ಪುಟ:ಅನುಭವಸಾರವು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

c 9 ೧೪ ೮ ನೇ ಸೂತ್ರ-ಜ್ಞಾನಾಂತರನಿದರ್ಶನನಿರೂಪಣ. ಜೀವಪರವತ್ಮಲೋಕಂಗಳಿಂದವನು ಚರ | ಭಾವಿಸುವರೊಳುಭೇದವುಂಟು ಮಾಡು! ತಿಂ .ತರುಣನೀನರಿವಂತೆ ನರವೇದಸಿದ್ದ ರಜೆ ಪರಮಜೀವರಕು ತದು ಪಾಧಿವಾದಜಗ ದಿರವನಾನೆದೆದೆನಲವಿಂದೆ ೦ ಆವಿತ್ತ ವಾಪರಮಜೀವರಂಗುರುಪಾದ | ಸೇವೆಯಿಂದರಿಯಮುಕ್ತರ ಹರವರಲ್ಲಿ 1 ಮವರುಂಟಾತ್ಮಜನೆಕೇಳು || ಸಕಲಲೋಕಂಬೇರೆ ಸಕಲಾತ್ಯರುಂಬೇರೆ | ಸಕಲೇಶನೋರ್ವನದಕೆ ಬೇರೆಂಬ ಕಾ ಣಿಕೆಯಿಂ ಕನಿಷ್ಠನಹನ್ನೆಸೆ | ತನ್ನನಾದಿಯಮರವೆಯಿಂನೆಗಳಜಗವಿದುವೆ | ನನ್ನಿಯಂತೀಶನಿಂದಾದು ದೆಂದು ತಿಳಿ / ವಂನೊಡೆಮಧ್ಯಮನು ತಾನು | ೫ ಜಗವೆಂದೊಡಂತಾನೆ ಜಗದೀಶನುಂತಾನೆ | ಜಗದಾತ್ಮರೆಲ್ಲ ರುಂತಾನ ನಿಜವೆಂದು | ಬಗೆವಾತನುತ್ತ ಮನು ನೋಡಾ ! ಆ m C 9) ೮ ನೇ ಸೂತ್ರ – ಔನಿಂತರೆನಿದರ್ಶನನಿರೂಪಣೆ ಜೀವ, ಈಶ್ವರ, ಜಗತ್ತು, ಇವುಗಳ ರೀತಿಯನ್ನು ಕುರಿತು ಆಲೋಚಿಸುವವರೊಳಗೆ ಭೇದವುಂಟು. ೧ ಎಲೈ ಮಗನೇ, ನೀನು ತಿಳಿದುಕೊಳ್ಳುವ ಹಾಗೆ ವೇದದಲ್ಲಿ ನಿಶ್ಚಯಿಸಲ್ಪಟ್ಟ ಈಶ್ವರ ಜೀವರನ್ನೂ ಅವರಿಂದಾದ ಲೋಕಸ್ಥಿತಿಯನ್ನೂ ಸಂತೋಷದಿಂದ ಹೇಳಿದೆನು. ಆ ಲೋಕವು ಆ ಈಶ್ವರನು ಆ ಜೀವಾತ್ಮನು ಈ ಮೂವರನ್ನೂ ಗುರು ಶುಕ್ರೂಷೆ ಯಿಂದ ತಿಳಿಯಲಾಗಿ ಮೋಕ್ಷ ಹೊಂದಿದವರಾಗುತ್ತಾರೆ, ಅವರೊಳಗೆ ಮೂರು ತರ ದವರಿದ್ದಾರೆ. ಮಗನೇ, ಕೇಳು. - ಸಮಸ್ತ ಜಗತ್ತೂ ಬೇರೆ ; ಸಮಸ್ತ ಜೀವಾತ್ಮರೂ ಬೇರೆ ; ಜಗದೀಶನೊಬ್ಬನೇ ಅವು ಗಳಿಗೆ ವಿಲಕ್ಷಣನಾಗಿದ್ದಾನೆ ಎಂದು ತಿಳಿಯುವವನೇ ಕನಿಷ್ಠನು. ೪ ಈ ಲೋಕವು ತನ್ನ ಅನಾದಿಯಾದ ಅವಿದ್ಯೆಯಿಂದ ತೋರಿರಲಾಗಿ, ಈಶ್ವರನಿಂದಾ ಯಿತು ಎಂದು ತಿಳಿಯುವವನೇ ಮಧ್ಯಮನು. ೫ ಲೋಕವೆಂಬುವದೂ ತಾನೇ ; ಈಶ್ವರನೆಂಬುವನೂ ತಾನೇ: ಜೀವಾತ್ಮರೆಲ್ಲರೂ ತಾನೇ ; ಇದು ಸತ್ಯವೆಂದು ತಿಳಿಯ.ವವನೇ ಉತ್ತಮನು.