ಪುಟ:ಅನ್ನಪೂರ್ಣಾ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನ ಪೂರ್ಣಾ

ಆ ಮುದುಕಿ ಶನಿ ಶಪಿಸಿದಳಂತೆ. ಕವಿ, ನಿನ್ನ ನಾಲಿಗೆ ಎರಡು ಸೀಳಾಗ ಲೆಂದು ಉರುವಲು ಸೌದೆಯೆತ್ತಿ ತಾಯಿಗೆ ಬೀಸಿದಳಂತೆ. ಆ ತಾಯಿ ಬ೦ದು ಮಗಳ ಕತ್ತನ್ನೇ ಹಿಸುಕಲು ಪ್ರಯತ್ನಿಸಿದಳಂತೆ.... ಈಯೆಲ್ಲಾ ವರದಿ ಹಾಲಿ ನವಳಿಂದ ನನ್ನಾಕೆಯ ಮೂಲಕ ನನಗೆ ತಲುಪಿದಾಗ, ನಾನು ತಾಳಲಾರದೆ ಸಂಕಟ ಅನುಭವಿಸುತ್ತಾ ಕುಳಿತೆ.

ಆ ದೀಪಾವಳಿಗೆ ತನ್ನ ಕೂಸು ಕೃಷ್ಣನಿಗೆ ಒಂದು ತಿಂಗಳು ತುಂಬುವು ದೆಂದು ತಿಳಿದಿದ್ದಳೇನೋ ಆ ಹುಚ್ಚಿ. ನಿಜಕೂ, ತಿಂಗಳು ತುಂಬಿತು. ಆದರೆ, ಆದರೆ, ತಿಂಗಳ ಮೇಲೆ ಮತ್ತೊಂದು ದಿನ ತುಂಬಲಿಲ್ಲ. !

ಕಳೆದ ದೀಪಾವಳಿಯ ದಿನವೇ ಜ್ವರಪೀಡಿತ ಕೃಷ್ಣ ಕಣ್ಣು ಮುಚ್ಚಿದ್ದು ,

ಆ ವರ್ಷ ನಮ್ಮ ಬೀದಿಯ ಹುಡುಗರ ತಂಡ, ಆ ಶೋಕದ ಮೇಲೆ ಉತ್ಸವದ ಗೋರಿ ಕಟ್ಟಲು ಯತ್ನಿಸಿದ್ದುಂಟು. ಆದರೆ ಅದು ವ್ಯರ್ಥ ಯತ್ನಿ' ಮುದುಕಿಗೆ ನಿಜವಾಗಿಯೂ ಸೀಡೆ ತೊಲಗಿತು-ಎನಿಸಿರಬೇಕು. ಆದರೂ ಆಕೆ ಕಂಠಬಿರಿಯುವ ಹಾಗೆ ರೋದಿಸಿದಳು. ಅದು ನಾಟಕ. “ ಆ ಅಜ್ಜ ನಿಜಕ್ಕೂ ಅಳ್ತಾ ಇದ್ದಾಳೇನು ? ” ಎಂದು ನಮ್ಮ ಜಯಾ ಕೂಡ ಸಂದೇಹ ವ್ಯಕ್ತಪಡಿಸಿದಳು. ಆದರೆ, ಆ ಕವಲೆ ? ನಡುರಾತ್ರೆ ಮೇಲೂ ಬೆಳಗು ಮುಂಜಾವದ ಹೊತ್ತಿಗೂ ಆಕೆಯ ಕ್ಷೀಣಸ್ವರದ ಯಾ ಅಲೆಯಲೆಯಾಗಿ ವಾತಾವರಣವನ್ನು ತುಂಬಿ ದೂರ ದೂರ ಹೋಗುತ್ತಿ

ಒಂದು ವರ್ಷದ ಹಿಂದಿನ ಮಾತಾಯಿತು ಅದು, ಆ ಮೇಲೆ ಯಣ ಪ್ರಕಾರ ಶಾರೀರಿಕ ವ್ಯಾಪಾರ.

ನನ್ನಾಕೆ ಹೇಳುತ್ತಿದ್ದಳು:

"ದುಃಖವಾಗುತ್ತೇ೦ದ್ರೆ....ಒವೆ ಯಾದರೂ ನಗೋದಿಲ್ಲ ಶೃಂಗಾರವೂ ಇಲ್ಲ. ದಿನಾ ಆ ಪಿಶಾಚಿ ಜತೇಲಿ ಜಗಳಾನೇ. ಅದ ಜೀವನವೋ ಏನು ಕಥೆಯೋ !.... ”

ಬೇರೆ ಬಯಕೆ ಇತ್ತೇನೋ ಅವಳಿಗೆ- ಯಾರಿಗೆ ಗೊತ್ತು ? ಜೀವನಕ್ಕೆ ಊರುಗೋಲಾಗುವ ಗಂಡು ಮಗುವೊಂದು ತನಗೆ ಮುತ್ತ ಬಲ್ಲ ವೀರ ಸಂತಾನ, ಮರ್ಯಾದೆಯ ಜೀವನವೆನ್ನುವುದು ಇನ್ನು ಈ ಆದರೂ ಬಿಡುಗಡೆ ? ಸಾಧ್ಯವೇ ಇಲ್ಲವೇ ಅದು ? ಎಂದೆಂದಿಗೂ?