ಪುಟ:ಅದ್ಭುತ ರಾಮಾಯಣ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾಥಂಡ ರಾಯನಾಡಿದ ನುಡಿಯನ್ನು ಕೇಳಿ ಅ ಕನ್ನಯು ಮಾಲೆಯೊಂದನ್ನು ಬೇಗ ತರಿಸಿ ತನ್ನ ಕೈಯಲ್ಲಿ ಹಿಡಿದುಕೊಂಡು ಸುಮ್ಮನೆ ನಿಂತಿದ್ದಳು, ಅದನ್ನು ನೋಡಿ ರಾಜನು ಎಲ್ ವತ್ಸೆ ! ಏಕೆ ಸುಮ್ಮನಿರುವ, ಇವರಲ್ಲಾರಾದ ರೊಬ್ಬರಿಗೆ ಮಾಲೆಯನ್ನು ಹಾಕು, ಸಾವಕಾರವೇಕ ? ಎಂದು ನುಡಿ ದನು. ಆ ಮಾತನ್ನು ಕೇಳಿ ಆ ಬಾಲಕಿಯು ಗಡಗಡನೆ ನಡುಗುತ್ತ ತನ್ನ ತಂದೆಯೊಡನೆ ಎಲೈ ತಂದೆಯೆ ! ಇವರಲ್ಲೊಬ್ಬನಮುಖವು ಕಪಿಯ ಮುಖದಹಾಗೆ ಇದೆ, ಮತ್ತೊಬ್ಬನದು ಕರಡಿಯ ಮುಖದಹಾಗಿರುವುದು ಇವರಿಬ್ಬರೂ ಪೂಜ್ಯರಾದ ಪದ್ವತನಾರದರಂತೆ ಕಾಣುವುದಿಲ್ಲ, ಇವರಿ ಬ್ಬರ ನಡುವೆ ಹದಿನಾರುವರುಷದ ಹುಡುಗನೊಬ್ಬನು ಕಂಗೊಳಿಸುತ್ತಿರು ವೆನು. ಅವನು ಸರ್ವಾಭರಣಭೂಷಿತನಾಗಿಯೂ, ಆಗಸರು ಹೂವಿನಂತ ಶರೀರಕಾಂತಿಯುಳ್ಳವನಾಗಿಯೂ ಇರುವನು, ಅವನ ಬಾಹುಗಳು ದೂ ಣಕಾಲವರೆಗೂ ಚಾಚಿಕೊಂಡಿರುವುವ ಕಣ್ಣುಗಳು ಕಿವಿಯವರೆಗೂ ಪ್ರಸರಿಸಿರುವವ, ಎದೆಯು ವಿಶಾಲವಾಗಿರುವುದು, ಕೈಗಳು ಕಮಲ ಗಳಂತೆಯೂ, ಮುಖವು ತಾವರೆಯಂತೆಯೂ, ನೇತ್ರಗಳು ಇಂದೀವರ ಗಳಂತೆಯ ಪ್ರಕಾಶಿಸುವುವು, ಪಾದಗಳು ಪದ್ಯಗಳನ್ನಲೆಗಳಯುತ್ತಿ ರುವುವು, ನಾಭಿಯಲ್ಲಿ ಪದ್ಮ ವಿರುವುದು, ಲಕ್ಷ್ಮಿ ಯು ಎಡೆಬಿಡದೆ ಆ ಪು ರುಪನನ್ನು ವ್ಯಾಪಿಸಿಕೊಂಡಿರುವಳು, ಹಲ್ಲುಗಳು ಸಾಲುಮಲ್ಲಿಗೆಯ ಮೊ ಗ್ಲು ಗಳನ್ನು ಹಳಿಯುತ್ತಿರುವವು ಆ ಪುರುಷನು ನನ್ನನ್ನು ನೋಡಿ ತನ್ನ ಬಲಗೈಯನ್ನು ಮುಂದಕ್ಕೆ ಚಾಚಿಕೊಂಡು ಪ್ರಚ್ಛನ್ನನಾಗಿರುವನು, ಎಂದು ಹೇಳಿದಳು. - ಅದನ್ನು ಕೇಳಿ ನಾರದನು ಸಂಕಯಾವಿಶ್ಯನಾಗಿ ಎಲ್' ಬಾಲೆ ! ಆ ಪುರುಷನಿಗೆ ಬಾಹುಗಳಿರುವುವು ? ನಿಜವಾಗಿಯೂ ಹೇಳು, ಎಂದು ಪ್ರಶ್ನೆ ಮಾಡಿದನು. ಆ ಕನ್ನಿಕೆಯು ವಿಸ್ಮಿತಳಾಗಿ ಎರಡು ಬಾ ಹುಗಳು ಮಾತ್ರ ಕಾಣುವುವು ಎಂದುತ್ತರಕೊಟ್ಟಳು, ಆಮೇಲೆ ಪಕ್ವತನು ಅವನ ವಕ್ಷಸ್ಥಲದಲ್ಲಿರುವದೇನು, ಕೈಯಲ್ಲಿ ಏನನ್ನು ಹಿಡಿದಿರುವನು ? ಹೇಳು ಎಂದು ಕನ್ನಿಕೆಯನ್ನು ಕೇಳಿದನು. ಆ ಹುಡುಗಿಯು ಮುನಿ ದೊಡನೆ ಎಲೆ ಪೂಜ್ಯನೆ! ಆ ಪುರುಷನೆದೆಯಲ್ಲಿ ಮಿಂಚಿನಂತ ಮೀಲುಗುವ