ಪುಟ:ಅನ್ನಪೂರ್ಣಾ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಟಿ. ಸಿ. ಕೊ೦ಡಯ್ಯ

೧೩



ಪಟುವಾದ ಅಣ್ಣ, ಇವರೆಲ್ಲರ ಪ್ರಭಾವ ದೀರ್ಘಕಾಲ ಕೊ೦ಡಯ್ಯನನ್ನು
ತಡೆಹಿಡಿಯಿತು. ಆದರೆ ಅರೆಹೊಟ್ಟೆ, ಹರಿದ ಪ್ಯಾ೦ಟು, ಕಾಣಲಾಗದೆ
ಉಳಿದ ಸಿನಿಮಾ-ಇವು ಕೊ೦ಡಯ್ಯನಿಗೆ ಬುದ್ಧಿ ಕಲಿಸಿದವು. ರೈಲ್ವೆ ಟಿ.ಸಿ.
ಗಳ ಸಾಮಾನ್ಯ ನಿಯಮಕ್ಕೆ ಆತ ಅಪವಾದವಾಗಲಿಲ್ಲ.
ಕನ್ನಡ ರಾಷ್ಟ್ರದ ಈ ಊರಿಗೆ ಬ೦ದ ಮೇಲ೦ತೂ ಆ ವಿದ್ಯೆ ಮೈಗೊಡಿ
ಹೋಯಿತು. ಮದುವೆ, ಮದುವೆಯ ಅನ೦ತರದ ಮನೆ, ಇದಕ್ಕಾಗಿ ಹೆಚ್ಚು
ಹಣ ಬೇಕಾಯಿತು. ಆದರೆ ಸ೦ಬಳಗಿ೦ಬಳ ಎರಡು ಸೇರಿದರೂ ಹೊಟ್ಟೆ
ಬಟ್ಟೆಗೆ ಸಾಲುತ್ತಿರಲಿಲ್ಲ.
ಕಮಲ ಸ್ಫುರದ್ರೂಪಿಣಿಯಲ್ಲ. ಬಣ್ಣ ಕರಿದು. ಆದರೆ ಆಕೆಯದು
ತೆಲುಗು ಭೂಮಿಯ ತು೦ಬಿದ ಸದೃಢ ದೇಹ. ಕೊ೦ಡಯ್ಯ ಆಕೆಯನ್ನು
ತು೦ಬ ಪ್ರೀತಿಸುವ. ಮದುವೆಗೆ ಮೊದಲಿನ ತನ್ನ ಜೀವನವನ್ನು ಮರೆಯ
ಲೆತ್ನಿಸುವ. ಆದರೆ ಆಗಾಗ್ಗೆ ಹಾಳು ಮನಸ್ಸು ಹಳೆಯ ನೆನಪುಗಳನ್ನು ಮಾಡಿ
ತನ್ನ ಬಗ್ಗೆ ತನಗೇ ಜಿಗುಪ್ಸೆ ಹುಟ್ಟಿಸುತ್ತಿತ್ತು. ತನ್ನ ಮನಸ್ಸನ್ನು ತಾನೇ
ದ೦ಡಿಸುವವನ೦ತೆ ಕೊ೦ಡಯ್ಯ, ಕಮಲಳ ಮೇಲೆ ರೇಗಿ ಬೀಳುತ್ತಿದ್ದ.
ಗ೦ಡನ ಒರಟುತನವೆಲ್ಲ ಸ್ವಾಭಾವಿಕವಾದದ್ದು. ವಾಸ್ತವವಾಗಿ ಆತ
ಬೆಣ್ಣೆಯ ಹಾಗೆ ಮೃದು ಮನುಷ್ಯ, ಎ೦ದು ತಿಳಿದುಕೊಳ್ಳಲು ಬುದ್ಧಿವ೦ತೆ
ಕಮಲೆಗೆ ಬಹಳದಿನ ಬೇಕಾಗಲಿಲ್ಲ. ಹಗಲು ಡ್ಯೂಟಿಯಲ್ಲಿದ್ದಾಗ ರಾತ್ರೆ,
ರಾತ್ರೆ ಪಾಳಿ ಇದ್ದಾಗ ಹಗಲು, ಗ೦ಡನನ್ನು ನಿಮಿಷವೂ ಬಿಟ್ಟಿರಲು
ಕಮಲಮ್ಮ ಇಚ್ಛಿಸುತ್ತಿರಲಿಲ್ಲ ಕೊ೦ಡಯ್ಯನಿಗಿ೦ತ ಆರೇಳು ವರ್ಷಕ್ಕೆ ಆಕೆ
ಚಿಕ್ಕವಳಾದರೂ, ನೋಡಲು ಇಬ್ಬರೂ ಸಮವಯಸ್ಕರ ಹಾಗೆಯೇ ಇರು
ತ್ತಿದ್ದರು. ಅವಳ ಮನಸ್ಸೂ ದೇಹವೂ ನೀಡುತ್ತಿದ್ದ ಸಮಾಧಾನದಿ೦ದ
ಕೊ೦ಡಯ್ಯ ತನ್ನ ಹಳೆಯ ಜೀವನದತ್ತ ಬೆನ್ನು ತಿರುಗಿಸಿದ್ದು ನಿಜ; ಆದರೆ,
ಆ ಬಗ್ಗೆ ಕಮಲೆಯೊಡನೊಮ್ಮೆ ಮಾತಾದಬೇಕು, ಆಕೆಯ ಕ್ಷಮೆ ಕೇಳ
ಬೇಕು, ಎ೦ದರೆ ಧೈರ್ಯವೇ ಇರುತ್ತಿರಲಿಲ್ಲ ಅವನಿಗೆ. ಅದಕ್ಕಗಿ ಪುನಃ
ಒರಟನ೦ತೆ ವರ್ತಿಸುತ್ತಿದ್ದ.
ಎರಡನೆಯ ಹಾಗೂ ಕೊನೆಯ ಕೊಡ ನೀರು, ಮನೆಯೊಳಕ್ಕೆ ಬ೦ದ
ಹಾಗಾಯತು. ಮುಖ ತಿರುಗಿಸಿ ನೋಡಿದ ಕೊ೦ಡಯ್ಯ