ಪುಟ:ಅನುಭವಸಾರವು.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮ d m ೪೧ ಶ್ರೀ ಜಯಶರಣಕುಲಗೋತ್ರ ಜಯಸುಗುಣಮಣಿಸೂತ್ರ: ಜಯಸ್‌ "ಗಾತ್ರ ಗುರುವೆಬಿನ್ನಪವಿಂತು | ಜಯತೆಂದು ನಮಿಸಿದನುಪುತ್ರ! ಜೀವೇಶದೊಂದೆಂದು ದೇವಮುನ್ನರಿಮಿತ ಜೀವಂಗೆಮತ್ತೆ ಪ್ರೇರಕಂ ಶಿವನೆಂಬು ದಾವತರನಿದನುತಿಳಿಯಿ! ತನಗೆತಾನಾಳಾಗಿ ತನಗೆತಾನರಸೆನಿಪ ತನವೊರ್ವನಲ್ಲಿ ಫುಟಸುವುದೆ ಜಗದೊಳಿದ | ನೆನಗೆ ಗುರಿ ಎಣಿಪುದು | ೪ ಎಂದು ಬೆಸಗೊಂಡೊಡಾನಂದಮಯಗುರುತನ್ನ | ಕಂದನಂನೋಡಿನ ಅವುತಲೆವತ್ಸ ಕೇ। ಳೆಂದು ದೃಷ್ಟಾಂತವರಿಸಿದನು! ರವಿಶನ್ನ ಪಡಿಯ ಬಿಂಬವನೆನ್ನಲಿ ತೊ | ರುವಕಾಲದಿಂದೆ ನಡಸು ವಂತಿಜೀವ) ನಿವಹನಂಪ್ರೇರಿಸುವನೀಶ | ೬ ಶಿವನು ತಾನೇ ಕನಿವಹನಂಮಾಡುತಂ | ತವನೆತನ್ನಲಿಲಯಿಸು ತಿಪ್ಪಣ೦ ನಿಮಿ | ಇವೆಯುಪಾದಾನವಹನಾಗಿ | ಭಕ್ತರ ಸಮೂಹವನ್ನು ರಕ್ಷಿಸುವವನೇ, ಸರ್ವೋತ್ಕೃಷ್ಟನಾಗು; ಒಳ್ಳೆ ಗಣಗಳೆಂ ಬ ರತ್ನಗಳಿಗೆ ಧಾರವಾಗಿರುವವನೇ, ಸರ್ವೋತ್ಕೃಷ್ಟನಾಗು; ಆನಂದಮಯವಾದ ದೇಹವುಳ್ಳ ಗುರುವೇ, ಈ ವಿಜ್ಞಾಪನೆ ಸರ್ವೊತ್ತಮವಾಗಲಿ ಎಂದು ಶಿಷ್ಯನು ನಮ ಸ್ಕರಿಸಿದನು. ಜೀವನ ಈಶ್ವರನೂ ಒಂದೇ ಎಂಬದಾಗಿ ವೆ ದಲು ತಿಳಿಸಿ ತಿರಿಗಿ ಆ ಜೀವನಿಗೆ ಶಿವನೇ ಪ್ರೇರಕನು ಎಂಬದಾಗಿ ಹೇಳುವದನ್ನು ತಿಳಿಯುವದಕ್ಕೆ ಯಾವದಾರಿ ? ಒಬ್ಬನೇ ಮನುಷ್ಯನಲ್ಲಿ ತನಗೆ ತಾನು ಸೇವಕನಾಗಿಯೂ ತನಗೆ ತಾನು ಅರಸ ನಾಗಿಯೂ ಇರುವ ಭಾವವು ಸಂಭವಿಸುತ್ತದೆಯೇ ? ಎಲೈ ಗುರುಶ್ರೇಷ್ಠನೇ, ಈ ಸಂ ಗತಿಯನ್ನು ನನಗೆ ಅನುಗ್ರಹಿಸಬೇಕು. ಈ ಪ್ರಕಾರವಾಗಿ ಶಿಷ್ಯನು ಪ್ರಶ್ನೆಮಾಡಲಾಗಿ ಆನಂದಭರಿತನಾದ ಗುರುವು ತನ್ನ ಶಿಷ್ಯನನ್ನು ನೋಡಿ ಸಂತೋಷಪಡುತ್ತಾ-ಎಲೈ ಮಗನೇ, ಕೇಳು ಎಂದು ದೃಷ್ಟಾಂ ತ ಪೂರ್ವಕವಾಗಿ ತಿಳಿಸಿದನು. - ಸೂರನು ತನ್ನ ಪ್ರತಿಬಿಂಬವನ್ನು ತನ್ನಲ್ಲಿ ತೋರುವ ಕಾಲದಿಂದ ನಡಸುವಹಾಗೆ ಈಶ್ವರನು ಜೀವರ ಸಮೂಹವನ್ನು ಪ್ರೇರಿಸುವನು. ಶಿವನು ತಾನೇ ಲೋಕಗಳ ಸಮೂಹವನ್ನು ಸೃಷ್ಟಿಸಿ, ಅವುಗಳನ್ನು ತನ್ನಲ್ಲಿ ಅಡಗಿ ಸಿಕೆ ೧ಳ್ಳುತ್ತಾನೆ. ಯಾಕಂದರೆ ಶಿವನು ತಾನೇ ನಿಮಿತ್ತ ಕಾರಣನೂ ಉಪಾದಾನ ಕಾರಣನೂ ಆಗಿದ್ದಾನೆ. 6