ಪುಟ:ಅದ್ಭುತ ರಾಮಾಯಣ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ಆಗಲೆಂದು ಆಕೆಗೊಂದು ಫಲವನ್ನು ಕೊಟ್ಟನು, ಆಕೆಯು ಎಚ್ಚ ಇಮೇಲೂ ಫಲವನ್ನು ನೋಡಿ ಪತಿಗೆ ಸಂಗತಿಯೆಲ್ಲವನ್ನೂ ಬಿ ಸಿ ಆ ಹಣ್ಣನ್ನು ತಿಂದಳು, ಕೆಲವು ಕಾಲಕಳೆದಮೇಲೆ ಆಕೆಯು ವಾಸುದೇವನ ಅನುರಕ್ತನಾಗಿರುವ ಯೋಗ್ಯನಾದ ಮಗನೊಬ್ಬನನ್ನು ಪಡೆದಳು. ಆ ತ್ರಿಶಂಕುರಾಜನು ಮಗನು ಹುಟ್ಟಿದನು ಎಂದು ಕೇಳಿ, ಸಂತೋಷವನ್ನು ತಾಳಿ, ಆ ಮಗನಿಗೆ ಜಾತಕರಾದಿ ಸಂಸ್ಕಾರವನ್ನು ಬ್ರಾಹ್ಮಣರಿಂದ ಮಾಡಿಸಿ ಅಂಬರೀಪನೆಂದು ಹೆಸರಿಟ್ಟನು. ಕಾಲಕ್ರಮೇಣ ಆ ಮಗನು ಬೆಳೆಯುತ್ತ ಬರಲಾಗಿ ಅವನ ತಂದೆ ಯು ದೇವೆಂದ್ರನೋಲಗದ ಚಾವಡಿಯನ್ನೇರಿದನು. ತರುವಾಯ ಪುರದ ಪ್ರಮುಖರೆಲ್ಲರೂ ಸೇರಿ ಆ ಬಾಲಕನಿಗೆ ಪಟ್ಟಗಟ್ಟಿದರು. ಆ ಅಂಬರೀ ಪನು ಮಂತ್ರಿಗಳವಶಕ್ಕೆ ರಾಜ್ಯಾಧಿಪತ್ಯವನ್ನೊಪ್ಪಿಸಿ, ತಾನು ತಪಸ್ಸು ಮಾ ಡಲುಪಕ್ರಮಿಸಿ,ಹೃತ್ಪುಂಡರೀಕ ಮಧ್ಯಸ್ಥನಾಗಿಯೂ, ಸೂರೈಮಂಡಲಮ ಈವರ್ತಿಯಾಗಿಯೂ ಶಂಖ ಚಕ್ರ ಗದಾಪದ್ಮಗಳನ್ನು ನಾಲ್ಕು ಭುಜದಲ್ಲಿ ಯೂ, ಧರಿಸಿಕೊಂಡು, ಶುದ್ಧವಾದ ಅಪರಂಜಿಯಂತೆ ಪ್ರಕಾಶಿಸುವವನಾ ಗಿಯೂ, ಬ್ರಹ್ಮ ವಿಷ್ಣು ಶಿವಾತ್ಮಕನಾಗಿಯೂ, ಪೀತಾಂಬರಧಾರಿಯಾಗಿ ಯೂ ಶ್ರೀವತ್ಸವಕ್ಷನಾಗಿಯ ಆರುವ ಪುರುಷೋತ್ತಮನಾದ ವಿಷ್ಣು ವನ್ನು ಧ್ಯಾನಮಾಡುತ್ತಿದ್ದು, ಬಳಿಕ ಭಕ್ಕನುಗಹತತ್ಪರನಾದ ವಿಷ್ಣುವು ಗರುಡಾರೂಢನಾಗಿ ಸರದೇವತೆಗಳಿಂದಲೂ ಹೊಗಳಿಸಿಕೊ ಳುತ್ತ ಬಂದು ಭಕ್ತ ಮನೋಭಾವವನ್ನು ಭಾವಿಸಲೆಳಸಿ ತನ್ನ ವಾಹನ ವಾದ ಗರುಡನನ್ನು ಐರಾವತವನ್ನಾಗಿ ಮಾಡಿ, ತಾನು ಇಂದ್ರನಾಗಿ ಅದರ ಮೇಲೆ ಕುಳಿತುಕೊಂಡು, ರಾಯನ ಸಮಿಾಪವನ್ನೆ ದಿ._ಎಲೈ ರಾ ಚೇಂದ್ರನೆ ! ಅಂದ್ರನಾದ ನಾನು ಬಂದಿರುವೆನು ನಿನಗೇನು ಬೇಕು ? “ಎಲೈ ಚಕ್ರವರ್ತಿಯ ! ನಿನ್ನನ್ನು ಕಾಪಾಡಲು ಸಿದ್ಧನಾಗಿರುವೆನು ಎಂದು ನುಡಿದನು, ಅದಕ್ಕೆ ಅಂಬರೀಷನು._ಎಲೆ ಇಂದ್ರನೇ! ನಾನು ವಿಷ್ಣುಭಕ್ತಯುಕ್ತನಾಗಿರುವೆನು, ನಿನ್ನನ್ನು ಕುರಿತು ತಪಸ್ಸು ಮಾಡಿದವ ನಲ್ಲ, ನೀನು ಕೊಡುವ ವರವನ್ನು ನಾನು ಒಪ್ಪುವನೂ ಅಲ್ಲ, ನಿನ್ನನ್ನು ನಾನು ಮೆಚ್ಚಿಸಿದವನೂ ಅಲ್ಲ ; ನೀನು ಬಂದ ದಾರಿಯನ್ನು ಹಿಡಿದು