ಪುಟ:ಅದ್ಭುತ ರಾಮಾಯಣ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ • ++ * • tv• vwww tvvvvv ಚಿತ್ರವಿಚಿತ್ರವಾಗಿ ಅಲಂಕರಿಸಿದರು, ಸ್ತ್ರೀಯರು ತಮ್ಮ ತಮ್ಮ ಮನೆ ಯಬಾಗಿಲುಗಳಲ್ಲಿ ರಂಗವಲ್ಲಿಗಳಿಂದ ಹಸೆಗಳನ್ನು ಬರೆದು ರಮ್ಯವ ಗಿರುವಂತೆ ಅಲಂಕರಿಸಿದರು. ದಿವ್ಯವಾದ ರೂಪಗಳು ಕೇರಿಕೇರಿಗಳ ಲ್ಲಿಯೂ ಘಮಘಮಿಸುತ್ತಿದ್ದುವು, ರಾಜಸಭೆಯನ್ನು ಚಿತ್ರವಿಚಿತ್ರ ವಾದ ನಿರ್ಮಾಣಕ್ಕಲ್ಯದಿಂದ ಮನೋಹರವಾಗಿ ಅಲಂಕರಿಸಿದರು. ಬಹು ಬೆಲೆಯುಳ್ಳ ರತ್ನಗಂಬಳಗಳಿಂದ ಸಭಾಸ್ಥಾನದ ನೆಲವನ್ನೆಲ್ಲಾ ಮು ಚ್ಚಿದರು. ಅವುಗಳಮೇಲೆ ಭದ್ರಾಸನಗಳು ಕಂಗೊಳಿಸುತ್ತಿದ್ದವು. ಆ ಸಭೆಗೆ ನಾನಾ ದೇಶಗಳಿಂದಲೂ ರಾಜಕುಮಾರರು ಬಂದು ಭದ್ರಪೀಠಗಳಲ್ಲಿ ಮೆರೆಯುತ್ತಿದ್ದರು. ಶ್ರೀಮತಿಎಂಬ ರಾಜಕುಮಾರಿಯು ಸಾಭರಣ ಭೂಷಿತಳಾಗಿ ಸಾಕ್ಷಾತ್ಕ್ಷೆ ಯಂತ ಪ್ರಕಾಶಿಸುತ್ತ ಬಂದು ಆ ಸಭಾ ಮಂದಿರವನ್ನು ಪ್ರವೇಶಿಸಿದಳು, ಆ ಬಾಲೆಯ ಬಡನಡು ಹಿಡಿಯಲ್ಲಿ ಹಿ ಡಿಯುವಪ್ಪಿದ್ದು ದರಿಂದ ಬಳಕುತ್ತಿತ್ತು, ಅವಳ ಪಕ್ಕದಲ್ಲಿ ಗೆಳತಿಯರ ಲ್ಲರೂ ಬಂದು ಸೇರಿದರು. ರಾಜಸಭೆಯು ಸೊಗಸಾದ ಮೇಲುಕಟ್ಟುಗ ಳಿಂದಲೂ ರತ್ನಗಳಿಂದಲೂ ಅಲಂಕೃತವಾಗಿ ಪರಿಮಳವನ್ನು ದಿಕ್ಕುದಿಕ್ಕಿ ನಲ್ಲಿಯೂ ಎರಡುತ್ತಿತ್ತು. ಆ ಸಮಯಕ್ಕೆ ಸರಿಯಾಗಿ ದೇವಮುನಿಯಾದ ನಾರದನೂ, ಪೂಜ್ಯನಾದ ಪರೈತನೂ ಬಂದು ನೆರೆದರು. ಮೂರನೆಯ ಅಧ್ಯಾಯವ ಮುಗಿದುದು. → ನಾಲ್ಕನೆಯ ಅಧ್ಯಾಯವು. ತರುವಾಯ ರಾಜನು ಪಕ್ವತನಾರದರು ಬಂದುದನ್ನು ನೋಡಿ ಸಂಭ್ರಾಂತನಾಗಿ ಪೀಠವನ್ನು ತೋರಿಸಿ ಅವರಿಗೆ ಸತ್ಕಾರಮಾಡಿದನು. ನಿತ್ಯಜ್ಞಾನಿಗಳೊಳಗೆ ಶ್ರೇಷ್ಠರಾದ ಆ ಮುನಿಗಳಿಬ್ಬರೂ ಕನ್ಯಾರ್ಥಿಗಳಾಗಿ ಸಿಂಹಪೀಠವನ್ನಲಂಕರಿಸಿದರು. ಆಗ ಶ್ರೀಮತಿಯು ಬಂದು, ಆ ಮುನಿ ಗಳಡಿದಾವರೆಗೆರಗಿ ನಿಂತಿದ್ದಳು, ಅಂಬರೀವನು-“ ಎಲೌ ಮಗಳ ! ಇವರಿಬ್ಬರಲ್ಲಿ ನೀನಾರನ್ನು ಮೆಚ್ಚುವದೋ ಅವನಿಗೆ ಯಥಾವಿಧಿಯಾಗಿ ಪುಷ್ಪಮಾಲೆಯನು ಹಾಕು ” ಎಂದು ತನ್ನ ಮಗಳಿಗೆ ಹೇಳಿದನು.