ಪುಟ:ಅನುಭವಸಾರವು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 . m. === = - - === = - 6 ತಿಃ ಅಳಿಯದುಳಯದ ಮರವದಳೆಯದೆಚ್ಚ ರದಗಳ | ವಳಸದರಿವ ರಿವೆನಿಜವಾದ ಶಂಭುಪದ ನ೪ನಮಂಕರ್ತುನತನಸ್ಸೆಂ. ಅಜ್ಞಾನ ನಿರ್ಹರಣ ಸುಜ್ಞಾನ ಸುಖಕರಣ ತಜ್ಞನತಚರಣ ಗುರು ವಯ್ಯ ನೀನೆನ್ನ 1 ವಿಜ್ಞಾಪನವನೊಲಿದು ಕೇಳು | ೩ ಅಹಮುನಿದ್ರೆಯೊಳಿಲ್ಲ ದಿಹರೂಪಿನಿಂದ ಕೈ ವಹುದೆಂದೊಡರಿವುತಿಹು ದೊಂದು ಬೇಕದೆಂ | ತಹುದು ಪೇಳೆನಗೆ ನಿಜವಾಗಿ | ೪ ಚಿರನಿದ್ರೆಯಲ್ಲಿ ಯರಿವಿರೆತನ್ನದೇಹದಾ | ಭರಣನುಂ ಚೋರನೆಯಾ ಗಳಾದೊಡಂ ನರನರಿಯನೇತಕೆಲೆದೇವ || ೫ ಮತ್ತೆ ನಿದ್ರೆ ಯೋಳು ಸಂವಿತ್ತಿಲ್ಲವೆಂದು ಕೆಲIರುತ್ಯ ರಂಗುಡುವರಹಮಿ ಗಿಲ್ಲ ಮೆಕಾಣಿ | ಸುತ್ತಮಿಹುದಂತು ಕರುಣಿಸು | ೨ ನೆಯ ಸೂತ್ರ, ಜ್ಞಾನಸದ್ಭಾವನಿರೂಪಣ. ಅರಿವಿಲ್ಲವಾಗಿದೆಯೊಳಗೆಂಬುದಾವಾವ || ತೆರದೊಳು ವಿಚಾರಿಸಲು ದೊರಕೊಳ್ಳದು 0 ೧ ನಾಶವಾಗದೆಯ, ಉಳಿಯದು., ಅಜ್ಞಾನವನ್ನು ಧರಿಸದೆಯೂ, ಎಚ್ಚ ರವಾಗಿರದೆಯ, ಕಳವಳಪಡದೆಯೂ ಇರುವ ಅರಿವೇ ತಾನಾದ ಶಂಭುಲಿಗೆ ಸ್ವಾಮಿಯ ಪಾದಕಮಲವನ್ನು ಕುರಿತು ನಮಸ್ಕರಿಸುವವನಾಗುತ್ತೇನೆ. ಮರವೆಯನ್ನು ಹೋಗಲಾಡಿಸುವವನಾಗಿಯೂ, ಅರಿವಿನಿಂದಾಗುವ ಆನಂದಕ್ಕೆ ಸಾಧಕನಾಗಿಯೂ ಜ್ಞಾನಿಗಳಿಂದ ನಮಸ್ಕರಿಸಲ್ಪಟ್ಟ ಪಾದಗಳುಳ್ಳವನಾಗಿಯೂ ಇರುವ ಗುರುಶ್ರೇಷ್ಠನೇ, ನೀನು ನನ್ನ ಬಿನ್ನಹವನ್ನು ಕೇಳು. ಅಹಂಕಾರವು ನಿದ್ರೆಯಲ್ಲಿ ಇಲ್ಲದಿರುವ ರೀತಿಯಿಂದ ದೃಶ್ಯವಾಗಿದೆ ಎಂದು ಹೇಳಿದರೆ, ತಿಳಿಯತಕ್ಕದ್ದೊಂದು ಬೇಕು, ಅದು ಹೇಗಾಗುತ್ತದೆ? ಸತ್ಯವಾಗಿ ತಿಳಿಸು. - ಗಾಢನಿದ್ರೆಯಲ್ಲಿ ಅರಿವಿರುವದಾದರೆ, ಮೈಮೇಲಣ ಒಡವೆಗಳನ್ನು ಕಳ್ಳನು ಕದಿ ಯುವಾಗಲಾದಾಗೂ ಮನುಷ್ಯನು ಯಾಕೆ ತಿಳಿಯನು ? ಗಾಢನಿದ್ರೆಯಲ್ಲಿ ಅರಿವಿಲ್ಲವೆಂದು ಕೆಲವರು ಉತ್ತರವನ್ನು ಕೊಡುವರು, ಮತ್ತು ಅಲ್ಲಿ ಅಹಂಕಾರದ ಇಲ್ಲದಿರುವಿಕೆಯು ಹೇಗೆ ತೋರುವದು ? ದಯಮಾಡಿ ಹೇಳಬೇಕು. ೨ ನೇ ಸೂತ್ರ, ಜ್ಞಾನಸದ್ಭಾವನಿರೂಪಣೆ. ಆ ನಿದ್ರೆಯಲ್ಲಿ ಅರಿವಿಲ್ಲವೆಂಬುವದನ್ನು ವಿಚಾರ ಮಾಡಲಾಗಿ ಯಾವ ರೀತಿಯಿಂದಲೂ ಅದು ಸಂಭವಿಸುವದಿಲ್ಲ. ೫