ಪುಟ:ಅದ್ಭುತ ರಾಮಾಯಣ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ MMMwwwwmv W\vvv wwW www ಶುದ್ಧರಾಗಿರುವ ಬ್ರಾಹ್ಮಣರಿಗೆ ಯಾರು ಇದನ್ನು ಶ್ರವಣ ಮಾಡಿಸುತ್ತಾರೆ ಯೋ ಅವರು ಪರಮ ಪದವನ್ನು ಹೊಂದುವರು, ವಿದ್ವಾಂಸರನ್ನು ಕೇ ೪ ಚೆನ್ನಾಗಿ ನನನವಾಡವರಾಗಬೇಕ.. - ಹದಿನಾಲ್ಕನೆಯ ಅಧ್ಯಾಯವು ಮುಗಿದುದು. ಹದಿನೈದನೆಯ ಅಧ್ಯಾಯವು. -0-- ಆಂಜನೇಯ ನು ಹೃದ್ಧ ತನಾದ ಪರಮಾತ್ಮನನ್ನು ಧ್ಯಾನಿಸಿ ನಮಸ್ಕಾ ರಮಾಡಿ ಕೈವ ಅಗಿದುಕೊಂಡು ಓಂಕಾರವನ್ನುಚ್ಚರಿಸಿ ಅಂತಜ್ಞರೀರದ ಗು ಹೆಯಲ್ಲಿರುವ ಪರಮಾತ್ಮನನ್ನು ನೋಡುವನಾದನು. ಆ ಹೃದ್ಧ ತನೂ ಪರಮಾತ್ಮ ಸ್ವರೂಪನೂ ಆದ ಶ್ರೀರಾಮನು ಅಕುಂಠಿತ ಶಕ್ತಿಯುಳ್ಳವನಾಗಿ ಸನಂದ ಮೊದಲಾದ ಮುನಿಗಳಿಂದ ಸ್ತುತಿಸಿಕೊಳ್ಳಲ್ಪಡುತ್ತಿರುವನು, ಅಂ ತಪ್ಪ ಶ್ರೀರಾಮನನ್ನು ಆನಂದ ಪೂರ್ಣನಾಗಿ ಆಂಜನೇಯನು ಬ್ರಹ್ಮನು ಯವಾದ ವಾಕ್ಯಗಳಿಂದ ಹೊಗಳತೊಡಗಿದನು. ಎಲೆರಾಮನೆ 1 ನೀನು ಪರಮೇಶ್ವರನು, ಪುರುಷನು ಪುರಾಣನು, ಪ್ರಾಣೇಶ್ವರನ, ಸಾಂ ತಲ್ಯಾಮಿಯಾಗಿರುವ ನಿನ್ನನ್ನು ನಾನು ನಮಸ್ಕರಿಸುವೆನು, ನೀನು ಬ್ರಹ್ಮ ಮಯನಾಗಿಯೂ ಪವಿತ್ರನಾಗಿಯೂ ಇರವೆ? ರುಜ್ವರ್ಣವುಳ್ಳ ನಿನ್ನನ್ನ ಶಾಂತರಾದ ಮುನಿಗಳು ಹೃದಯಕಮಲದ ಮಧ್ಯದಲ್ಲಿ ನೋಡುತ್ತಿರುವರು. ಎಲೈರಾಮನೆ ! ನಿನ್ನಿಂದಲೇ ಸಕಲಜಗತ್ತೂ ಸೃಷ್ಟಿಸಲ್ಪಡುತ್ತಿದೆ. ನೀ ನು ಅಣುವಿಗಿಂತಲೂ ಅಣುವಾಗಿಯೂ, ಮಹತ್ತಿಗಿಂತಲೂ ಮಹತ್ತಾಗಿ ಯ. ಇರುವೆ. ಹಿರಣ್ಯಗರ್ಭನು ನಿನ್ನಿಂದಲೇ ಜನಿಸುವನ', ಅವನಿಂದ ಈ ಪ್ರಪಂಚವು ಸೃಷ್ಟಿಸಲ್ಪಟ್ಟಿತು, ವೇದಗಳೂ ನಿನ್ನಿಂದಲೇ ಹರೆದು ವು, ಕೊನೆಗೆ ಎಲ್ಲವೂ ನಿನ್ನಲ್ಲಿಯೇ ಲೀನವಾಗುವುದು, ನನ್ನ ಹೃದಯ ದಲ್ಲಿ ನರ್ತಿಸುತ್ತಿರುವ ನಿನ್ನನ್ನು ಸಕಲ ಜಗತ್ತಿಗೂ ಹೇತುಭೂತನೆಂದು ತಿಳಿದಿದ್ದೇನೆ. ನಿನ್ನಿಂದಲೇ ಈ ಬ್ರಹ್ಮಚಕ್ರವು ತಿರುಗುತ್ತಿರುವುದು, ನೀ ನು ಮಾಯಾವಿಯು, ಏಕನಾಥನು, ಪರಮಾಕಾರ ಮಧ್ಯದಲ್ಲಿ ನೃತ್ಯ