ಪುಟ:ಅದ್ಭುತ ರಾಮಾಯಣ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ವಿದ್ಯಾನಂದ ತುಂಬುರನುಮಾತ್ರ ಹೊಂದಿದನು, ನನ್ನ ಬಾಳಿಗೆ ಅದೂ ಇಲ್ಲದೆ ಹೋ ಯಿತು, ದೂತರು ನನ್ನನ್ನು ಹೊಡೆದು ದೂರವಾಗಿ ನಿಲ್ಲಿಸಿದರು. ನಾನು ಜೀವಿಸಿಕೊಂಡು ಇಲ್ಲಿರುವದು ಸರಿಯಲ್ಲ.ಎಲ್ಲಿಗಾದರೂ ಹೋಗುವೆನು.ತುಂ ಬರನಿಂದ ನನಗಾಗಬೇಕಾದುದೇನು? ಎಂದು ರೋದಿಸುತ್ತ ವಿಶೇಷವಾಗಿ ಚಿಂತಿಸುತ್ತಿದ್ದನು. ನಾರಾಯಣನು ದಾರುಣವಾದ ಲಕ್ಷ್ಮಿಯ ತಾಪವನ್ನು ಕೇಳಿ ಅವಳೊಡವೆರದು ನಾರದನಿದ್ದೆಡೆಗೆ ಬಂದನು. ರಮೆಯು ಆ ವಿಪ್ರ ನನ್ನು ಪ್ರಸನ್ನನಾಗುವಂತೆ ಮಾಡಿ ಅಂಜಲಿಬಿದ್ದಳಾಗಿ “ಎಲೈ ಮುನಿದೆ ! ನೀನು ನನ್ನ ವಿಷಯದಲ್ಲಿಟ್ಟ ಶಾಪವು ಅನ್ಯಥಾ ಆಗಲಾರದು ; ಆದರೆ ಅದ ರಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕೇಳಿಕೊಳ್ಳುವೆನು, ಅದರಂತೆ ದಯಮಾಡಿ ನಡೆಯಿಸಿಕೊಡು ; ಅರಣ್ಯದಲ್ಲಿರುವ ಮುನಿರಕ್ತದಿಂದ ಪೂರಿತವಾದ ಕಲಶ ದಲ್ಲಿನ ರಕ್ತವನ್ನು ಯಾವ ರಾಕ್ಷಸಿದು ಕಾಮವಕಳಾಗಿ ಕುಡಿಯುವಳೋ ಅವಳ ಗರ್ಭದಲ್ಲಿ ಆ ರಕ್ತದಿಂದ ಜನಿಸುವೆನು, ಇಪ್ರಕಾರ ಅನುಗ್ರಹಿಸು? ಎಂದು ಬೇಡಿಕೊಂಡಳು. ಅದನ್ನು ಕೇಳಿ ಇದು ಸಂಭವ ವಾಗತಕ್ಕದ್ದಲ್ಲವೆಂದು ಮನಸ್ಸಿನಲ್ಲಿ ಅಂದುಕೊಂಡು ನಾರದನು ಹಾಗೆಯೇ ಆಗಲೆಂದು ಆಕೆಯು ವಾರುಣವಾದ ಪ್ರಾರ್ಥನೆಯನನುಮೋದಿಸಿದನು. ಬಳಿಕಲಾ ನಾರಾಯಣನು -- ನಾರದರೊಡನೆ- ಮುನಿಯೇ ? ಕೇಳು ನಾನು ಗಾನದಿಂದ ನನ್ನ ಹೆಸರ ನ್ನು ಕೀರ್ತಿಸುವವರಿಗೆ ಪ್ರಸನ್ನನಾಗುವಷ್ಟು ನಾನಿಗಳಿಗೂ ತಪಸ್ವಿ ಗಳಿಗೂ, ಯಾಗಶೀಲರಿಗೂ, ತೀರ್ಥ ಯಾತ್ರಿಕರಿಗೂ, ಪ್ರಸನ್ನನಾಗಲಾರೆ ನು, ದಾನದ ಮೂಲಕ ನನ್ನ ನಾಮಸ್ಮರಣೆ ಗೈದವನು ನನ್ನ ಸಾಯು ಜ್ಯವನ್ನು ಹೊಂದುವನು, ಈ ವಿಷಯದಲ್ಲಿ ಕೌಶಿಕನೇ ಸಾಕ್ಷಿಯು, ೬ ವನು, ಗಾನದಿಂದ ನನ್ನ ನಾಮಸ್ಮರಣೆಮಾಡಿ ನನ್ನ ಲೋಕದಲ್ಲಿರುವನು. ಮೂರ್ಛನಾಕ್ರಮದಿಂದ ಕೂಡಿದ ನನ್ನ ನಾಮಕೀರ್ತನೆಯು ನನಗೆ ಪರ ಮ ಪ್ರಿಯವಾಗಿರುವುದು, ತುಂಬುರನು ಆ ಪ್ರಭಾವದಿಂದಲೇ ನಿನಗಿ೦ ತಲೂ ನನಗೆ ಪ್ರಿಯನಾಗಿರುವನು. ನೀನು ಅವನಂತೆ ಆಗಬೇಕಾದರೆ ಮೂರ್ಛನಾಕಾಲ ಲೋಗದಿಂದಲೂ ಗಾನದಿಂದಲೂ ಅವನಿಗೆ ಸಮನಾಗ ಬೇಕು, ಗಾನಯೋಗದಲ್ಲಿ ನಿನಗೆ ಅಭಿರುಚಿಯಿದ್ದರೆ ಉಲೂಕನನ್ನು ಹೋ