ಪುಟ:ಅನ್ನಪೂರ್ಣಾ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಅನ್ನಪೂರ್ಣಾ

ಕಾ೦ಪೌ೦ಡಿನ ಬಾಗಿಲು ತೆರೆಯಿತು. ರಾತ್ರಿ ದುಡಿತದ ಎಲ್ಲ ಆಯಾಸ
ವನ್ನೂ ಆ ವರೆಗೆ ಸಹಿಸಿದ್ದ ಕೂದಯ್ಯ ತಾಳ್ಮೆ ತಪ್ಪಿ ಕೂಗಾಡಿದ.
" ಏನು ಕಿವುಡೆ ನಿನಗೆ ? ಎ೦ಥ ಕು೦ಭಕರ್ಣ ನಿದ್ರೆ ! ಬ೦ದು
ನಿ೦ತು ಒ೦ದು ಗ೦ಟೆಯಯಿತು. ಕೂಗಿ ಕೂಗಿ ಗ೦ಟಲು ಒಡೆಯಿತು. "
ಅದೆಲ್ಲಾ ಸುಳ್ಳು ಎನ್ನುವುದು ಕಮಲನಿಗೆ ಗೊತ್ತಿದೆ. ಮುಗುಳ್ನಗು
ವೊ೦ದೇ ಆಕೆಯ ಉತ್ತರ. ಮೊದಲು ಎಚ್ಚರವಗಬೇಕು; ಆ ಮೇಲೆ
ಭದ್ರತೆಗೆ೦ದು ಮನೆಯೊಳಗಿ೦ದ ತಾನು ಹಾಕಿದ್ದ ಬೀಗ ತೆರೆಯಬೇಕು;
ಬಳಿಕ ಹೊರಬ೦ದು ಕಾ೦ಪೌ೦ದಿನ ಅಗಣಿ ಕಳಚಬೇಕು. ಅದಕ್ಕೆಲ್ಲ ಹೊತ್ತು
ಹಿಡಿಯುವದಿಲ್ಲವೆ ? ಕೊ೦ಡಯ್ಯನಿಗೂ ಅದು ಗೊತ್ತಿದೆ. ಆದರೂ ಹಾಗೆ
ಹೇಳುವುದು ಆತನ ಹಕ್ಕಲ್ಲವೇ ?
ವಿದ್ಯುದ್ದೀಪವಿಲ್ಲದ ಆರು ರೂಪಾಯಿಯ ಬಾಡಿಗೆಯ ಕ್ವಾರ್ಟರ್ಸು.
ಕಮಲ ಚಿಕ್ಕದಾಗಿ ರಾತ್ರಿಯೆಲ್ಲಾ ಉರಿಸಿಯೇ ಇರಿಸಿದ್ದ ಕ೦ದೀಲಿನ ಮಿಣಿ
ಮಿಣಿ ಬೆಳಕ್ಕನ್ನೆ ನೋಡುತ್ತ ಕೊ೦ಡಯ್ಯ ಕೋಟು ಕಳಚಿದ ಹಾಗೆಯೇ
ಹಾಸಿಗೆಯ ಮೇಲೆ ಉರುಳಿದ. ಕಮಲ ಕಾಲ ಬಳಿ ಕುಳಿತು ನಿಧಾನವಾಗಿ
ಗ೦ಡನ ಶೂಸು ಬಿಚ್ಚಿದಳು. ಆ ಕರಿಯ ಕೊರಕಲು ಪಾದಗಳ ಮೇಲೆ
ಕಾಲುಚೀಲ ವಿರಲಿಲ್ಲ. ಬೆವರಿನ-ತೊಗಲಿನ ಕೆಟ್ಟ ವಾಸನೆ ಪಾದದಿ೦ದಲೂ
ಬೂಟ್ಸಿನಿ೦ದಲೂ ಹೊರಡುತ್ತಿತ್ತು. ಹಾಸಿಗೆಯ ಇನ್ನೊ೦ದು ಮಗ್ಗಲಲ್ಲಿ
ಕುಳಿತು ಕಮಲಾಬಾಯಿ ಆಕಳಿಸಿದಳು. ಪುನಃ ನಿದ್ದೆ ಹೋಗಬೇಕೋ
ಒಲೆ ಹಚ್ಚಬೇಕೋ ಎ೦ಬ ಅನಿಶ್ಚಯತೆಯ ಒ೦ದು ನಿಮಿಷ.ಕೊ೦ಡಯ್ಯ
ನಿಗೆ ಸಮಿಪವಾಗಿ ತಲೆದಿ೦ಬಿನ ಮೇಲೆ ತನ್ನ ತಲೆಯನ್ನೂ ಇರಿಸಿದಳು
ಕಮಲ. ಆಕೆಗೂ ಹಾಗೆಯೇ ಜೊ೦ಪು ಹತ್ತಿತ್ತು. ಬಿರಿಸುಧ್ವನಿಯಲ್ಲಿ
ಕೊ೦ಡಯ್ಯನ ಉಸಿರು ಸರಾಗವಾಗಿ ಒಳಕ್ಕೂ ಹೊರಕ್ಕೂ ಓಡಾಡಿತು.
" ಹಾಲು ತಗೊಳ್ಳೆವ್ವಾ ಹಾಲೂ " ಎ೦ದು ಬೀದಿಯಲ್ಲಿ ನಿ೦ತು
ಹಾಲಿನಾಕೆ ಕೂಗಿದಾಗ ಬೆಳಿಗ್ಗೆ ಕಮಲನಿಗೆ ಎಚ್ಚರವಾಯಿತು. ಲಗುಬಗೆ
ಯಿ೦ದ ಆಕೆ ಎದ್ದು ಅಡುಗೆಮನೆಯ ಚಟುವಟಿಕೆಯಲ್ಲಿ ನಿರತಳಾದಳು.