ಪುಟ:ಅದ್ಭುತ ರಾಮಾಯಣ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ Y). A ~ hn onA• • • ಐದು ಮಂದಿ ಮಂತ್ರಿಗಳಡನೆ ಅವಿತುಕೊಂಡಿದ್ದ ಸುಗ್ರೀವನು, ಚಾಪ, ಇತಾಣ, ಮೊದಲಾದುವುಗಳನ್ನು ಕಡಿದುಕೊಂಡು, ಆಕಾಶವನ್ನು ನುಂ ಗುವ ಹಾಗೆ ಬರುತ್ತಿದ್ದ ರಾಮ ಲಕ್ಷ್ಮಣರನ್ನು ನೋಡಿ, ಒಳ್ಳೆಯ ಅಸ್ತ್ರ ಗಳನ್ನು ಹಿಡಿದಿರುವುದರಿಂದ “ ಇವರು ವಾಲಿಯ ಕಡೆಯವರಿರಬಹುದು ? ಎಂದು ತಿಳಿದು ಆಂಜನೇಯನನ್ನು ಸನ್ಯಾಸಿ ವೇಗದಿಂದ ಅವರ ಹತ್ತಿರ ಕ್ಕೆ ಕಳುಹಿಸಿದನು. ಆ ಹನುಮಂತನು ರಾಮಲಕ್ಷ್ಮಣರನ್ನು ನೋಡಿ “ ನೀವಾರೆಂದು ಕೇಳಲು, ರಾಮನು ಚತುರ್ಬಾಹುವವನಾಗಿಯೂ, ಶಂಖ ಚಕ್ರ ಗದಾ ಪಾಣಿಯಾಗಿಯೂ, ಪೀತವಾಸನಾಗಿಯೂ, ಲಕ್ಷ್ಮಿ ಸ ರಸ್ವತಿಯರಿಂದಾಶ್ರಯಿಸಲ್ಪಟ್ಟ ಉಭಯ ಪಾರ್ಶ್ವಗಳುಳ್ಳವನಾಗಿಯೂ, ದೇವರ್ಷಿ ಗಂಧರ್ವರಿಂದ ಸೇವಿಸಲ್ಪಟ್ಟವನಾಗಿಯೂ, ಸಹಸ್ರ ಸೂಲ್ಯ ರಂತ ಪ್ರಕಾಶಿಸುತ್ತಲೂ, ಅನೇಕ scದ್ರರಂತ ಮುಕಾಂತಿಯುಳ್ಳ ವನಾಗಿಯೂ, ಸರ್ಪಗಳ ಹಡೆಗಳೆಂಬ ಕೊಡೆಗಳು'ವನಾಗಿಯೂ, ಆಗಿ ತಾನು ಹನುಮಂತನಿಗೆ ದರ್ಶನವನ್ನಿತ್ತನು. ಆ ರೂಪವನ್ನಾಂಜನೇಯನು ನೋಡಿ, ಇದೇನಂದಾಶ್ಚರ್ಯಯ ಕನಾಗಿ, ನೇತ್ರವನ್ನು ಮುಚ್ಚಿಕೊಂಡು, ಆ ಆಶ್ಚರ್ಯವನ್ನು ನನದು ಸ್ತು ತಿಸಿ ನಮಿಸಿ ರಾಮನೊಡನೆ ಎಲೈ ! ನಾನು ಸುಗ್ರೀವನ ಸಚಿವನು; ನನ್ನಿ ಹೆಸರು ಹನುಮಂತನು; ನೀವಾರೆಂದು ತಿಳಿಯಲು ಸುಗ್ರೀವನು ನಮ್ಮ ನ್ನು ನಿಮ್ಮ ಹತ್ತಿರಕ್ಕೆ ಕಳುಹಿಸಿದನು. ಆದುದರಿಂದಿಲ್ಲಿಗೆ ಬಂದೆನು. ನೀವಿಬ್ಬರೂ ದ್ವಿಭುಜಗಳಲ್ಲಿ ಖಡ್ಗವನ್ನು ಧರಿಸಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ, ನಾನು ಬಂದಾಗ ಮತ್ತೊಂದು ವಿಧವಾಗಿ ಕಾಣಿ ದಿರಿ ? ನೀವಾರು ? ಹೇಳಬೇಕು!! ಎಂದು ಬಹಳವಾಗಿ ಬೇಡಿದನು. ಹೀಗೆ ಪ್ರಸ್ತನಾಗಿ ನಡುಗುತ್ತಿದ್ದ ಆಂಜನೇಯಸಿಗೆ ಶ್ರೀರಾಮನಭಯ ವನ್ನು ಕೊಟ್ಟು ತನ್ನ ವರ್ತಮಾನವನ್ನು ತಿಳಿಸತೊಡಗಿದನು. ಹತ್ತನೆಯ ಅಧ್ಯಾಯವು ಮುಗಿದುದು. -0-