ಅದ್ಭುತ ರಾಮಯಣ ( \r 3w Y* * * * • • • • • • ಜನಿಸಲಿ, ಎಲೆ ಚಕ್ರವೇ ಮುನಿದವು ಅನ್ಯಥಾ ಆಗತಕ್ಕುದಲ್ಲ, ಹೋ ಗು ಮುನಿಶಾಪದಿಂದ ಬಂದ ತಮೋರಾಕಿದೆ, ನಾನು ರಾಮನಾದಾಗ ನೀನು ನನ್ನಲ್ಲಿಗೆ ಬಾ, ಈಗ ರಾಜನನ್ನು ಬಿಟ್ಟು ತೊಲಗು ! ಎಲ್ಕೆ ಮುನಿಗಳ ನಿಮ್ಮನ್ನೂ ಬಿಟ್ಟು ಹೋಗಲಿ, ಎಂದು ಹೇಳಿದನು. ಹೀಗೆ ಹೇ. ಳುತ್ತಲೇ ಆ ತಮಸ್ಸು ನಾಶವಾಯಿತು. ಭಕ್ತರಕಣನಾದ ನಾರಾಯಣ ನ ಆತ್ಮಾರ್ಥವಾದ ಚಕ್ರವು ಮೊದಲಿದ್ದಂತೆಯೇ ಇದ್ದಿತು, ಮುನಿಶ್ರೀ ಸ್ಥರು ಭಯವನ್ನು ಕಳೆದುಕೊಂಡು ಗೋವಿಂದನಿಗೆ ವಂದನೆಯನ್ನು ಗೈದು ಶೋಕದಿಂದ ತೃಪ್ತರಾಗಿ ಹೊರಟುಹೋಗುತ್ತ ಒಬ್ಬರಿಗೊಬ್ಬರು ಇನ್ನುಮೇಲೆ ನಾವು ಕನ್ಯಾಪರಿಗ್ರಹವನ್ನೆಂದಿಗೂ ಮಾಡಬಾರದು, ಎಂದು ಪ್ರತಿಜ್ಞೆ ಮಾಡಿಕೊಂಡು ಧ್ಯಾನಪರರಾಗಿ ಪೂವ್ವದಂತ ನಿಯಮದಲ್ಲಿದ್ದರು, ಆ ಅಂಬರೀಷರಾಜನು ಭೂಮಿಯನ್ನು ಪಾಲಿಸಿ ನೃತ್ಯ ಜ್ಞಾತಿಗಳೊಡನೆ ವಿಷ್ಣುಲೋಕದಲ್ಲಿ ವಾಸವಾಗಿದ್ದನು, ಅಂಬರೀಷನಿಗೂ ಆ ದೇವಮುನಿ ಗಳಿಬ್ಬರಿಗೂ ಗೌರವವುಂಟಾಗಲು ರಾಮನು ದಶರಥಪುತ್ರನಾಗಿ ಜನಿಸಿ ತಮಸ್ಸಿನಿಂದ ಲುಪ್ತವಾದ ಬುದ್ಧಿಯುಳ್ಳವನಾದನು. ಒಮ್ಮೊಮ್ಮೆ ಈ ರವಶದಿಂದ ಆತ್ಮಸ್ಕೃತಿಯೂ ಉಂಟಾಗುತ್ತಿತ್ತು, ಮಹಾಬಾಹುವಾ ದ ಶ್ರೀರಾಮನು ಪರಿಪೂರ್ಣಕಾಮನಾದರೂ ಅಪೂರ್ಣ ಕಾಮನಂತ ನಟಿಸುತ್ತಿದ್ದನು, ಪ್ರಭುಗಳ ಈ ವರ್ತನವು ಭಕ್ತಾನುಗ್ರಹಾರ್ಥವಲ್ಲದೆ ಬೇರೆಯಲ್ಲ. ಮಾಯೆಯನ್ನು ಮಾಡಿದುದರಿಂದ ಪರಮೇಶ್ವರನು ಮನ ಏಜನ್ಮವನ್ನೆತ್ತಬೇಕಾಯಿತು, ಆದಕಾರಣ ವಿದ್ವಾಂಸರು ರೋಷವ ನ್ನು ತಿಳಿದು ಮಾಯೆಯನ್ನು ಮಾಡಬಾರದು, ಎಲೆ ಮುನಿಯ | ಈ ರೀತಿಯಾಗಿ ರಾಮನ ಜನ್ಮಕ್ಕೆ ಕಾರಣವನ್ನು ಅಂಬರೀಷನ ಮಹಾತ್ಮ ಯನ್ನೂ ಹರಿಯ ಮಾಯೆಯನ್ನೂ ನಿನಗೆ ತಿಳಿಸಿರುವನು, ಆರಾದರೂ ಈ ಹರಿಯ ಮಾಯಾವಿತ್ವವನ್ನು ಕೇಳಿದರೂ ಸರಿಯೇ ಓದಿದರೂ ಸರಿ ಯೇ ಅವರು ಮಾಯಾರಹಿತರಾಗಿ ವಿಷ್ಣುಲೋಕವನ್ನೆ ದುವರು. ಅಲ್ಲದೆ ರಾಮನ ಜನ್ಮವನ್ನು ಯಾರು ಭಕ್ತಿಯಿಂದ ಕೇಳುತ್ತಾರೋ ಅಥವಾ ಪಠಿ ಸುತ್ತಾರೋ ಅವರೆಂದಿಗೂ ಯಮನಿಗೆ ಭಯಪಡಬೇಕಾದುದಿಲ್ಲ, ಅವರು ಪರಮೇಶ್ವರನ ಗೃಹಕ್ಕೆ ಅತಿಥಿಗಳಾಗುವರು, ನಾಲ್ಕನೆಯ ಅಧ್ಯಾಯವು ಮುಗಿದುದು,
ಪುಟ:ಅದ್ಭುತ ರಾಮಾಯಣ.djvu/೨೩
ಗೋಚರ