ಪುಟ:ಅದ್ಭುತ ರಾಮಾಯಣ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಮಾಯಣ mM೧೧ NApr tfy / / phhh/ \\\r\ Avoidh Nh \\\n/vbhwhohnsy ಸಂತೋಷದಿಂದ ನರ್ತಿಸಿ ನುತಿಸಿದನು, ಅದನ್ನು ಕಂಡು ಹೃಷೀಕೇಶನವ ನೊಡನೆ- ಎಲೈ ಮುನಿಯೆ ! ನೀನು ಸ್ವರಜ್ಞಾನದಲ್ಲಿ ಕುಶಲನೂ, ಪ್ರಾಜ್ಞ ನೂ ಅಗಿರುವೆ ; ಪ್ರಾಚೀರ್ನಾನಯೋಗದಿಂದ ನನ್ನ ಸಮಾಜದಲ್ಲಿಯೇ ನೀನು ಗಾನಮಾಡು ! ನಿನ್ನ ಕೋರಿಕೆಯಂತೆ -ಲ್ಲವೂಸಫಲವಾಗಿ ನೆರವೇ ರಿದುವು. ನನ್ನಲೋಕದಲ್ಲಿ ನಿತ್ಯವೂ ತುಂಬುರನೊಡನೆ ಕೂಡಿ ನ ಮಾಡುತ್ತಿರು ? -Sಂದು ನುಡಿದನು. ಅದನ್ನು ಕೇಳಿ ಮುನಿಯು ಶಾಸ್ತ್ರ ರೀತ್ಯಾ ಾನ ವಿದ್ಯಾಪಾರವನ್ನು ಹೊಂದಿ ಲೋಕವನ್ನೆಲ್ಲಾ ಸಂಚರಿಸುತ್ತಾ ವಿಷ್ಣುವನ್ನು ಪೂಜಿಸುವಂತೆಯೇ ಲೋಕನಾಯಕನಾದ ಶಂಕರನನ್ನೂ ಪೂಜಿಸುತ್ತಿದ್ದನು. ಹರಿಯ ನಿಯೋಗದಿಂದ ಶಂಕರಾಲಯಕ್ಕೆ ಹೋಗಿ ಗಾನಮಾಡುತ್ತಿದ್ದುದಲ್ಲದೆ, ರುಕ್ಕಿಣಿ, ಸತ್ಯಭಾಮೆ, ಜಾಂಬವತಿ ಇವರ ಮನೆಗೆ ಹೋಗಿ ನಮಾಡುತ್ತಿದ್ದನು; ಮತ್ತು ಶ್ರೀಕೃಷ್ಣನ ಜೊತೆಯಲ್ಲಿ ಯೂ ಗಾನ ಮಾಡುತ್ತಿದ್ದನು. ಹೀಗೆ ನಾರದನು ಶ್ರುತಿಜಾತಿ ವಿಶಾರದನಾಗಿ ನಲಿಯುತ್ತ ಬ್ರಹ್ಮಾನಂ ದವನ್ನು ಹೊಂದುತ್ತಿದ್ದನು. ಎಲೆ ಭರದ್ವಾಜನೆ : ಕೇಳು ? ನಿನಗೆ ನ ಕ್ರಮವನ್ನು ತಿಳಿಸಿದುವಾಯ್ತು, ಬ್ರಾಹ್ಮಣನು ವಾಸುದೇವಪರನಾಗಿ ದಿನವೂ ಗಾನ ಮಾಡುತ್ತಿದ್ದರೆ ಹರಿಯ ಸಾಯುಜ್ಯವನ್ನು ಪಡೆಯುವನು. ಅವನಿಗೆ ಸಮಸ್ತ ಯಜ್ಞಫಲಗಳೂ ಕರಗತಗಳಾಗುವುವು, ಹರಿಯನ್ನುಳಿದು ದೇವ ತಾಂತರವನ್ನು ಗಾನ ಮಾಡಿದರೆ ನರಕಭಾಗಿಯಾಗುವನು, ಮನೋವಾ ಕ್ಯಾಯಕರಗಳಿಂದ ವಾಸುದೇವಪರನಾಗಿದ್ದು ಕೊಂಡು ಗಾನಮಾಡುತ್ತ ಆ ನವನ್ನು ಕೇಳುತ್ತಾ ಇದ್ದುದರಿಂದ ಪ್ರಿಯಂವದನೆಂಬುವನೊಬ್ಬನು ಶ್ರೇಸನಾದ ಗಂಧರನಾದನು. ಎಳ್ಳ ಶಿಷ್ಯನ : ನಿನಗೆ ಜಾನಕೀಜನ್ಮದೇ ತುವನ್ನು ತಿಳಿಸುವನೆಪದಿಂದ ಸಂಗೀತ ವಿಚಾರವನ್ನು ತಿಳಿಸಿದುದಾಯಿತು. ಈ ವಿಚಾರವು ಮನಃಕಲ್ಮಷವನ್ನು ನಿತ್ಯಸವಾಗಿ ಘೋಷಿಸಿ ಉತ್ತಮವಾಧ ಗತಿಯನ್ನು ಕೊಡುವುದು. ಏಳನೆಯ ಅಧ್ಯಾಯವು ಮುಗಿದುದು. -0+