ಪುಟ:ಅಜಿತ ಕುಮಾರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಾಸುಗಲ್ಲ ಬುಡದ ನಿಕ್ಷೇಪ.


ಬೆಳೆಯಲಾರದು. ಅದೊ, ಈ ಸಮುದ್ರದಾಚೆ ನೆಲವು ಕಾಣಿಸುತ್ತಿದೆ ಅಲ್ಲವೆ ?"

ಅಜಿತ-“ಹೌದು, ಅದು ಯವನ ದೇಶ. ಅಲ್ಲಿ ಯವನರು ವಾಸ ಮಾಡುತ್ತಾರೆ”.

ಆಗ ನೇತ್ರವತಿಯು "ಅದು ಬಹು ಫಲವತ್ತಾದ ದೇಶ ; ದಕ್ಷಿಣದಲ್ಲಿದೆ; ಅಲ್ಲಿ ಯಾವಾಗ ನೋಡಿದರೂ ವಸಂತಕಾಲವೆ! ಹೂಗಿಡಗಳು ಕಂಪಿನಿಂದಲೂ ಹಣ್ಣುಗಳಿಂದಲೂ ಸದಾಕಾಲವೂ ಶೋಭಿಸುತ್ತಿವೆ. ಬೆಟ್ಟಗಳಲ್ಲಿ ಅಂತೂ ಅಚ್ಚದಾದ ಅಮೃತಶಿಲೆಯ ಬೆಳ್ಳಿಯೂ ಹೇರಳವಾಗಿ ದೊರೆಯುತ್ತಿವೆ. ಅಲ್ಲಿ ಲೆಕ್ಕವಿಲ್ಲದ ನದಿಗಳನ್ನೂ ಕಾಲುವೆಗಳನ್ನೂ ಕಂಡರೆ ಸೋಜಿಗವಾಗುವುದು, ದೇವತೆಗಳ ವಾಸಸ್ಥಳ ! ಆ ದೇಶದಲ್ಲಿ ಹನ್ನೆರಡು ನಗರಗಳಿವೆ. ಮಹಾಶೇಷನ ವಂಶದವರು ಆ ರಾಜ್ಯವನ್ನು ಆಳುತ್ತಾರೆ. ಈಗ-ಅಜಿತ, ಅಜಿತ, ನೀನು ಆ ರಾಜ್ಯಕ್ಕೆ ಅರಸನಾದರೆ, ಏನು ಮಾಡುವೆ ? ಹೇಳು ನೋಡೋಣ ?” ಎಂದು ಕೇಳಿದಳು.

ಬೆರಗಾದ ಅಜಿತನಿಗೆ ಏನು ಹೇಳುವುದಕ್ಕೂ ತೋಚದು, ವಿಶಾಲವಾದ ಸಮುದ್ರವನ್ನೂ ಅದರ ಆಚೆಗಿರುವ ಪರ್ವತಶಿಖರಗಳನ್ನೂ ನೋಡುತ್ತ ನಿಂತುಕೊಂಡನು. ನೇತ್ರವತಿಯು ಪುನಃ ಅದೇ ಪ್ರಶ್ನೆಮಾಡಿದಳು.

ಆಗ ಅಜಿತನು ಉಲ್ಲಾಸದಿಂದ, “ನಾನು ಆ ರಾಜ್ಯಕ್ಕೆ ದೊರೆಯಾದರೆ ಜನಗಳನ್ನು ಬಲು ಚೆನ್ನಾಗಿ ಆಳುವೆನು ; ಸರಿಯಾದ ಮಾರ್ಗದಲ್ಲಿ ಯೇ ನನ್ನ ಬುದ್ಧಿಯನ್ನೂ ಬಲವನ್ನೂ ಉಪಯೋಗಿಸುವೆನು ; ಪ್ರಜೆಗಳನ್ನು ಅತ್ಯಂತ ಸುಖಿಗಳಾಗುವಂತೆ ಮಾಡುವೆನು; ನಾನು ಸತ್ತರೂ ನನ್ನ ಹೆಸರೊಂದು ಅವರ ತುದಿನಾಲಗೆಯ ಮೇಲೆ ತಪ್ಪಬಾರದು” ಎಂದು ಗಂಭೀರವಾಗಿ ಹೇಳಿದನು.

ಇದನ್ನು ಕೇಳಿ, ನೇತ್ರವತಿಯು ನಕ್ಕು, “ಹಾಗಾದರೆ ಈ ಕತ್ತಿಯನ್ನೂ ಈ ಹಾವುಗೆಗಳನ್ನೂ ತೆಗೆದುಕೊಂಡು, ಯವನ ದೇಶದ ದೊರೆ