ಪುಟ:ಅನುಭವಸಾರವು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬4 . ೧೪ ೧೦ ಅಲ್ಲಿ ತತ್ಸಂಸ್ಕಾರವೆಲ್ಲಂ ಪ್ರಕೃತಿಯೊ೪] ರ್ದಲ್ಲಿ ಕರ್ನಾನುಗುಣ ದೊಳದ್ದಾತಂಗೆ' ಯಿಲ್ಲದಾಸ್ಕೃತಿಯ ನೆಸಗುವುದು | ಅದು ಪ್ರತ್ಯಭಿಜ್ಞೆಯಹುದದು ನೋಡಲಿಂತು ಪೂ | ರ್ವದೊಳು 'ತಾ ನನುಭವಿಸಿದರ್ಥಮಂ ಕಾಣು | ತದುಗೂಡಿನೊದಲ ನೆನೆವುದು | ೧ ಆತನೇ ಈತನೆಂದೇ ತೆರದೆ ಫುಟಪುದಾ | ಮಾತು ದೃಷ್ಟಾಂತವಿದಕೆ ಸುಖನಿದ್ರಾನು | ಭೂತಿಯ ಸ್ಮರಣೆತನಗಿಂತು ೧೩ ಅನುಭವಿಸದರ್ಥವದು ನೆನೆಯೆ ಗೋಚರಿಸದಾ ! ತನಿನಿದೆಯಲ್ಲಿ ಯ ರಿಯದಿರೆ ಮುನ್ನೊರೆದ ನೆನಹೆಂತು ಫುಟಪುದೆಲೆ ನಾ.. ಕಾರಣಂಪ್ರಕ್ಷತಿಸಂಸಾರವೀಕಾರವಿ | ಸಾರವಾಗಿರ್ದ್ದಕರಣದಿಂ ಸ್ಮತಿಗೆಂತು , ಸಾರುವುದು ಪೇಳೆನಲು ಕೇಳು | ೧೫ ಪ್ರಕ್ಷತಿತಾನೇವತ್ವಿಕರಿಸುತೆ ಮಾನಸಾ ತ್ಮಕವಪ್ಪುದಾಗಿ ತದನು ಭವಸಂಸ್ಕಾರ ನಿಕರವೀನೆನಹಿಗಹುದಿಂತು | ೧೦ ಆ ಸುಷುಪ್ತಿಯಲ್ಲಿ ನಿದ್ರಾಸುಖಾನುಭವದ ಸಂಸ್ಕಾರವೆಲ್ಲವೂ ಪ್ರಕೃತಿಯಲ್ಲಿದ್ದು ಕೊಂಡು ಕರ್ಮಾನುಸಾರವಾಗಿ ಚಾಗರಾವಸ್ಥೆಗೆ ಬಂದ ಆತ್ಮನಿಗೆ ಇಲ್ಲದಿದ್ದ ಅಲ್ಲಿ ಸ್ಮರಣೆಯನ್ನು ಹುಟ್ಟಿಸುತ್ತದೆ. ೧೧ ಅದೇ ಪ್ರತ್ಯಭಿಜ್ಞೆಯೆನಿಸಿಕೊಳ್ಳುವದು, ವಿಚಾರಮಾಡಲಾಗಿ ಪ್ರತ್ಯಭಿಜ್ಞೆಯೆಂದರೆ ಮೊದಲು ಅನುಭವಿಸಿದ ವಸ್ತುವನ್ನು ನೋಡುತ್ತಾ ಆ ವಸ್ತುವಿನೊಡನೆ ಹಿಂದೆ ನಡೆ ದುದನ್ನು ಸ್ಮರಿಸುವುದೇ ಹಿಂದೆ ಒಂದು ದೇಶದಲ್ಲಿ ನೋಡಲ್ಪಟ್ಟ ಪುರುಷನನ್ನು ಮತ್ತೊಂದು ಕಾಲದಲ್ಲಿ ಮತ್ತೊಂದು ದೇಶದಲ್ಲಿ ನೋಡುವಾಗ ಆತನೇ ಈತನು ಎಂಬ ನೆನಪು ಬರುವುದೇ ಪ್ರತ್ಯಭಿಜ್ಞೆಗೆ ದೃಷ್ಟಾಂತವು, ಇದರಂತೆ ಆತ್ಮನಿಗೆ ಸುಖನಿದ್ರೆಯನ್ನು ಅನುಭವಿಸಿದ ಸ್ಮ ರಣೆಯುಂಟಾಗುತ್ತದೆ. ಅನುಭವಿಸಲ್ಪಡದ ಪದಾರ್ಥವು ಎಂದಿಗೂ ಸ್ಮರಣೆಗೆ ಬಾರದು, ಆ ನಿದ್ರೆಯಲ್ಲಿ ನಿ ದ್ರಾಸುಖವನ್ನು ತಿಳಿಯದಿದ್ದರೆ ಹಿಂದೆ ಹೇಳಿದ ಸ್ಮರಣೆಯು ಹೇಗೆ ಸಂಭವಿಸುವದು ? ಕಾರಣವಾಗಿರುವ ಪ್ರಕೃತಿಯ ಕಾರವಾಗಿರುವ ಸಂಸ್ಕಾರವೂ ಜಾಗರವಸ್ಥೆ ಯಲ್ಲಿ ತೆರೆಯಲ್ಪಟ್ಟ ಮನೋರೂಪವಾದ ಕರಣಕ್ಕೆ ಹೇಗೆ ಪ್ರಾಪ್ತವಾಗುವದು ಹೇಳು ಅಂದರೆ ಕೇಳು. ೧೫ ಸುಷುಪ್ತಿಯಲ್ಲಿದ್ದ ಪ್ರಕೃತಿಯು ತಾನೇ ತಿರಿಗಿ ವಿಕಾರವನ್ನು ಹೊಂದಿ ಮನೆ ರೂಪವಾಗುವುದರಿಂದ ಆ ನಿದ್ರಾಸುಖಾನುಭವದ ಸಂಸ್ಕಾರಗಳು ಸ್ಮರಣೆಗೆ ಬರುತ್ತವೆ. ೧೩.