ಪುಟ:ಅಜಿತ ಕುಮಾರ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜಿತ ಕುಮಾರ.

೧೧

ಹೋಗಲಾರದು, ಗೊತ್ತಾಯಿತೇ ? ಇಲ್ಲಿಯೇ ಕೆಳಗಡೆ ಜೇಡನ ಮನೆ ಇದೆ ಎಂಬುದು ನಿನಗೆ ತಿಳಿಯದೇ ? ಆ ಜೇಡನು ನಾನೇ ಎಂಬ ಅರಿವು ಹುಟ್ಟಲಿಲ್ಲವೇ ? ಈಚೆಗೆ ಬಾ, ನಿನ್ನ ಮೈಯಲ್ಲಿ ನೆತ್ತರು ಎಷ್ಟಿದೆ ಎಂದು ನೋಡಿಬಿಡುತ್ತೇನೆ. ಕಣ್ಣು ಬಿಡುವೆ ಏತಕ್ಕೆ ? ಇಲ್ಲಿಂದ ತಪ್ಪಿಸಿಕೊಂಡು ಹೋಗಲಾರೆ; ನಮ್ಮ ತಂದೆಯಾದ ಜಾಲೇಂದ್ರನು ಈ ಪರ್ವತಗಳಲ್ಲಿ ಇಂಥಾದ್ದೊಂದು ಬಲೆಯನ್ನು ನನಗೋಸ್ಕರವೇ ನಿರ್ಮಿಸಿರುವನು,” ಎಂದು ಹೇಳಿದನು.

ಅಜಿತನು ನಡುಗದೆ ಮುಂದಕ್ಕೆ ಬಂದು “ಎಲಾ, ಕೊಬ್ಬಿದ ಜೇಡನೇ, ನಿನ್ನ ಹೆಸರೇನು ? ನಿನ್ನ ಮುಳ್ಳುಗಳೆಲ್ಲಿವೆ ?” ಎಂದು ಕೇಳಿದನು.

ಆ ಪುರುಷನು ಗಟ್ಟಿಯಾಗಿ ನಗುತ್ತ “ನನ್ನ ಹೆಸರು ಜಾಲಭೀಮ; ಆದರೆ ಜನರೆಲ್ಲರೂ ನನ್ನನ್ನು ಗದಾಧರನೆಂದು ಕರೆಯುವರು. ನನ್ನ ಕೋರೆ ಹಲ್ಲುಗಳು, ಇದೊ, ಇಲ್ಲಿವೆ,” ಎಂದು ಹೇಳುತ್ತ ತನ್ನ ಪಕ್ಕದಲ್ಲಿದ್ದ ಬಲು ತೂಕವಾದ ಗದೆಯನ್ನು ಎತ್ತಿ, ಇದನ್ನು ನಮ್ಮ ಅಪ್ಪನು ತಾನೇ ಎರಕ ಹೊಯಿದು ನನಗೆ ಕೊಟ್ಟಿರುವನು. ಇದರಿಂದಲೇ ನಿನ್ನಂಥ ಸೊಕ್ಕಿದ ಹುಳುಗಳನ್ನು ಜಜ್ಜಿ, ಅವರ ಕೊಬ್ಬನ್ನೂ ಸವಿಯನ್ನೂ ಹಿಂಡಿಬಿಡುತ್ತೇನೆ. ಈಗ ನಿನ್ನ ಆ ಚೆಲು ಕತ್ತಿಯನ್ನೂ, ಸೊಗಸು ಅಂಗಿಯನ್ನೂ ಹೊನ್ನಾವುಗೆಗಳನ್ನೂ ಈಚೆಗೆ ಕೊಡು. ನಿನ್ನನ್ನು ಅರೆಯುವಾಗ ಎಲ್ಲಿಯಾದರೂ ದುರದೃಷ್ಟದಿಂದ ಬದುಕಿಬಿಡುವೆಯಷ್ಟೆ” ಎಂದು ಹೇಳಿದನು.

ತತ್‌ಕ್ಷಣವೇ ಅಜಿತನು ಅಂಗಿಯನ್ನು ತಟ್ಟನೆ ಕಳಚಿ ಹೆಗಲಿನಿಂದ ಮುಂಗೈಯ ತನಕ ಎಡತೋಳಿಗೆ ಸುತ್ತಿಕೊಂಡು, ಕತ್ತಿಯನ್ನು ಒರೆಯಿಂದ ಹಿರಿದು, ಆತನ ಮೇಲೆ ಜಿಗಿದನು. ಇಬ್ಬರೂ ಜಗಳಕ್ಕಾರಂಭಿಸಿದರು. ಗದಾಧರನು ಅಜಿತನನ್ನು ಮೂರು ಸಲ ಇಟ್ಟನು. ಎಡಗೈಯಲ್ಲಿ ಗುರಾಣಿಯಂಥ ಅಂಗಿ ಇಲ್ಲದಿದ್ದರೆ ಅಜಿತನ ತಲೆಯು ಒಡೆದು ಚೂರುಚೂರಾಗುತಿತ್ತು. ಅಜಿತನು ಅವನ ಏಟನ್ನು ತಪ್ಪಿಸಿಕೊಂಡು ಸಲಸಲವು ಎದ್ದು