ಪುಟ:ಅದ್ಭುತ ರಾಮಾಯಣ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ವಿದ್ಯಾನಂದ ವಯದಕಾರಣ ಆಗ ನಿನಗೆ ಆ ವಿಷ್ಣುವಿನಸಯುಜ್ಯವು ದೊರಕುವುದು. ಎಲೈ! ಮಹಾಪ್ರಜ್ಞನೆ! ನಿನಗೆ ಪರಮಮಂಗಳವಾಗಲಿ ! ನನ್ನಲ್ಲಿ ಪ್ರಸನ್ನ ನಾಗು? ಗಮನಾನುಜ್ಞೆಯನ್ನು ಕೊಡು? ನಾನುಹೊರಡುವನು” ಎಂದು ಹೇಳಿ ಅಲ್ಲಿಂದ ತುಂಬುರನನ್ನ ಗೆಲ್ಲಬೇಕೆಂದು' ಪಯಣಮಾಡಿದನು. ತರುವಾಯ ತುಂಬುರನ ಮನೆಯನ್ನು ಕುರಿತುಹೋಗುತ್ತಾ ನಾರ ದನು ಅವನ ಮನೆಯಸವಿಾಪದಲ್ಲಿ ವಿಕಾರವಾದ ಆಕಾರಗಳನ್ನು ಹೊಂದಿದ್ದ ಕೆಲವುಮಂದಿ ಪುರುಷರು ಇವನದೃಷ್ಟಿಗೆ ಗೋಚರರಾದ ರು, ಅವರಲ್ಲಿ ಕೆಲವರಿಗೆ ತೋಳಿರಲಿಲ್ಲ, ಕೆಲವರಿಗೆ ಕಾಲಿರಲಿಲ್ಲ. ಕೆಲವ ರಿಗೆ ತಡೆಗಳಿರಲಿಲ್ಲ. ಮೂಗಿಲ್ಲದೆ ಕೆಲವರಿದ್ದರು ಕೆಲವರಿಗೆ ಎವೆಯೇ ಇರಲಿಲ್ಲ, ಇನ್ನೂ ಕೆಲವರಿಗೆ ಕಣ್ಣುಗಳು ಹೊಗಿದ್ದುವು, ಕೆಲವರು ತಲೆಗಳಿಲ್ಲದೆಯೂ ಬೆಟ್ಟುಗಳಿಲ್ಲದೆಯೂ, ಕಾಣುತ್ತಿದ್ದರು, ಕೆಲವರ ಶರೀರ ವು ಭಿನ್ನವಾಗಿ ಗಾಯವನ್ನು ಹೊಂದಿತ್ತು, ಇಂಥವರು ಅಲ್ಲಿ ಸಾವಿರಾ ರಾರು ಮಂದಿ ಸೇರಿದ್ದರು. ಅವರನ್ನೆಲ್ಲ ನೋಡಿ ನಾರದನು ಎಳ್ಳ ನೀವಾರು ? ನಿನಗೀ ಯಂಗವಿಕಾರವೇಕಾಯಿತು” ಹೇಳಿರಿ? ಎಂದು ಕೇಳಿ ದನು. ಅದಕ್ಕವರೆಲ್ಲರೂಸೇರಿ ನಾರದನೊಡನೆ ಎಳ್ಳಮುನಿಯೇ ನಿನ್ನಿಂದ ನಮ್ಮ ಅಂಗಗಳೆಲ್ಲವೂ ನೀನವಾಗಿ ಹೋದುವು. ನಾವು ಕಳವು ಮ೦೧ ರಾಗಗಳು ಕೆಲವರು ರಾಗಿನಿಯರು, ನೀನು ಭಿನ್ನಸಂಧಿಯಾಗಿ) ಗಾನಮಾಡಿದುದರಿಂದ ನಮ್ಮಂಗಗಳಲ್ಲವೂ ಈಪ್ರಕಾರ ಕುಂಠಿತಗni ಮೋದವ, ಪುನಃ ತುಂಬುರಗಾನದಿಂದ ಜೀವಿಸುವವೆಂದಿಲ್ಲಿಗೆ ಬಂದೆವು. ತುಂಬುರನು ನಮ್ಮನ್ನು ಬದುಕುವಂತ ಮಾಡುವನು. ನಿನ್ನಿಂb ೮೦r ವೈಕಲ್ಯವು ನಮಗುಂಟಾಯಿತು. " ಎಂದು ಹೇಳಿದನು.

  • ಆ ಆಶ್ಚರ್ಯವನ್ನು ಕಂಡು ನಾರದನು “ ಅಯ್ಯೋ ! ನನ್ನ ಬಾಳಿ ಗಿಷ್ಟು ಬೆಂಕಿಹಾಕಿದರು. ” ಎಂದು ಅಂದುಕೊಂಡು ಜನಾರ್ದನನನ್ನು ಕಾಣುವುದಕ್ಕೆ ಬಂದನು. ಶ್ವೇತದ್ವೀಪ ನಿವಾಸಿಯಾದ ಹರಿಯು ನಾರದ ನನ್ನು ನೋಡಿ ಅವನೊಡನೆ “ ಎಲೆ ಮುನಿದು ? ಗಾನಬಂಧುವಿನಲ್ಲಿ ನೀನು ಚೆನ್ನಾಗಿ ಗವವಿದ್ಯಾಪಾರಂಗತನಾಗಲಿಲ್ಲ. Acಗಿರುವಾಗ ನೀನು ತುಂಬುರನಿಗೆ ಸಮಾನನು ಹೇಗೆ ಆಗುವೆ? ವ್ಯವಸ್ವತಮನುವಿನ ೨ನೆಯ