ಪುಟ:ಅದ್ಭುತ ರಾಮಾಯಣ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ -* * ಶಿಷ್ಯನಾದ ನಿನಗೆ ಮಾತ್ರ ನಾನುಪದೇಶಿಸುವೆನು, ಜಾನಕಿಯು ಸೃ. ಗೆ ಮೂಲಭೂತಳು, ತಪಸ್ಸಿಗೆ ಸಿದ್ಧಿಯಂತೆಯ ಪಾತಿವ್ರತ್ಯಕ್ಕೆ ಮೂರ್ತಿಯಾಗಿಯೂ ಇರುವಳು, ಬ್ರಹ್ಮವಾದಿಗಳವಳನ್ನು ವಿದ್ಯೆಯೆಂ ದ ಅವಿದ್ಯೆಯೆಂದೂ ತಿಳಿಯುವರು, ಸೀತೆಯು ಗುಣಾತೀತಳಾಗಿ ಯೂ ಗುಣಾತ್ಮಕಳಾಗಿಯೂ ಇರುತ್ತಾಳೆ. ಈ ಚರಾಚರರೂಪವಾದ ಪ್ರಪಂಚವೆಲ್ಲವೂ ಅವಳ ವಿಲಾಸದಿಂದಲೇ ಉಂಟಾಗಿದೆ, ತತ್ರದರ್ಶಿಗ ೪ಾದ ಯೋಗಿಗಳು ನೀತಾಸಾಕ್ಷಾತ್ಕಾರದಿಂದಲೇ ತಮ್ಮ ಹೃದ್ರಂಥಿ ಯನ್ನು ವಿಘಟಿಸಿ ಮುಕ್ತರಾಗುವರು. ಆ ಸೀತೆಯು, ಧರಳುತಿ ಯುಂಟಾದಕಾಲದಲ್ಲಿ ಪ್ರಕೃತಿಸಂಭವಳಾಗೊಗೆದು, ಲೋಕವನ್ನು ರಿಸುವಳು. ರಾಮನು ಸಾಕ್ಷಾತ್ಪರಂಜ್ಯೋತಿಯಾಗಿಯೂ ಪರಮಪುರು ಪನಾಗಿಯ ಇರುವನು. ಸೀತಾರಾವರಿಗೆ ಆಕಾರದಲ್ಲಿ ಸ್ವಲ್ಪವೂ ಭೇದವೇ ಇಲ್ಲ. ರಾಮನೇ ಸೀತೆಯು, ಸೀತೆಯ ರಾಮಭದ್ರನು. ಅವರಿಬ್ಬರಿಗೂ ಅಣುಮಾತ್ರವೂ ಭೇದವಿಲ್ಲ. ಸತ್ಪುರುಷರು ಈ ತತ್ವವನ್ನು ತಿಳಿದು ಸಂಸಾರವನ್ನು ದಾಟಿ ಮೃತ್ಯುವಕ್ರದಿಂದ ಬಿಡುಗಡೆಯನ್ನು ಹೊಂದಿ ಮುಕ್ತರಾಗಿರುವರು. ರಾಮನು ಆಚಾರನಾಗಿಯೂ, ನಿತ್ಯನಾಗಿಯೂ, ಸರಸಾಕ್ಷಿಯಾಗಿಯೂ, ಸರಾಂತರಾಮಿಯಾಗಿಯೂ, ಸರಲೋಕ ಕರ್ತನಾಗಿಯೂ ಇರುವನು, ಆ ರಾಮಚಂದ್ರನು ಕಾಲಿಲ್ಲದೆ ನಡೆಯು ಬಲ್ಲನು, ಕೈಗಳಿಲ್ಲದೆ ಹಿಡಿಯಬಲ್ಲನು, ಕಣ್ಣುಗಳಲ್ಲದೆ ನೋಡಬಲ್ಲನು, ಕಿವಿಯಿಲ್ಲದೆ ಕೇಳಬಲ್ಲನು, ಅವನು ಪ್ರಪಂಚವನ್ನೆಲ್ಲಾ ತಿಳಿದಿರುವನು, ಅವನನ್ನು ತಿಳಿದವರು ಯಾರೂ ಇಲ್ಲ, ಆತನನ್ನು ಪುರಾಣಪುರುಷನೆಂದು ಹೇಳುವರು ಇಂತಪ್ಪ ಸೀತಾರಾಮ ಜನ್ಮವನ್ನೆತ್ತಲು ಹೇತುವನ್ನು ಹೇಳುವೆನು ಕೇಳು ? ರೂಪವಿಹೀನರಾದ ಅವರು ರೂಪವನ್ನೆತ್ತಿ ಮನು ಪರಿಗೆ ಅನುಗ್ರಹವನ್ನು ಮಾಡುವುದಕ್ಗಿ ಈರೀತಿ ವಿಲಾಸವುಳವ ರಾಗಿದ್ದಾರೆ, ಈ ರಾಮಾಯಣವನ್ನು ವಿಸ್ತರೋದಿದರೆ ನಾಬ್ಸೈಗಳಾಗು ವರು, ಕ್ಷತ್ರಿಯರೋದಿದರೆ ಚಕ್ರವರ್ತಿಗಳಾಗುವರು, ವೈಶರೋದಿದರೆ ಸುಕೃತಶಾಲಿಗಳಾಗುವರು, ಶೂದ್ರರೋದಿದರೆ ಪೂಜ್ಯರಾಗುವರು. ಮೊದಲನೆಯ ಅಧ್ಯಾಯವು ಮುಗಿದುದು,