ಪುಟ:ಅದ್ಭುತ ರಾಮಾಯಣ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೫೭ MonronMovv೧MMIAMMMwwwnwwwmM ಪಶ್ಚಿಮದ ದೆಸೆಯಿಂದಲೂ, ಬಂದರು, ಇವರೆಲ್ಲರೂ ರಾಘವನ ಅರಮ ನೆಗೆ ಬಂದು ಸಲ ಮೂಲಗಳನ್ನು ಕಾಣಿಕೆಯಾಗಿ ಕೈಗಳಲ್ಲಿಟ್ಟು ಕೊಂ ಡು, ರಾಮನಿಗೆ ಆಶೀದ್ವಾದವನ್ನು ಮಾಡಿ ಎಲ್ಲರೂ ಪೀಠದಮೇಲೆ ಕುಳಿ ತುಕೊಂಡರು, ರಾಮನು ಸೀತಾಸಮೇತನಾಗಿ ತಮ್ಮಂದಿರು, ಮಂತ್ರಿಗ ಳು, ಪೌರರೇ ಮೊದಲಾದವರಿಂದ ಕೂಡಿ ವಿನೀತನಾಗಿ ಬಂದು ಆ ಮುನಿ ಗಳನ್ನು ವಿಧ್ಯುಕ್ತ ವಿಧಾನದಿಂದ ಅರ್ಚಿಸಿದನು. ಆಗಲೇ ಅಗಸ್ಯ ಮೊದಲಾದ ವಿಪ್ರರು, ಒಳ್ಳೆಯದು! ಒಳ್ಳೆಯದು!! ಎಂದು ಹೇಳಿ ರಾಮನನ್ನು ಬಹಳವಾಗಿ ಪ್ರಸಂಗಿಸಿದರು. ಎಲೆರಾಮನೆ! ನೀನು ಸಾಕ್ಷಾದ್ದೇವತಾಸ್ವರೂಪನು, ಜಗನ್ನಾಥನು, ಜಗತ್ತುಗಳಿಗುಪಕಾರಿ ಯು, ನೀನು ರಾವಣನನ್ನು, ಸುತರು ಸಾಮಾತ್ಯರೊಡನೆ ಕೊಂದುಹಾಕಿದುದ ರಿಂದೀಗ ಜಗತ್ತು ಮತ್ತೆ ಜನಿಸಿದಂತಾಯಿತು.” ಲೋಕದಲ್ಲಿ ರಾವಣನಿಗಿಂ ತಲೂ ದುಷ್ಯನಾಗಿಯೂ ಭಯಂಕರನಾಗಿಯ ಸಾಹಸಿಯಾಗಿಯೂ ಇರುವವರು ಯಾರೂಇಲ್ಲ. ಅವನು ಹತ್ತುಮುಖಗಳಿಂದ ಹತ್ತು ದಿಕ್ಕು ಗಳಲ್ಲಿಯೂ ಏಕಕಾಲದಲ್ಲಿ ತನ್ನಾಜ್ಞೆಯನ್ನು ನಡೆಯಿಸುತ್ತಿದ್ದನ, ಅಂತಪ್ಪ ಶೂರನಾದ ರಾವಣನನ್ನು ನೀನು ಕೊಂದು ಜಗತ್ತನ್ನುದ್ದರಿಸಿದೆ ? ಎಲೈ ಭೂಪಾಲನೆ ! ಪೂರದಲ್ಲಿ ನಿನ್ನನ್ನು ಬ್ರಹ್ಮನು ಬಹುವಿಧವಾಗಿ ಪ್ರಾರ್ಥಿಸಲು ಆಪ್ರಾರ್ಥನೆಯನ್ನಂಗೀಕರಿಸಿ, ಪುಂಡರೀಕದಂತೆ ವಿಶಾಲಾಕ್ಷನಾಗಿಯೂ, ಶ್ಯಾ ಮಲವರ್ಣನಾಗಿಯೂ, ಆಜಾನುಬಾಹುವಾಗಿಯೂ ಇಕ್ಷಾಕ ಕುಲದಲ್ಲಿ ಜನಿಸಿದೆ. ನಿನ್ನ ದರ್ಶನದಿಂದ ನಾವೆಲ್ಲರೂ ಮುಕ್ತರಾದೆವು. ಇನ್ನು ಮೇಲೆ ಧೈಯ್ಯವಾಗಿ ನಿನ್ನನುಗ್ರಹದಿಂದ ಕಾಡಿನಲ್ಲಿ ತಪಸ್ಸನ್ನು ಮಾಡಿಕೊಂ ಡಿರುವವ, ಸೀತೆಯೂ ಅನೇಕ ದುಃಖವನ್ನು ಅನುಭವಿಸಿದಳು. ಅದನ್ನು ನೆನೆಸಿಕೊಂಡ ನನ್ನ ಹೃದಯವೆಲ್ಲವೂ ತಲ್ಲಣಿಸುವುದು, ಎಂದಿವೇ ಮೊದ ಲಾಗಿ ಪದೇಪದೇ ಮುನಿಗಳು ಹೇಳುತ್ತಿದ್ದರು. ಆ ಮಾತಿಗೆ ಸೀತೆಯು ನಕ್ಕು ಆ ಮುನಿಗಳೊಡನೆ ಎಲೆ ಮುನಿ ಗಳಿರಾ!ರಾವಣ ಸಂಹಾರವಿಷಯದಲ್ಲಿ ನೀವುಹೇಳಿದಮಾತು ಅಪಹಾಸ್ಯ ವಾಗಿ ಪರಿಣಮಿಸಿದಂತಿದೆ. ರಾವಣನು ದುಮ್ಮನೆಂಬುದೇನೋ ನಿಜ. ಇವನು ಹುತ್ತು ಮುಖಗಳಿಂದಲೂ ಜಗತ್ತನ್ನೂ ಹಿಂಸಿಸುತ್ತಿದ್ದುದೂ ನಿಜ. ಲ.