ಪುಟ:ಅದ್ಭುತ ರಾಮಾಯಣ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ವಿದ್ಯಾನಂದ � � Mommmmmmmmv ಮಾಡುತ್ತಿರುವ ನಿನ್ನ ಮಹಿಮೆಯನ್ನು ನಾನು ನೆನೆಯುವೆನು, ನೀನು ಓಂಕಾರ ರೂಪನು, ಓಂಕಾರವು ಮುಕ್ತಿ ಬೀಜವಾಗಿರುವುದು, ನೀನು ಅಕ್ಷರನು, ಪ್ರಕೃತಿಯಲ್ಲಿ ಗೂಢರೂಪದಿಂದಿರುತ್ತೀಯೆ ? ನಿನ್ನನ್ನು ಎ ಲ್ಲಾ ದೇವತೆಗಳ ಮುನಿಗಳೂ ಸ್ತುತಿಸುತ್ತಿರುವರು, ನಿನ್ನನ್ನು ಮರೆ ಹೊಕ್ಕವರು ಶಾಂತರಾಗಿ ಶಾಶ್ವತವಾದ ಸುಖವನ್ನು ಪಡೆಯುವರು. ಇತರಿಗೆ ದೊರೆವುದು ದುರ್ಲಭ, ನೀನು ಅಣಿಮಾದೈರ್ಯ ಯು ಹೈನು, ಬ್ರಹ್ಮನು, ಪರಮೇಷ್ಠಿಯು, ನೀನೊಬ್ಬನೇ ದೇವನು. ನೀನು ತಮಸ್ಸಿಗೆ ಪರನಾಗಿರುವೆ. ನಿನ್ನ ಪಾದಕಮಲದ ಧ್ಯಾನದಿಂದ ಸಂ ಸಾರ ಬೀಜಗಳೆಲ್ಲವೂನಾಶವಾಗಿ ಹೋಗುವುವು, ನಾನು ಮನಸ್ಸನ್ನು ನಿ ಗ್ರಹಿಸಿ ಇಂದ್ರಿಯಗಳನ್ನು ಬಿಗಿ ಹಿಡಿದು ನಿನ್ನನ್ನು ಬೇಡಿಕೊಳ್ಳುವೆನು ಎಲೈ ರಾಮನೆ ! ನೀನು ಕಾಲರೂಪನು, ಸಯ್ಯಲೋಕ ಹೇತುವೂ ಆ ಗಿರುವೆ. ನಾನು ನಿನ್ನನ್ನು ನಮಿಸುವೆನೆಂದು ಅಂಜನೇಯನು ವಂದಿಸಿದ ನು, ತರುವಾಯ ರಾಮನು ಲಕ್ಷಣನೊಡನೆ ಕೂಡಿ ತನ್ನ ಅದ್ಭುತರೂಪವ ನ್ನು ಬಿಟ್ಟು ಪೂರೈರೂಪವನ್ನು ಕೈಕೊಂಡನು, ಆಮೇಲೆ ಶ್ರೀರಾಮನು “ಎಲೈ ಆಂಜನೇಯನೆ ! ಯಾರು ಈ ನಿನ್ನ ಸ್ತುತಿಯನ್ನು ನನೆಸುವರೊ ಅವರು ಮುಕ್ತರಾಗುವರು. ನೀನು ಚಿರಂಜೀವಿಯಾಗಿ ನನ್ನ ಕಾಠ್ಯಕ್ಕೆ ಸಹಾಯಕನಾಗಿರು ಎಂದು ಹೇಳಿದನು, ಹದಿನೈದನೆಯ ಅಧ್ಯಾಯವು ಮುಗಿದುದು. ಹದಿನಾರನೆಯ ಅಧ್ಯಾಯವು. -0-- ಆಮೇಲೆ ಶ್ರೀರಾಮಮೂರ್ತಿಯು ಹನುಮಂತನನ್ನು ಕುರಿತು “ಎಲೈ ಮಾರುತಿಯೆ ! ದುರಾತ್ಮನಾದ ರಾವಣನು ನನ್ನ ಹೆಂಡತಿಯಾದ ಸೀತೆಯನ್ನಪಹರಿಸಿಕೊಂಡು ಹೋಗಿರುವನು. ಸುಗ್ರೀವನೊಡನೆ ನೀನು ಮೈತ್ರಿಯನ್ನು ನನಗುಂಟುಮಾಡಿ ಸೀತೆಯನ್ನು ಕರೆದು ತರಲು ನೆರವಾ ಗು” ಎಂದು ಹೇಳಲು ಆ ಮಾತಿಗೆ ಹನುಮಂತನು ನಕ್ಕು “ಎಲೈ ಮ