ಪುಟ:ಅನ್ನಪೂರ್ಣಾ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಅನ್ನಪೂರ್ಣ

ಆಕೆ'ಉಸ್ಸಪ್ಪ' ಎನ್ನುತ್ತಿದ್ದಳು.
' ಕಮ್ಲೂ,ಇಲ್ಲಿ ಬಾ" ಎಂದ ಆತ ಕರ್ಕಶವಾಗಿ.
ಆಕೆ ನಗುತ್ತ ಬಂದಳು. ರಾಗವಾಗಿ 'ಏನೂ ?' ಎಂದಳು.ಹಾಗೆ
ಬರುವುದೂ ಕೇಳುವುದೂ ಆಕೆಗೆ ಹೊಸತಲ್ಲ.
....ಆ ಸಂಜೆ ಕೊಂಡಯ್ಯ ಬಾಯ್ದೆರೆಯಾಗಿ ಮತ್ತೆ ಕಮಲೆಗೆ ಕನ್ನಡ
ಭಾಷೆ ಕಲಿಸತೊಡಗಿದ. ನೀರು, ಅಕ್ಕಿ, ಬೇಡ, ಕೊಡಿ, ಇಲ್ಲ, ಕೆಲಸಕ್ಕೆ
ಹೋಗಿದ್ಡಾರೆ, ರಾತ್ರೆ ಪಾಳಿ-ಹೀಗೆ ಹತ್ತಾರು ಶಬ್ದಗಳನ್ನು ಕಲಿಸುತ್ತಿದ್ದ.
ತಾನು ಹೇಗೆ ಕನ್ನಡ ಶಬ್ದ ಪಾಠ ಕಲಿತನೋ, ಆ ಶಬ್ದಮಾಲೆಯನ್ನೇ
ಈಕೆಗೂ ಹೇಳಿಕೊಡುತ್ತಿದ್ದ-
ಆ ರಾತ್ರೆಯೂ ಪುನಃ ನೈಟ್ ಡ್ಯೂಟಿ. ಭಾನುವಾರ ಬಂದು ಕಳೆದ
ಮೇಲೆ ಮುಂದೆ ಏಳುದಿನ, ದಿನದ ಸರತಿ.
ಆ ಜಟಕ ಸಾಲು, ಊರಿನ ಎರಡು ಮೂರು ಕಾರುಗಳು, ವಿಶಾಲ
ವಾದ ನಿಲ್ದಾಣ; ರೈಲ್ವೆ ನಿಲ್ದಾಣದ ಹೊರತಾಗಿ ಬೇರೆಲ್ಲೂ ಕಾಣಸಿಗದಂಥ
ವಿಚಿತ್ರ ಜನಸಮ್ಮಿಲನ; ಆ ವಿಶಿಷ್ಟ ವಾಸನೆ.
"ಹಲ್ಲೋ" ಎಂದ ಒಬ್ಬ ಟಿ. ಸಿ.
ಇನ್ನೊಬ್ಬನೆಂದ," ವಾಟ್ ಮ್ಯಾನ್? ಎಲ್ಲಾ ಓ ಕೆ?"
ಪೂನಾದಿಂದ ಸಂಜೆಯಗಾಡಿ ಬಂದುದಾಗಿತ್ತು. ಸ್ಟೇಶನ್ನು ಬರಿದಾ
ಗಿತ್ತು. ಬುಕಿಂಗ್ ಆಫೀಸಿನಲ್ಲಿ ಅವರು ಕಲೆತವರು.ಸ್ಟೇಶನ್ ಮಾಸ್ತರರ
ಹೊಸ ಉಡುಪಿನಿಂದ ಹಿಡಿದು, ಗಂಡನ ಮನೆಯಿಂದ ವಾಪಸುಬಂದಿದ್ದ
ಅವರ ಮೂರನೆಯ ಮಗಳವರೆಗೆ, ಅಲ್ಲಿ ಮಾತು ಹೊರಟಿತು. ಎಲ್ಲರೂ
ಹಾಗಿಲ್ಲ ಎನ್ನುವುದು ಕೊಂಡಯ್ಯನಿಗೆ ಗೊತ್ತಿತ್ತು. ಒಬ್ಬಿಬ್ಬರು,ಅದರಲ್ಲೂ
ಮುಖ್ಯತಃ ಒಬ್ಬ ರೇಲ್ವೆ ಮೆನ್ಸ್ ಫೆಡರೇಶನ್, ಯೂನಿಯನ್, ಮುಷ್ಕರ,
ಎಂದು ಮಾತಾಡುತ್ತಿದ್ದ.ಬೇರೆ ಒಬ್ಬಿಬ್ಬರು,ಕಣ್ಣುಮುಚಿ 'ಗಿಂಬಳ'ತೆಗೆದು
ಕೊಳ್ಳುವವರು ,ಉಳಿದ ವಿಷಯಗಳಲ್ಲಿ 'ಧಾರ್ಮಿಕ' ರಾಗಿದ್ದರು. ದುಷ್ಟ
ತನದ ಪ್ರತಿಮೂರ್ತಿ ಎಂದರೆ ಮಿಸ್ಟರ್ ಪಾಂಡ್ಯ. ಬೆಳಿಗ್ಗೆ ಲೋಕಲಿಗೆ
ಹೋಗಿ ಸಂಜೆ ಲೋಕಲಿಗೆ ಬರುವ ಪ್ರತಿಯೊಬ್ಬ ಕಾಲೇಜ್ ಹುಡುಗಿಯ