ಪುಟ:ಅದ್ಭುತ ರಾಮಾಯಣ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ Nh ಮಾಲೆಯೊಂದು ಕಣ್ಣಿಗೆ ಕಾಣುತ್ತದೆ, ಕೈಯ್ಯಲ್ಲಿ ಗದೆಯನ್ನು ಹಿಡಿದಿರು ವನು; ಎಂದು ಬಿನ್ನೈಸಿದಳು, ಅನಂತರ ಈ ಮಾತನ್ನು ಕೇಳಿ ಆ ಮುನಿಗಳು ಅಂತರಂಗದಲ್ಲಿಯೇ ಚಿಂತಿಸತೊಡಗಿದರು. ನಾರದನು ಇದು ಯಾರದೋ ಮಾಯೆಯಾಗಿರಬೇಕು, ವಿಷ್ಣುವೇ ಮಾಯಾವಿ ಯಾಗಿ ಕಳ್ಳತನದಿಂದ ಬಂದಿರಬೇಕು, ಹಾಗಲ್ಲದಿದ್ದರೆ ನನ್ನ ಮುಖವು ಕರಡಿಯ ಮುಖದ ಹಾಗೆ ಕಾಣಲು ಕಾರಣವೇನು ?"ಎಂದು ಮನಸ್ಸಿನ ಲ್ಲಿಯೇ ಚಿಂತಿಸುತ್ತಿದ್ದನು, ನಾರದನ ಮುಖವು ಹಾಗೆ ಕಾಣುವುದೇನೋ ಯುಕ್ತ, ನನ್ನ ಮುಖವು ವಾನರ ಮುಖದ ಹಾಗೆ ಹೇಗೆ ಆಯಿತಂದು ಪರ್ವತನು ಬಹಳವಾಗಿ ಯೋಚಿಸುತ್ತಿದ್ದನು. ತರುವಾಯ ರಾಜನು ಆ ಮುನಿವರರಿಗೆ ಮಣಿದು, ಎಲೆ ಪೂಜ್ಯರಿಗೆ! ನೀವು ಕನ್ಯಾರ್ಥಿಗಳಾಗಿ ಬಂದಿದ್ದ ರೂ ಬುದ್ದಿ ವೈಕಲ್ಯದಿಂದ ಏಕೆ ಸುಮ್ಮನೆ ಕುಳಿತಿರುವಿರಿ ಎಂ ದು ಕೇಳಿಕೊಂಡನು. ಅದಕ್ಕವರು- “ನೀನೇ ನಮಗೆ ವೈಕಲ್ಯವ ನ್ನುಂಟುಮಾಡಿರಬೇಕೇ ವಿನಾ ನಾವು ಬೇರೆ ಎಂದಿಗೂ ವೈಕಲ್ಯವನ್ಮ, ದಲಾರವು, ನಮ್ಮಿಬ್ಬರಲ್ಲಿ ಯಾರನ್ನಾದರೂ ಈ ಬಾಲೆಯು ವರಿಸಬ ಹುದು” ಎಂದು ರಾಯನ ಸಂಗಡ ಹೇಳಿದರು. ಆಮೇಲಾಕನೆಯು ದೈವವನ್ನು ನೆನೆದು, ತಂದೆಯ ಅನುಮತಿಯ ನ್ನು ಮೀರಲಾಗದೆಂದೂ, ಮುನಿಗಳು ಶಾಪಕೊಟ್ಟಾರಂದೂ ಹೆದರಿ ಆ ಮಾಲೆಯನ್ನು ಕೈಗೆ ತಗೆದುಕೊಂಡು, ಮುನಿಗಳಿಗೆ ಹಾಕಲು ಮುಂದಕ್ಕೆ ಡಿಯನ್ನಿಟ್ಟು ಆ ಮುನಿಗಳ ಮಧ್ಯೆ ಮೊದಲಿನಂತೆ ಇದ್ದ ಪುರುಷನನನ್ನು ನೋಡಿ ಅವನ ಕಂಠಕ್ಕ ಮಾಲೆಯನ್ನು ಹಾಕಿದಳು. ತರುವಾಯ ಆ ಬಾಲೆಯು ಅಲ್ಲಿರುವ ಜನಗಳ ದೃಷ್ಟಿಗೆ ಗೋಚರಳಾಗಲೇ ಇಲ್ಲ. ಅಲ್ಲಿದ್ದವರೆಲ್ಲರೂ “ಇದೇನಾಶ್ಚಯ್ಯ” ಎಂದು ಕಲಕಲ ಶಬ್ದ ಮಾಡಕೂಡಗಿ ದರು. ಆ ಬಾಲೆಯನ್ನು ಕರೆದುಕೊಂಡು ಹರಿಯು ತನ್ನ ಸ್ಥಾನಕ್ಕೆ ಶರ ಳಿದನು, ಆ ರಾಜಪುತ್ರಿಯು ಪರಮಾತ್ಮನನ್ನ ಪತಿಯಾಗಿ ಪಡೆಯಬೇ ಕಂದು ತಪಸ್ಸು ಮಾಡಿದ್ದಳಾದುದರಿಂದ ಅವಳು ಹರಿಯನ್ನೇ ಮದುವೆ ಯಾದಳು, ಆಮೇಲೆ ಆ ಮುನಿಗಳಿಬ್ಬರೂ ಖಿನ್ನರಾಗಿ ವಾಸುದೇವನ ನ್ನು ನೋಡಲು ಹರಿಲೋಕಕ್ಕೆ ಹೊರಟು ಹೋದರು, ಇವರು ಬಂದ