ಪುಟ:ಅನುಭವಸಾರವು.djvu/೭೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೀಟ M.

  • ಕಂದಕೇಳಹಮಿಲ್ಲದಂದಮಂ ನಿದ್ರೆಯೊಳ | ಗೊಂದಿಯರಿವಾತ್ಮನಿಹು

ದು ನಿಜವಿದನೆಕುಶ ಬಂದೊರೆ ನಿನ್ನೊಳೊರವೆನು|| ಅರಿವಿಲ್ಲ ವೆನಲೇನು ನರಿಯದೆ ಸುಖದೆನಾ ! ನೊರಗಿರ್ದ್ದೆನೆಂಬ ನೆನ ಹಿರ್ದಬಳಕ ಕೇ ೪ರಿವುಂಟು ನಿದ್ರೆಯೊಳುಪುತ್ರಾ' ಏನೆಂದರಿಯದಿರ್ದೆನಾನು ಸುಖಮಯನಾದೆ | ನಾನಿದ್ರೆಯಲ್ಲಿ ಯನ ಲಾತ್ಮನಿಪ್ಪFದ | ಕ್ಕೇನು ದೃಷ್ಟಾಂತವೆನೆಕೇಳು) ಏನಮಾಡಿದೆಯೆಂದೊಡೇನುಯಿಲ್ಲೆಂಬವಂ 1 ಹಾನಿತನಗಿಲ್ಲಿ ದಾನಿರು ದೊಗಾಳಿ | ಮಾನದಿಂದಿಹುದನೆರೆವಂತೆ|| ೫ ಒಂದುವಂಕಾಣೆ ನಾನೆಂದುದಾಹಂತೆಲಯ | ಮೊಂದಿರ್ಪಸುಪ್ತಿಯಲ್ಲಿ ತಾನಿರ್ದ್ದನೆನ | ಹಿಂದೆ ನೀನರಿವುದೆಲೆವತ್ಸ | - ಅಂಬಿಕಾಯೋಗಿ ತಾನೆಂಬ ಬಗೆದೊರದ | ಲು೦ಬಮ್ಮ ತದಿಂದೆ ಚಿ ರಕಾಲಸುಖಮಿರ್ದ್ದು ದಂಬಳಕ ನೆನೆದುಸಿರುವಂತೆ ' ೧ ಮಗನೇ ಕೇಳು ತಿಳಿಯುವ ಆತ್ಮನು ಸತ್ಯವಾಗಿ ನಿದ್ರೆಯಲ್ಲಿ ಅಹಂಕಾರದ ಅಭಾ ವವನ್ನು ಹೊಂದಿರುವನು. ಚಮತ್ಕಾರವು ತೋರುವಂತೆ ನಿನಗೆ ಹೇಳುತ್ತೇನೆ. ೨ ಅರಿವಿಲ್ಲವೆಂದು ಹೇಳುವದಾದರೆ, ಏನೂ ತಿಳಿಯದೆ ಸುಖವಾಗಿ ಮಲಗಿದ್ದೆನೆಂಬ ಸ್ಮರಣೆ ಎಚ್ಚತ್ತಮೇಲೆ ಉಂಟಾಗುತ್ತದೆ. ಆದುದರಿಂದ ನಿದ್ರೆಯಲ್ಲಿ ಅರಿವು ಉಂಟು ಶಿಷ್ಯನೇ. - ನಾನು ನಿದ್ರೆಯಲ್ಲಿ ಯಾವದೊಂದನ್ನೂ ತಿಳಿಯದೆ ಆನಂದದಿಂದ ತುಂಬಿದ್ದೆನು ಎಂದು ಹೇಳುವಲ್ಲಿ ಆತ್ಮನು ನಿದ್ರೆಯಲ್ಲಿ ಇದ್ದುದಕ್ಕೆ ಏನು ದೃಷ್ಟಾಂತವೆಂದರೆ ಹೇಳು ತೇನೆ ಕೇಳು. ೪ ಏನ ಮಾಡಿದೆ ಎಂಬ ಪ್ರಶ್ನೆಗೆ ಏನೂ ಇಲ್ಲವೆಂದು ಹೇಳುವವನು ತನಗೆ ಏನೊಂದು ಕೇಡೂ ಇಲ್ಲದ, ಯಾವ ಉದ್ಯೋಗದ ಅಭಿಮಾನವೂ ಇಲ್ಲದ ಸ್ಥಿತಿಯಲ್ಲಿ ತಾನಿ ರುವದನ್ನು ತಿಳಿಸುವ ಹಾಗೆ. ೫ ನಾನು ಒಂದನ್ನೂ ಕಾಣಲಿಲ್ಲವೆಂದು ಹೇಳಿದ್ದು ಅಹಂಕಾರದ ಲಯವುಳ್ಳ ಸುಷು ಪ್ತಿಯಲ್ಲಿ ತಾನಿದ್ದ ನೆನಪಿನಿಂದಲೇ ಎಂದು ನೀನು ತಿಳಿದುಕೋ. ೬ ಲಂಬಿಕಾ ಯೋಗಿಯಾದವನು ತಾನೆಂಬ ಭಾವವೇ ತನಗೆ ತೋರದಿದ್ದಾಗ್ಯೂ ಆ ಯೋಗದಲ್ಲಿ ಸೇವಿಸುವ ಅಮೃತದಿಂದ ಬಹುಕಾಲ ಆನಂದದೊಡನೆ ಇದ್ದುದನ್ನು ಚಿಕ್ಕಬಹಿಮ್ಮುಖವಾದ ಮೇಲೆ ಸ್ಮರಿಸಿಕೊಂಡು ಹೇಳುವ ಹಾಗೆ 8