ಪುಟ:ಅದ್ಭುತ ರಾಮಾಯಣ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'Le విద్యనేరిణి MMಜ ಗಳ ಸವಿಖರದಲ್ಲಿ ಸೀತೆಯು ಹೇಳಿದ ಸಹಸ್ರಕಂಠನ ವೃತ್ತಾಂತವನ್ನು ಕೇಳಿ ಮಾನಸೋತ್ತರ ಶೈಲದಲ್ಲಿದ್ದ ಅವನಸದಳವನ್ನು ಕುರಿತು ಹೊರ ಟೆನು, ನೀತಿಯು ಶಕ್ತಿರೂಪವನ್ನು ಹೊಂದಿ ರಾವಣನ ವಧೆಯನ್ನು ಮಾಡಿದುದನ್ನು ರಾಮನು ಕಂಡನು. ಅಲ್ಲಿಂದ ಹಿಂದಿರುಗಿ ಅಯೋಧ್ಯೆಗೆ ಬಂದನು. ಇವೇ ಮೊದಲಾದ ಸಂಗತಿಗಳೆಲ್ಲವೂ ನಿರೂಪಿಸಲ್ಪಟ್ಟಿವೆ. ಈ ವೃತ್ತಾಂತವನ್ನು ಕೇಳಿದವರೂ ಪಠಿಸಿದವರೂ ತಮ್ಮ ಇಷ್ಟಾರ್ಥ ವನ್ನು ಪಡೆವರಲ್ಲದೆ ತೀರ್ಥಸ್ನಾನದ ಫಲವನ್ನೂ ಯುದ್ಧದಲ್ಲಿ ಜಯವನ್ನೂ ಯಜ್ಞಫಲವನ್ನೂ ಪಡೆಯುವರು, ಭಕ್ತಿಯುಕ್ತರಾಗಿ ನಿತ್ಯವೂ ಪಠಿಸಿದರೆ ಮುಕ್ತರಾಗುವರು. ಅದ್ಭುತ ರಾಮಾಯಣದಲ್ಲಿ ೧೮ ನೆಯ ಅಧ್ಯಾಯವು ಮುಗಿದುದು. ಶ್ರೀ ಕೃಷ್ಣಾರ್ಪಣಮಸ್ತು. --