ಪುಟ:ಅನುಭವಸಾರವು.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M. ೨ m v ಜಡವರಿವಪರಿಯೆಂತು ಮಡಕೆಯಂ ಬೇರೋಂದು | ಮಡಕೆಯರಿವು ತಮಿಹುದೆ ನೀವಿದನರಿಹಿ | ಕೊಡುವುದೆನೆ ಪೇಳುವೆನು ಕೇಳು! ೯ ಸೂಜಿಕಲ್ಲಂಮಿಡಿದ ಸೂಜೆಯದು ಬೇರೊಂದು | ಸೂಜಿಗಾಸೂಜಿ ಕಲ್ಲಗುಣಮಂತಾಳು | ರಾಜಿಸುತ್ತಿರ್ಪತೆರನಂತೆ | ಚಿತ್ತು ವಿಡಿದಿರ್ಪಹವು ಚಿತ್ತಲ್ಲ ದಿರ್ದೊಡಂ, ಚಿತ್ತೆನಿಸಿದೇಹ ಮೋತಿ ದಲಾದವಂ ಚೇಷ್ಟಿ ಸುರಿವುದೆಂದು ತಿಳಿಸುತ್ತಾ ಕುವರ ಕೇಳಿದರ ನವಗುಣಂ ವೇದ್ಯವೆನಿ | ಸುವಕತದಿನಹಮಾ ನಿಜವಾಗದಾಗುಣಿ ) ತವನಾಂತುದಾಗಿ ಘುಟದಂತೆ | ಆವಧರ್ಮಾಧರ್ಮ ಮೊವಿಯತ್ಸದ್ದೇಸ ಭಾವನಾರಾಗ ಸುಖ ದುಃಖ ಮತಿಗಳಿವು | ತಾವೆನವಗುಣವೆನಿಸುತಿರ್ಕ್ಕು° | ತಾಹಮೆಂಬಲ್ಲಿ ಧ್ಯಾತಾಪಮೆಂಬಲ್ಲಿ ಮಾತೇನು ಹಮ್ಮು ತತ್ತ ದಿಂದ್ರಿಯದೊಡನೆ ಶೃತೋತ್ಸಲದ ತೆರದೆನೇದ್ಯ | ೧೧ ܩܘ m. -

  • -- +•

- ಎಲೈ ಗುರುವೇ, ಜಡಪದಾರ್ಥವು ತಿಳಿಯುವ ಬಗೆ ಹೇಗೆ? ಮಡಕೆ ಮತ್ತೊಂದು ಮಡಿಕೆಯನ್ನು ತಿಳಿದುಕೊಳ್ಳುವದೇ? ಈ ಸಂಗತಿಯನ್ನು ಗೊತ್ತು ಮಾಡಿಕೊಡು ಎಂದು ಶಿಷ್ಯನು ಕೇಳಲಾಗಿ ಗುರುವು ಹೇಳುತ್ತೇನೆ ಕೇಳೆಂದು ನಿರೂಪಿಸಿದನು. - ಸೂಜಿಕಲ್ಲನ್ನು ಹಿಡಿದ ಒಂದಾನೊಂದು ಸೂಜಿಯು ಮತ್ತೊಂದು ಸೂಜಿಗೆ ಆಸೂಜಿ ಕಲ್ಲಿನ ಗುಣವನ್ನುಂಟುಮಾಡಿ ಪ್ರಕಾಶಿಸುವ ಹಾಗೆ, - ಅರಿವನ್ನು ಹಿಡಿದಿರುವ ಅಹಂಕಾರವು ಅರಿವಲ್ಲದಿದ್ದಾಗ್ಯೂ ಅರಿವೆನಿಸಿಕೊಂಡು ವ್ಯಾಪಾರಿಸುತ್ತಾ ಶರೀರಮುಂತಾದ ಜಡವಸ್ತುಗಳನ್ನು ತಿಳಿಯುತ್ತದೆ. ೧೧ ಮಗನೇ ಕೇಳು, ಈ ಅಹಂಕಾರದ ಒಂಭತ್ತು ಗುಣಗಳು ಆತ್ಮನಿಂದ ತಿಳಿಯಲ್ಪಡ ತಕ್ಕನಾಗಿರುವದರಿಂದ ಮಡಕೆಯ ಹಾಗೆ ಗುಣವಿಶಿಷ್ಟತ್ವವನ್ನು ಹೊಂದಿರುವ ಅಹಂ ಕಾರವು ಆತ್ಮನಾಗುವದಿಲ್ಲ. ಪುಣ್ಯ, ಪಾಪ, ಯತ್ನ, ದ್ವೇಷ, ಭಾವನಾರೂಪಸಂಸ್ಕಾರ, ರಾಗ, ಸುಖ, ದುಃಖ, ಬುದ್ದಿ ಇವು ಜೀವನ ಒಂಭತ್ತು ಗುಣಗಳೆನಿಸಿಕೊಳ್ಳುವವು. ೧೩ ನಾನು ಕೇಳುತ್ತೇನೆ ಎಂಬಲ್ಲಿಯ, ಧ್ಯಾನಿಸುತ್ತೇನೆ ಎಂಬಲ್ಲಿಯೂ, ಅಹಂಕಾರವು ಆಯಾ ಇಂದ್ರಿಯಗಳೊಡನೆ ಬಿಳಿಯ ನೈದಿಲೆಯಂತ ವೇದ್ಯವಾಗಿರುವದು. - ೧೨