ಪುಟ:ಅನುಭವಸಾರವು.djvu/೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


m 9 $ | ೫ ತನ್ನ ಸುಕ್ಷತಾದಿಯಿಂದಂನೆಗಳಿದಂಗವಿದು ತನ್ನದೇ ಎಂದೊಡಾಸುಕ್ಷ ತನಖಿಳ ರೋಳ ಗಂ ನೋಡಲುಂಟಿನಿಸಿತೋರ್ಕು೦ 8 ೬ ಮೊದಲದೇಹದೊಳು ತಾನೊದವಿಮಾಡಿದ ಸುಕೃತ ವದು ತನ್ನದೆಂ ದೊಡಾದೇಹದಭಿಮಾನ, ದುದಯವೆಲ್ಲಾತ್ಯರೊಳಗುಂಟು | ಇಂತಪ್ಪ ಸಾಂಕಯ್ಯನಂ ತೊಲಗಿಸಿ ಪರ ನಿಂತೊಪ್ಪದೊಂದುನಿ ಯತಿಯವರವರ ವಿಧಿ! ಯೆಂತಂತೆ ಮಾದನೆ ಕೇಳು | ಬಂದು ಮನೆಯೊಳಗೆ ಸೊಡರೊಂದು ಪಲರಿರೆ ವಿಷಯ| ವಂದನಂ ಬೆಳಗದಿರದಂತೆ ತನುವಿನೊಳ ಗೊಂದುಂಟು ಭೋಗ್ಯವಹಬುದ್ದಿ | ಅದು ವಿಷಯವಂ ತೋರುವುದೆ ಲಕ್ಷಣವೆಯಾಗಿ ಯುದುತನೆ ರ್ದಸಲವಾತ್ಮರಿಗೆ ಭೋಗ ದೊದವೀಯದಿರದು ನಿಜಮಿದುವೆ | ಆವುದಕ್ಕಾವಸ್ಸ ಭಾವವದು ಕೆಡದುನಭ | ನಾವಗಂಕುಂಭವಾಗದಂ ತೀಬುದ್ದಿ ಜೀವರಂಮಾಣದರುಹುವುದು | ೫ ಒಬ್ಬನು ತನ್ನ ಪ್ರಣ್ಯನಿಮಿತ್ತದಿಂದ ಉಂಟಾದ ಈ ದೇಹವು ತನ್ನದೇ ಎಂದು ಹೇಳಿದರೆ, ಆ ಪುಣ್ಯವು ಎಲ್ಲಾ ಆತ್ಮರಲ್ಲಿ ಯೂ ಇರಬೇಕು. ೬ ಪೂರ್ವದ ದೇಹದಲ್ಲಿ ತಾನು ಮಾಡಿದ ಪುಣ್ಯವು ತನ್ನದೇ ಎಂದು ಹೇಳಿದರೆ ಆ ದೇ ಹಾಭಿಮಾನವು ಎಲ್ಲಾ ಆತ್ಮರಲ್ಲಿಯೂ ಇರಬೇಕು. ೭ ಈ ವಿಧವಾದ ಸಾಂಕ‌ದೋಷವನ್ನು ನಿವಾರಿಸುವದಕ್ಕಾಗಿ ಪರಮಾತ್ಮನಿಂದ ತೋರತಕ್ಕೆ ಅದೃಷ್ಟವು ಅವರವರ ಕರ್ಮಾನುಸಾರವಾಗಿ ಫಲವನ್ನು ಕೊಡುತ್ತದೆ ಎಂದು ತಿಳಿ. - ಒಂದು ಮನೆಯಲ್ಲಿ ಅನೇಕರಿರುತ್ತಿರಲಾಗಿ ಒಂದು ದೀಪವು ಸದಾರಗಳ ಸಮ ಹವನ್ನು ಪ್ರಕಾಶಗೊಳಿಸುವ ಹಾಗೆ ದೇಹದಲ್ಲಿ ಭೋಗಾನುಭವವನ್ನು ಕೊಡುವ ಒಂದು ಬುದ್ದಿಯುಂಟು. ೯ ಆ ಬುದ್ದಿ ಯು ಶಬ್ದಾದಿವಿಷಯಗಳನ್ನು ಕಾಣಿಸುವದೆಂಬ ಲಕ್ಷಣವುಳ್ಳದ್ದಾಗಿ ತನ್ನ ಲ್ಲಿರುವ ಅನೇಕಾತ್ಮರಿಗೆ ಭೋಗಾನುಭವವನ್ನು ಮಾಡಿಸದೆ ಇರುವದಿಲ್ಲ. ಇದು ಸತ್ಯ. ಯಾವದಕ್ಕೆ ಯಾವದು ಸಹಜವೋ ಅದು ನಾಶವಾಗುವದಿಲ್ಲ. ಹೇಗಂದರೆ ; ಆಕಾಶವು ಎಂದಿಗೂ ಗಡಿಗೆಯಾಗುವದಿಲ್ಲ. ಆದುದರಿಂದ ಬುದ್ದಿಯು ಜೀವಾತ್ಮರಿಗೆ ಶಬ್ದಾದಿವಿಷಯಗಳನ್ನು ತಿಳಿಯಪಡಿಸುವ ಸ್ವಭಾವವುಳ್ಳದ್ದಾಗಿರುತ್ತದೆ,