ಪುಟ:ಅನುಭವಸಾರವು.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧ ತಿ ಮತಿವಂತಕೇಳಮ್ಮ ಮತದೊಳಾಸಂಸಾರ ಕತಿಮಿಥ್ಯಹುದು ಸಾಧಿಯದು ಫುಟಸದಾ | ಕತದಿನಿಂತಿದನು ತಿಳಿವೇಳೆ! » ಪರಮಾರ್ಥವೆಂದು ಸಂಸರಮಂ ಪೇಳೆ ಡಾ ! ಭರಿತಮಪ್ಪರಿವಿಗಿ - ಹಪರದಗತಿಯೆಂತು | ದೊರೆವುದೆ ನಿನ್ನ ಮತದಲ್ಲಿ ಇಹಪರಂಗಳಗಮನವಹವಾದುಪಾಧಿಯಿಂ | ದಹುದೆನಲುಪಾಧಿಯ ದುಸತ್ಯವೋ ಪುಸಿ | ಸಹಜವಾಗುಳ್ಳುದನೆ ಪೇಳು ! 9 ತದುಪಾಧಿಸತ್ಯವೆನಿಸಿದ ಪಕ್ಷದಲ್ಲಿ ತನ | ಗದರಿಂದಲಾದಗಮನವಂ ಸ ಹಜವೆಂ ಬುದನೀನೊಡಂಬಡಲು ಬೇಕು ೫ ಅಂತಾದೆಡವ್ಯಾಪಕಂತಾನೆನಹು | ದಿಂತೊಡಂಬಟ್ಟಡದರಿನೆಲ್ಲಾ ವಿಕೃತಿ ಯಂ ತಾಳ್ಳನೆಂಬುದಿದು ಸಿದ್ಧ || & ನಿನಗದೇವತವಪ್ಪುದೆನಲಾನಂ ಮಿಥ್ಯ ಯೆನಬೇಹುದೆಂದೋಡದ ರಿನಸಸಿದ್ದಾಂತ | ವೆನಿಪುದಿನ್ನೇನುಗತಿ ಹೇಳು || 4 m ೧ ಬುದ್ಧಿಶಾಲಿಯಾದ ಶಿಷ್ಯನೇ ಕೇಳು. ನಮ್ಮ ಮತದಲ್ಲಿ ಅಸಂಸಾರವು ಸುಳ್ಳಾಗಿ ರುವದು ಯಾಕಂದರೆ, ಆ ಉಪಾಧಿಯು ಆತ್ಮನಿಗೆ ತಗಲುವದಿಲ್ಲ. ಈ ಸಂಗತಿಯ ನ್ನು ತಿಳಿಯುವಂತೆ ಹೇಳುತ್ತೇನೆ. ೨ ಆ ಸಂಸಾರವನ್ನು ಸತ್ಯವೆಂದು ಹೇಳುವದಾದರೆ, ಪರಿಪೂರ್ಣವಾದ ಆತ್ಮನಿಗೆ ನಿನ್ನ ಮತದಲ್ಲಿ ಇಹಲೋಕಪರಲೋಕಗತಿಗಳು ಹೇಗೆ ದೊರೆಯುವವು ? 4 ಐಹಿಕಾಮುಕ ಗತಿಗಳು ಅಹಂಕಾರ ಮುಂತಾದ ಉಪಾಧಿಯಿಂದ ಆಗುವವೆಂ ದರೆ ಆ ಉಪಾಧಿಯು ದಿಟವೋ ಸುಳ್ಳೋ ನಿಜವಾಗಿರುವದನ್ನು ಹೇಳು. ೪ ಆ ಉಪಾಧಿಯು ಸತ್ಯವೆಂದು ಹೇಳುವ ಪಕ್ಷದಲ್ಲಿ ಆತ್ಮನಿಗೆ ಅದರಿಂದ ಸಂಭವಿಸಿದ ಗತಿಯನ್ನು ಸತ್ಯವಾದದ್ದೆಂದು ನೀನು ಒಪ್ಪಿಕೊಳ್ಳ ಬೇಕು. ೫ ಹಾಗೆ ಒಪ್ಪಿಕೊಂಡಲ್ಲಿ ಆತ್ಮನನ್ನು ವ್ಯಾಪಕನಲ್ಲವೆಂದು ಹೇಳ ಬೇಕಾಗುವದು. ಅದನ್ನು ಸಂಮತಿಸಿದರೆ ಅದರಿಂದ ಆತ್ಮನು ಎಲ್ಲಾ ವಿಕಾರಗಳನ್ನು ಧರಿಸಿದನೆಂಬರ್ಥ ವು ಸಿದ್ಧವಾಗುವದು. ೬ ಈ ಅರ್ಥವೇ ನಿನಗೆ ಸಂಮತವಾದಲ್ಲಿ ಆತ್ಮನನ್ನು ಅಸತ್ಯವೆಂದು ಹೇಳಬೇಕಾಗುವ ದು, ಹಾಗೆ ಹೇಳುವದಾದರೆ ಸಿದ್ಧಾಂತಕ್ಕೆ ವಿರೋಧವುಂಟಾಗುತ್ತದೆ. ಇದಕ್ಕೇನು ಉಪಾಯ? ಹೇಳು.