ಎಂದುಹೇಳಿ, ಕಿಂಚಿತಮುಂದಕ್ಕೆ ಸಾಗಿದನು. ಅಲ್ಲಿ ಮತ್ತೊಂದು ಜನಸಮೂಹವು ಕೂಡಿತ್ತು ಆ ಸಮೂಹದ ಮಧ್ಯದಲ್ಲಿ ಕ್ಷೌರಕನು ನಿಂತುಕೊಂಡು ನನ್ನ ಬುದ್ಧಿ ಚಾತುರ್ಯದಿoದಲೇ ಬೀ ರಬಲನು ಇಹಲೋಕವನ್ನು ಬಿಟ್ಟು ತೆರಳಬೇಕಾಯಿತು, ಅಮೀರಖಾನ