ಪುಟ:ಅನುಭವಸಾರವು.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬( ಕ. ೩ ಗುರುವೆನೀವೀಗಳಂತರಿಸದೀ ಸಂದೇಹ | ವಿರದಂತೆ ವೇದಶರದರ್ಥ ಮಂ ಪೇಳಿ ಪೊರೆವುದೆಂದೆರಗಿದನು ಸೂನು | ೨ ನೇ ಸೂತ್ರ, ಆತ್ಮಂಗೆ ಸಂಸಾರಾಧ್ಯಾಸನಿರೂಷಣ. ಸೋಪಾಧಿಯಾದ ಸಂಸಾರನಾ ಪರಮಚಿ | ದೂಪಂಗೆ ಘಟಪುದದು ನೈಜವಲ್ಲ || ೧ ತಿಕಂದಕೇಳೀಪ ತ್ಸೆಯಂದವೆಲ್ಲ ವನು ಮುದ) ದಿಂದೆ ನಾನೊರವೆ ನಿದು ಗೋಪ್ಯವಾದರ್ಥವೆಂದು ನೀನನುಭವಿಸುವಂತೆ || ೨ ಅಹಮಿಂಗೆ ಸಂಸಾರವಹುದೆತಪ್ಪದು ನೋಡ | ಅಹನುವಿಡಿದಾತ್ಮ ನೆಳಗೆ ತತ್ಸಂಸಾರ | ವಿಹುದಿಂತುಪಾಧಿವಶದಿಂದ || ೩ ಸುತನೆಕೇಳಧ್ಯಾಸಪ್ರತಿಬಿಂಬಾವಚಿ ನೃ | ಗತಿಯಿಂದುಸಾಧಿಯದು ಮರುತೆರದೊಳಂ ಚಿತಮಪ್ಪುದಾತ್ಮನೊಳಗಲ್ಲಿ | ಪ್ರಸವಧಮ್ಮಿಣಿಯೆನಿಸುತೆಸೆವುದಾಗೀಪ್ರಕೃತಿ | ವಶನಾಗುತಾತ್ಮನದರ ಹವಣಾಗೆ ಭಾ| ವಿಸಲವಚಿ ನವದೆನೆಡು | ಎಲೈ ಗುರುವೇ, ನೀವು ಸಾವಕಾಶಮಾಡದೆ ಸಂಶಯವಿರದ ಹಾಗೆ ಉಪನಿಷತ್ತಿನ ಅರ್ಥವನ್ನು ಹೇಳಿ ಕಾಪಾಡಬೇಕು ಎಂದು ಶಿಷ್ಯನು ಗುರುವಿಗೆ ನಮಸ್ಕರಿಸಿದನು. ೨ ನೇ ಸೂತ್ರ, ಆತ್ಮನಿಗೆ ಸಂಸಾರಾಧ್ಯಾಸನಿರೂಪಣತೆ. ಉಪಾಧಿಯಿಂದ ಕೂಡಿರುವ ಸಂಸಾರವು ಆ ಉತ್ಕೃಷ್ಟ ಜ್ಞಾನಸ್ವರೂಪನಾದ ಪರಮಾತ್ಮನಿಗೆ ಸಂಭವಿಸಿದಾಗ್ಯೂ ಅದು ಸಹಜವಾದದ್ದಲ್ಲ. ೧ ಎಲೈ ಮಗನೇ ನೀನು ಮಾಡಿದ ಪ್ರಶ್ನೆಯೆಲ್ಲಕ್ಕೂ ಸರಿಯಾದ ಉತ್ತರವನ್ನು ಇದು ರಹಸ್ಯವಾದ ಅಭಿಪ್ರಾಯವೆಂದು ನೀನು ತಿಳಿದುಕೊಳ್ಳುವ ಹಾಗೆ ಸಂತೋಷದಿಂದ ಹೇಳುತ್ತೇನೆ. ಅಹಂಕಾರಕ್ಕೆ ಸಂಸಾರ ಬಂಧವುಂಟಾಗುವದೇ ? ಹಾಗೆ ಹೇಳುವದು ತಪ್ಪು ; ವಿ ಚಾರ ಮಾಡಲಾಗಿ ಅಹಂಕಾರವನ್ನು ಹಿಡಿದಿರುವ ಆತ್ಮನಲ್ಲಿ ಸಂಸಾರವು ಉಪಾಧಿ ಯ ದೆಸೆಯಿಂದ ಇರುವದು. - ಎಲೈ ಶಿಷ್ಯನೇ ಕೇಳು, ಅಧ್ಯಾಸ, ಪ್ರತಿಬಿಂಬ, ಅವಚಿನ್ನ ಎಂಬ ಅವಸ್ಥೆಗಳಿಂದ ಉ ಪಾಧಿಯು ಆತ್ಮನೊಳಗೆ ಮೂರು ವಿಧವಾಗಿ ಸಂಬಂಧಿಸಿಕೊಂಡಿರುವದು. ಪ್ರವೃತ್ತಿ ಧಮ್ಮವುಳ್ಳದ್ದೆಂದು ಹೇಳಿಸಿಕೊಂಡು ತೋರುವ ಪ್ರಕೃತಿಗೆ ಆತ್ಮನು ಸ್ವಾಧೀ ನನಾಗಿ ಆ ಪ್ರಕೃತಿಯ ಪ್ರಮಾಣವುಳ್ಳವನಾಗಲು, ಅದೇ ಅವಚ್ಛಿನ್ನವೆಂಬ ಉಪಾಧಿ ಯೆಂದು ತಿಳಿ. - - - ೩