ಪುಟ:ಅನ್ನಪೂರ್ಣಾ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

________________

೮ ಅನ್ನಪೂರ್ಣಾ

ಯೊಳಕ್ಕೆ ಕಾಲಿಟ್ಟೆವು, ಸಾಕು-ಈ ಜೀವನದ ಈ ಎಲ್ಲ ರುದ್ರ ದೃಶ್ಯಗಳಿಗೆ ಮರುಸ್ಥಗಾರರಾದಳ ಸಾಕು.

ಅಗೋ ಜಯಾ!" ವರುಷಕ್ಕೆ ಬರುವುದು ದೀವಳಿ ಹಬ್ಬಾ-ಊರಿಗೆ ದೊಡ್ಡಾದು" ಎಂದು ಹಾಡುತ್ತ ಕುಣಿಯುತ್ತ ಬರುತ್ತಿದ್ದಾಳೆ. ಈ ವರ್ಷ ರೈಲು ಪ್ರವಾಸ ಮಾಡಿದಾಗ ಭಿಕ್ಷುಕನೊಬ್ಬನ ಬಾಯಿಂದ ಕೇಳಿ ನೆನಸಿಟ್ಟ ಹಾಡು ಅದು !

ಯಾಕೋ ಉದ್ವಿಗ್ನಳಾದಳಲ್ಲಾ ಜಯಾ ?

ಅಣ್ಣಾ-ಅಮ್ಮಾ ಎಂಥವರೇ ನೀವು.... ನಮ್ಮನೆ ಮುಂದಿನ ಸಾಲು ದೀಪಗಳೆಲ್ಲ ಎಣ್ಣೆ ಇಲ್ಲೆ ಆರಿ ಹೋಗ್ತಾ ಇವೆ....ನೋಡ್ತಾ ನೋಡ್ತಾ ಸುಮ್ಮೆ ನಿಂತಿದೀರಲ್ಲ !

ಆಕೆಯನ್ನೆತ್ತಿಕೊಂಡು ಆ ಬಾಬ್ ಕ್ರಾಪನ್ನು ನಾನು ತೀಡಿದೆ. ಗೇಟಿನ ಬಲ ಭಾಗದಲ್ಲಿ ಗಾಳಿಯೊಡನೆ ಕ್ಷೀಣವಾಗಿ ಲಲ್ಲೆಯಾಡುತ್ತಿದ್ದ ದೊಡ್ಡದೊಂದು ಹಣತೆಯ ಕಿಳುಸೊಡರಿನ ಕಡೆಗೆ ಬೊಟ್ಟು ಮಾಡಿದೆ.

"ನೋಡಿದೆಯಾ ಜಯಾ....ಎಣ್ಣೆ ತೀರ್ತಾ ಇದೆ....ಆದರೂ ಬದುಕುವ ಬಯಕೆ ಆ ಸೊಡರಿಗೆ"

"ಹಿಹ್ಹಿ!"

"ಬದುಕಿ ಬೆಳಗಬೇಕೆನ್ನೋ ಆಸೆ."

ಗದ್ಗದಿತ ಕಂಠದಿಂದ ನನ್ನಾಕೆ, "ಸಾಕು ನಿಮ್ಮ ಕವಿತೆ" ಎಂದಳು.

ಏನೂ ತಿಳಿಯದ ಜಯಾ, "ಜಾಣಮರಿ ನನ್ನಣ್ಣ" ಎಂದು ಮೆಚ್ಚುಗೆಯ ಮಾತು ಹೇಳಿ ನನ್ನ ಮೂಗಿಗೆ "ಉಮ್ಮ" ಕೊಟ್ಟಳು.

ತೇವಗೂಡಿದ್ದುವು ನನ್ನ ಕಣ್ಣುಗಳೆರಡೂ.

ಕಮಲೆಯ ಮನೆಯಲ್ಲಿ ಹೊರಗಿನ ದೀಪವಾರಿಸಿ ಬಾಗಿಲು ಮುಚ್ಚಿದರು.

________________