ಪುಟ:ಅದ್ಭುತ ರಾಮಾಯಣ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sಳಿ ವಿದ್ಯಾನಂದ ಇತರ Tಾನವು ಒಂದು ಕಲಾ ಮಾತ್ರವಾದರೂ ಹೋಲಲಾರದಲ್ಲ. ನನ್ನ ಗಾನವು ವಿಶೇಷವಾಗಿ ವಿಷ್ಣುವಿನ ಮಹಿಮೆಯಿಂದಲೇ ತುಂಬಿರು ಪದು. ಆದರೂ ನನಗೆ ಬೇರೆ ಸನ್ಮಾನ ದೊರೆಯಲಿಲ್ಲವೆಂದು ಜಿಲ್ಲಾ ಪಾಪ ಪಡುತ್ತಿದ್ದೆನು. :-ಗಿರುವುದನ್ನು ನೋಡಿ ಮಹಾವಿಷ್ಣುವು ಎಳ್ಳೆ ದೇರ್ವಯೇ ? ನೀನು ಉಲೂಕರಾಜನ ಹತ್ತಿರಕ್ಕೆ ಗಣಿ ? ಅಲ್ಲಿ ಗಾನ ವಿದ್ಯೆಯು ನಿನಗೆ ಚನ್ನಾಗಿ ಪ್ರಾಪ್ತವಾಗುವುದು' ಎಂದು ಹೇಳ' ನನ್ನನ್ನು ನಿನ್ನ ಸವಿಾಪಕ್ಕೆ ಕಳುಹಿಸಿರುವನು. ನೀನು ಏನು ಮಾಡುವೆ ಮಾಡು ? ನಾನು ನಿನಗೆ ಶಿಷ್ಯನಾಗಿರುವೆನು, ನನ್ನನ್ನು ಉದ್ಧರಿಸು, ಎಂದು ಬೆಸಗೊಂಡನು. ಮಹಾ ಯಶಸ್ವಿಯಾದ Tತಿನ ಬಂಧವು ನಾರದನೊಡನೆ- ಎಳ್ಳಿ ಪೂಜ್ಯನೆ : ಕೇಳು ? ನನ್ನ ಪೂರ್ವ ವೃತ್ತಾಂತವನ್ನು ಹೇಳುವೆನು. ಅದು ಬಹಳ ಆಶ್ಚರ್ಯಯುಕ್ತವಾಗಿಯೂ ಪಾಪವನ್ನು ಪರಿಹರಿಸುವುದಾಗಿಯೂ ಇರುವದು, ಬಹುಕಾಲದ ಸಿಎಂಗೆ ಭುವನೇಶನ೦ಬ ಪ್ರಸಿದ್ಧವಾದ ರಾಜ ನೊಬ್ಬನು ಧರ್ಮದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು. ಅವನು ಸಾವಿರಾರು ಅಶ್ವಮೇಧ ಯಾಗಗಳನ್ನೂ ಅನೇಕವಾಗಿ ವಾಜಪೇಯು ಮೊದ ಲಾದುವುಗಳನ್ನೂ ಮಾಡಿದ್ದನಲ್ಲದೆ ಇನ್ನೂ ವಿಧವಿಧವಾದ ಯಜ್ಞಗಳಲ್ಲಿ ದಕ್ಷಿಣಾದಿಗಳನ್ನು ಕೊಟ್ಟು ಬ್ರಾಹ್ಮಣರನ್ನು ಬಹಳವಾಗಿ ತೃಪ್ತಿಗೊಳಿಸಿ ದ್ರನು, ಅಸಂಖ್ಯಾತವಾದ ಗೋದಾನ, ಸುವರ್ಣದಾನ ಕನ್ಯಾದಾನ, ವಸ್ತ್ರ. ದಾನ ಗಜವಾನ ಅಶ್ವದಾನ ಮೊದಲಾದ ದಾನಗಳೆಲ್ಲವನ್ನೂ ಮಾಡಿ ದ್ದನು. ಇಸ್ಮಿದ್ದರೂ ಆ ರಾಯನು ತನ್ನ ದೇಶದಲ್ಲಿ ಗಾನವಿದ್ಯೆಯಿಂದ ಹರಿಯನ್ನು ಖಂಡಿತವಾಗಿಯೂ ಸ್ತುತಿಸಕೂಡದೆಂದೂ, ದೇವತಾಂತರ ವನ್ನು ಬೇಕಾದರೆ ಗಾನಮಾಡಬಹುದೆಂದೂ ಇದಕ್ಕೆ ತಪ್ಪಿದವನು ಶಿಕ್ಷಾ ರ್ಹನಾಗುವನಂದೂ ಕಟ್ಟು ಮಾಡಿದ್ದನು. ಆ ಪರಮಪುರುಷನಾದ ವಿಷ್ಣುವನ್ನು ಮಾತ್ರ ವೇದಗಳಿಂದ ಸು ತಿಸಬೇಕಲ್ಲದೆ ಮತ್ತಾವುದರಿಂದಲೂ ಹೊಗಳಕೂಡದು, ಉತ್ತಮವಾದ ವೇದಾಧ್ಯಯನವನ್ನು ಮಾಡಿದ ಬ್ರಾಹ್ಮಣನು ಗಾನವಿದ್ಯೆಯನ್ನು ಕಲಿಯ ಬಾರದು : ಗಾನಯೋಗದಿಂದ ನನ್ನನ್ನು ಹೆಂಗಸರು ವಿಶೇಷವಾಗಿ