ಪುಟ:ಅದ್ಭುತ ರಾಮಾಯಣ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ವಿದ್ಯಾನಂದ ವಾಸವಾಗಿರಲು ಅವರನ್ಮಲ್ಲಿಂದೋಡಿಸಿ ಆ ಪುರಗಳನ್ನು ತನ್ನ ವಶಮಾಡಿ ಕೊಂಡು ಅದರಲ್ಲಿಯೂ ಸಂದರವಾಗಿದ್ದ ಆಂದ್ರನ ರಾಜಧಾನಿಯನ್ನು ತಾನು ವಾಸಮಾಡುವದಕ್ಕಿಟ್ಟುಕೊಂಡು ಮಿಕ್ಕುದನ್ನು ಮಂತ್ರಿಗಳ ವಕಮಾಡಿರುವನು. ಆ ಪುಷ್ಕರದೀಪಕ್ಕೆ ರಾಜನಾಗಿದ್ದು ಕೊಂಡುದೇವ ಕಾಸಿಯರನ್ನು ಸೆರೆಹಿಡಿದು ತಂದು ಸೈಚ್ಯಾ ವಿಹಾರಿ ಯಾಗಿರು ವನು ಲೋಕದಲ್ಲಿರುವ ಸಾರಭೂತವಾದ ಪದಾರ್ಥಗಳನ್ನೇ ತೆಗೆದು ಕೊಂಡು ಬಂದು ಅವುಗಳಿಂದ ತನ್ನ ಪಟ್ಟಣಕ್ಕೆ ಸೊಬಗುಂಟಾಗುವಹಾಗೆ ಮಾಡಿರುವನು. ಚಂಪಕ, ಅಶೋಕ, ಮಂದಾರ, ಮೊದಲಾದ ವೃಕ ಗಳು ವಿಶೇಷವಾಗಿರುವುವು, ಎಲ್ಲಾ ಋತುಗಳಲ್ಲಿಯೂ ಪುಷ್ಪಗಳನ್ನು ಬಿಟ್ಟು ಸುಗಂಧವನ್ನು ಬೀರುವ ತರುಗಳು ಅನೇಕವಾಗಿರುವುವು, ಅಲ್ಲಲ್ಲಿ ರುವ ಜಲಪೂರ್ಣವಾದ ಸರೋವರಗಳಿಂದಲೂ, ಬಗೆಬಗೆಯಾದ ಲತಾ ವಳಿಗಳಿಂದಲೂ, ನಂದನವನದ ಸೊಬಗಿಗಿಮ್ಮಡಿಯಾಗಿ ಆ ಪುರೋದ್ಯಾ ನವು ಪ್ರಕಾಶಿಸುವುದು, ಆ ಪಟ್ಟಣದ ಸೊಬಗನ್ನು ನೋಡಿ ದೇವತೆಗಳು ಅಲ್ಲಲ್ಲಿ ವಾಸಮಾಡಲು ತಪಸ್ಸನ್ನು ಮಾಡುತ್ತಿರುವರು. ಹೀಗೆ ರಮ್ಯವಾದಾ ಪೊಳಲಿನಲ್ಲಿ ಜಗತ್ತನ್ನೇ ತನ್ನ ವಶಮಾಡಿಕೊಂಡು ಆ ಸಹಸ್ರಕಂಧರನು ವಾಸವಾಗಿರುತ್ತಾನೆ. ಇವನು ಇಂದ್ರಾದಿಗಳನ್ನು ಹಿಡಿದುಕೊಂಡು ಬಾಲಕ್ರೀಡೆಯಾಡು ತಲೂ, ಮೇರುಪರೈತಗಳನ್ನು ಸಾವಿಗೆ ಸಮನಾಗಿ ಭಾವಿಸುತ್ತಲೂ ಇರುವನು, ಅವನಿಗೆ ಸಮುದ್ರವು ಗೋಪ್ಪಾದಕ್ಕೆ ಸಮವಾಗಿರುವುದು. ಜಗತ್ತನ್ನು ತೃಣವಾಗಿ ಬಗೆದಿರುವ ಕಾರಣ ಸಣ್ಣ ಸಣ್ಣ ದ್ವೀಪವನ್ನು ಕಣ್ಣೆ ನಿಂದಲೂಕೂಡ ನೋಡುವುದಿಲ್ಲ, ಆ ರಾವಣನು ರೇಗಿದಾಗ ಬೇಗನೆ ಬ್ರಹ್ಮನುಬಂದು ಅಪ್ಪ!!ವತ್ವ” ಎಂದು ಬೇಡಿಕೊಂಡು ಅವನನ್ನು ತಡೆಯು ವನು. ಅವನು ಲೋಕವನ್ನು ನುಂಗಬೇಕೆಂದರೆಕ್ಷಣಮಾತ್ರದಲ್ಲಿನುಂಗು ವನು, ಈ ಕೂರರಾಕ್ಷಸನು ಪುಪ್ಪರ ದ್ವೀಪದಲ್ಲಿಯೂ, ಇವನ ತಮ್ಮನು ಅಂಕೆಯಲ್ಲಿಯೂ ಇದ್ದು ಕೊಂಡಿದಾರೆ.” ಎಂದಿಮೊದಲಾದ ರಹಸ್ಯವನ್ನು ಹೇಳಿ ಆ ಬ್ರಾಹ್ಮಣನು ನಾಲ್ಕು ತಿಂಗಳವರೆಗೂ ಅಲ್ಲಿಯೇ