ವಿಷಯಕ್ಕೆ ಹೋಗು

ಪುಟ:ಅದ್ಭುತ ರಾಮಾಯಣ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೪

ವಿದ್ಯಾನಂದ

ಷೀಕೇಶ! ಪದ್ಮನಾಭ ! ಜನಾರ್ದನ ! ಪುಂಡರೀಕಾಕ್ಷ! ನೀನು ನಮಗೊಡೆಯನಾಗಿರುವೆ ಕಾಪಾಡು! ಕಾಪಾಡು! ಎಂದು ಮೊರೆಹೊಕ್ಕರು.ಆಮೇಲೆ ನಾರಾಯಣನು ಭಕ್ತರನ್ನು ಕಾಡಲು ಕತ್ತಲೆಯನ್ನೂ ಚಕ್ರವನ್ನೂ ತಡೆದುಕೊಂಡು, ಆಂಬರೀಷನು ಹೇಗೆ ನನಗೆ ಮುಖ್ಯ ಭಕ್ತನೋ ಹಾಗೆಯೇ ಈ ಮುನಿಗಳೂ ಭಕ್ತರಾಗಿದ್ದಾರೆ, ರಾಜನಿಗೆ ಹಿತವಾಗುವಂತ ಇವರಿಬ್ಬರಿಗೂ ಹಿತವನ್ನುಂಟುಮಾಡಬೇಕೆಂದೆಳಸಿ ಆ ಮುನಿಗಳಿಬ್ಬರನ್ನೂ ಬರಮಾಡಿಕೊಂಡು ಮಾತಿನಿಂದವರನ್ನು ಬೆರಗು ಮಾಡುತ್ತ ಎಲೈ ಮುನಿಗಳೇ ! ನನ್ನ ಮಾತನ್ನು ಸ್ವಲ್ಪ ಲಾಲಿಸಿ ? ನನಗಾಗಿಯೇ ನೀವು ನನ್ನ ಭಕ್ತನನ್ನು ಕಾಪಾಡಬೇಕು. ಈ ಚಕ್ರವು ಅಪರಾಧಿಯಾಗಿರುವುದು. ಸಾಧುಗಳು ಯಾವಾಗಲೂ ಕ್ಷಮಾಶೀಲರಾದುದರಿಂದ ಇದನ್ನು ಮನ್ನಿಸಬೇಕು, ಎಂದು ಕೇಳಿಕೊಂಡನು.

ತರುವಾಯ ಆ ಮುನಿಗಳು ಅದೆಲ್ಲವೂ ವಿಷ್ಣುವಿನ ಮಾಯೆಯೆಂದು ತಿಳಿದು, ಅವನ ಮೇಲೆ ಸಿಟ್ಟು ಮಾಡಿಕೊಂಡು ಎಲೈ ಮಧುಸೂಧನನೆ! ನೀನು ಮೋಸಮಾಡಿ ಶ್ರೀಮತಿಯನ್ನು ಯಾವ ಆಕಾರದಿಂದ ಬಂದು ಅಪಹರಿಸಿದೆಯೋ ಅದೇ ಆಕಾರದಿಂದಲೇ ಅಂಬರೀಷನ ವಂಶೀಯನಾದ ದಶರಥನಲ್ಲಿ ಜನಿಸು ? ಶ್ರೀಮತಿಯು ಭೂಪುತ್ರಿಯಾಗಿ ಜನಿಸಲಿ, ಅವಳನ್ನು ವಿದೇಹರಾಜನು ಕೈ ಕೊಂಡು, ಕಾಪಾಡುವನು, ಆಗಿ ನೀಚನಾದ ರಾಕ್ಷಸನೊಬ್ಬನು ಲೋಕಕಂಟಕನಾಗಿ ಹುಟ್ಟುವನು. ನೀನು ಶ್ರೀಮತಿಯನ್ನು ರಾಕ್ಷಸಧರ್ಮದಿಂದ ಅಪಹರಿಸಿದಂತೆ ನಿನ್ನ ಹೆಂಡತಿಯಾದ ಸೀತೆಯನ್ನು ರಾಕ್ಷಸನು ಗುಟ್ಟಾಗಿ ಅಪಹರಿಸುವನು.ನಾವು ಶ್ರೀಮತಿಗಾಗಿ ಹೇಗೆ ದುಗುಡವನ್ನು ತಾಳಿದೆವೋ ಹಾಗೆಯೇ ನೀನೂ ದುಃಖ ವನ್ನು ಅನುಭವಿಸು. ಎಂದು ನಾರಾಯಣನಿಗೆ ಶಾಪವನ್ನಿತ್ತರು.

ನಾರಾಯಣನು--(ಅದನ್ನು ಕೇಳಿ) ಅಂಬರೀಷನ ವಂಶದಲ್ಲಿ ಶ್ರೀ ಮಂತನಾಗಿಯೂ ಧಾರ್ಮಿಕನಾಗಿಯೂ ಇರುವ ದಶರಥಮಹಾರಾಯನು ಜನಿಸುವನಷ್ಟೆ ? ಅವನಿಗೆ ನಾನು ರಾಮನೆಂಬ ಹೆಸರಿನಿಂದ ದೊಡ್ಡಪ್ಪಗನಾಗಿ ಜನ್ಮವನ್ನೆತ್ತುವೆನು. ಅಲ್ಲಿ ನನಗೆ ದಕ್ಷಿಣಬಾಹುವಾಗಿ ಭರತನೂ ನಾಮಬಾಹುವಾಗಿ ಶತ್ರುಘ್ಹ್ನನೂ ಜನಿಸಲಿ, ಆದಿಶೇಷನು ಲಕ್ಷ್ಮಣನಾಗಿ