ಪುಟ:ಅದ್ಭುತ ರಾಮಾಯಣ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ವಿದ್ಯಾನಂದ Awww wwwwvwwMwwwWwwwMwwwwMMMMMwww ಕ್ಯೋರಗ ಯಕ್ಷ ಸಿದ್ದಸಾಧರೂ ಭೂತಗಳೂ ರಾಕ್ಷಸರೂ ಪಿಶಾಚಗಳೂ ನನ್ನನುಜ್ಞೆಯನ್ನು ವಹಿಸಿರುವುವು. ಕಲೆ, ಕಾವ್ಯ, ನಿಮೇಷ - ಮುಹೂರ್ತ - ದಿವಸ ಕ್ಷಣಗಳೂ, ಯ ತು, ಅಬ್ದ ,ಮಾಸ, ಪಕ್ಷಗಳೂ ಯುಗಮನ್ನಂತರಗಳೂ ಪರಾಪರಕಾಲಭೇ ದಗಳೂ ನನ್ನಿಂದಲೇ ನಡೆಯುತ್ತಿರುವುವು, ಸ್ಥಾವರ ಜಂಗಮರೂಪವಾದ ಚತುರ್ವಿಧ ಪ್ರಾಣಿಗಳೂ (ಜರಾಯುಜ - ಸ್ವದಜ - ಉಧಿ ಜ್ವ - ಖನಿಜ) ಸ್ವಯಂಭುವನಾದ ನನ್ನ ಮಾತಿನಂತೆ ನಡೆಯುತ್ತಿರುವುವು. ನಗರ, ಭು ವನ, ಬ್ರಹ್ಮಾಂಡಗಳಲ್ಲವೂ ಪರಮಾತ್ಮನಾದ ನನಗೆ ಅಧೀನಗಳಾಗಿವೆ. ನನ್ನನುಜ್ಞೆಯಿಂದ ಅನೇಕ ಬ್ರಹ್ಮಾಂಡಗಳು ಆಗಿಹೋದುವು. ಅನೇಕ ಬ್ರಂಹ್ಮಾಂಡಗಳು ಜನಿಸಿದುವು. ಪಂಚಭೂತಗಳೂ ಮನಸ್ಸು ಬುದ್ದಿ ಮೊ ದಲಾದುವೂ ನನ್ನ ನಿಯೋಗದಂತ ನಡೆಯುತ್ತಿರುವುವು, ಸಕಲಜಗತ್ತನ್ನೂ ಮೋಹಗೊಳಿಸುವ ಮಾಯೆಯೂ ನನ್ನಾಜ್ಞೆಯಿಂದ ಪ್ರವೃತ್ತವಾಗಿರುವು ದು, ಆ ಮಾಯೆಯನ್ನುಳಿದು ಮೋಹವನ್ನು ತ್ಯಜಿಸಿದವರು ಸಚ್ಚಿದಾನಂ ದ ಬ್ರಹ್ಮಪದವನ್ನು ಸಾರುವರು. ಮಾಯೆಯನ್ನು ನಿವಾರಿಸುವ ವಿದ್ಯೆ ಯೂ ನನ್ನಿಂದಲೇ ನಿನ್ನಿತವಾಗಿರುವುದು, ಬಹಳವಾಗಿ ಹೇಳಿದರೆ ಪ್ರ ಯೋಜನವೇನು ? ಈ ಪ್ರಪಂಚವೆಲ್ಲವೂ ನನ್ನ ಶಕ್ತಿಗೆ ವಕವಾಗಿರುವುದು. ನನ್ನಿಂದಲೇ ಪ್ರಪಂಚವೆಲ್ಲವೂ ಪೂರ್ಣವಾಗಿ ಕೊನೆಗೆ ನನ್ನಲ್ಲಿಯೇ ಲೀನ ವಾಗಿರುವುದು, ನಾನು ಈಶ್ವರನು, ಸಡ್ಡು ತ್ವರಯುಕ್ತನು. ಸನಾತ ನನು, ಪರಮಾತ್ಮನು, ಪರಬ್ರಹ್ಮನು. ನನಗಿಂತಲೂ ಬೇರೆಯಾದುದು ಯಾವುದೂ ಇಲ್ಲ, ಈ ಪರಮಜ್ಞಾನವನ್ನು ನಿನಗುಪದೇಶಿಸಿರುವನು. ಇದನ್ನು ಬಲ್ಲವರು ಸಂಸಾರ ಬಂಧನದಿಂದ ಬಿಡುಗಡೆಯಾಗುವರು, ನಾ ನು ಮಾಯೆಯನ್ನು ಹೊಂದಿ ದಶರಥನ ಮನೆಯಲ್ಲಿ ರಾಮಲಕ್ಷಣ ಭರ ತಕತ್ರ ರೂಪದಿಂದ ಅವತರಿಸಿರುವನು. ಎಲೈ ಅಂಜನೇಯನೆ ! ನನ್ನ ಸ್ವರೂಪವನ್ನು ನಿನಗೆ ವಿವರಿಸಿದೆನು. ಇದನ್ನು ನೀನು ಮರೆಯದಂತ ಹೃದಯದಲ್ಲಿ ದೃಢವಾಗಿಟ್ಟು ಕೊಂಡಿರ.? ನಮ್ಮಿಬ್ಬರ ಈ ಸಂವಾದವನ್ನು ಯಾರು ಭಕ್ತಿಯಿಂದ ಗ್ರಹಿಸುತ್ತಾರೋ ಅವರು ಪಾಪವಿಮುಕ್ಕುರಾಗಿ ಜೀವನ್ಮರಾಗುವರು, ಬ್ರಹ್ಮಚರದಿಂದ