ಪುಟ:ಅದ್ಭುತ ರಾಮಾಯಣ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ಕಥಾಸಾರವು. ಎರಡನೆಯ ಅಧ್ಯಾಯವು. ಎಲೆ ಭರದ್ವಾಜನೆ ! ಶ್ರೀಗಾಮಚಂದ್ರನು ಆಕ್ಷಕುಕುಲದಲ್ಲಿ ಹುಟ್ಟುವುದಕ್ಕೂ, ಮಹಾದೇವಿಯಾದ ಸೀತೆಯು ಭೂಮಿಯಲ್ಲಿ ಜನಿಸು ವುದಕ್ಕೂ ಕಾರಣವನ್ನು ಹೇಳುವೆನುಕೇಳು ? ಆದರೆ ಮೊದಲು ಶ್ರೀರಾ ಮನ ಕಥೆಯನ್ನು ಸಕ್ರಮಿಸ ವೆನು, ಅಂಬರೀಷನ ಉಪಾಖ್ಯಾನಕ್ಕಾ ಕರವಾದ ಪುರುಷೋತ್ತಮನ ಮಹಿಮೆಯು ಸರಪಾಪವನ್ನೂ ಹೋಗ ಲಾಡಿಸುವುದು, ಅಂಬರೀಷನ ತಾಯಿಯಾದ ತ್ರಿಶಂಕುವಿನ ಭಾರೇಯು ಸರಲಕ್ಷಣಸಂಪನ್ನೆಯಾಗಿಯೂ ಶೀಲವತಿಯಾಗಿಯೂ ಇರುತ್ತಿದ್ದಳು. ಆಕೆಯ, ಯೋಗನಿದ್ರೆಯನ್ನು ಹೊಂದಿ ಶೇಷಪಂಕದಲ್ಲಿ ಪವಡಿಸಿದ್ದ ಸರದೇವನಮಸ್ಕೃತನಾದ ನಾರಾಯಣನನ್ನು ತಮೋಗುಣದಿಂದ ಕಾಲ ರುದ್ರನೆಂದೂ, ರಜೋಗುಣದಿಂದ ಬ್ರಹ್ಮನೆಂದೂ, ಸತ್ವಗುಣದಿಂದ ವಿಷ್ಣು ವೆಂದೂ ತಿಳಿದು ಮನೋವಾಕ್ಕಾಯಗಳಿಂದರ್ಚಿಸುತ್ತಿದ್ದಳು, ಹೂವಿನ ಮಾಲೆಗಳನ್ನು ತಾನೇಕಟ್ಟಿ ದೇವರಿಗೊಪ್ಪಿಸುತ್ತಿದ್ದಳು. ಗಂಧವನ್ನು ತೆಗೆಯುವುದೂ, ಧೂಪದ್ರವ್ಯಗಳನ್ನರೆಯುವದೂ ಮುಂತಾದ ಕೆಲಸವನ್ನು ತಾನೇ ಮಾಡುತ್ತಿದ್ದಳು. ಆ ಪದ್ಮಾವತಿ ಯು, “ನಾರಾಯಣ ಅನಂತು? ಎಂದು ನುಡಿಯುತ್ತ ಹತ್ತು ಸಾವಿರ ವರ್ಷಗಳು ತದ್ದ ತವಾದ ಮನಸ್ಸು ಳವಳಾಗಿ ಗೋವಿಂದನನ್ನು ಗಂಧಪುವಾದಿಗಳಿಂದ ಪೂಜಿಸುತಿದಳು. ವಿಷ್ಣುಭಕ್ತರಾಗಿಯೂ ಪಾಸವರ್ಜಿತರಾಗಿಯೂ ಇದ್ದ ಮಹಾನುಭಾ ವರಿಗೆ ಧನಧಾನ್ಸರಾದಿಗಳನ್ನಿತ್ತು ಅವರನ್ನು ಸಂತೋಷಪಡಿಸುತ್ತಿದ್ದಳು. ಒಮ್ಮೆಯಾಪದ್ಮಾವತೀದೇವಿಯು ದ್ವಾದಶಿಯ ದಿವಸ ಉಪವಾಸವನ್ನು ಮಾಡಿ, ಪತಿಯೊಡನೆ ಹರಿಯಮುಂದೆ ಪವಡಿಸಿರಲು, ಆಗ ಪುರುಷೋತ್ತ ಮನು ಸ್ವಪ್ನದಲ್ಲಿ ಬಂದು-ಎಲ್‌ ಸ್ತ್ರೀಯೆ ! ನನ್ನಿಂದ ನಿನಗಾಗಬೇ ಕಾದುದೇನು ? ಹೇಳು ?” ಎಂದು ಪ್ರಶ್ನೆ ಮಾಡಿದನು. ಅದಕ್ಕವಳು“ಎಲೈ ಸ್ವವಿಯೆ ! ನಿನ್ನಲ್ಲಿ ಭಕ್ತಿಯುಳ್ಳವನಾಗಿಯೂ, ಚಕ್ರವರ್ತಿಯಾ 'ಗಿಯ, ಸರಕರ ನಿರತನಾಗಿಯೂ ಶುಚಿಯಾಗಿಯೂ ಇರುವ ನುಗನೊ ಬ್ಬನನ್ನು ಕೊಡು ?” ಎಂದು ಬೇಡಿಕೊಂಡಳು. ನಾರಾಯಣನು ಹಾಗೆಯೇ