ಪುಟ:ಅನ್ನಪೂರ್ಣಾ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ನಪೂರ್ಣಾ

೧೬

ಅವನ ಎದೆ ಡವಡವ ಹೊಡೆದುಕೊಂಡಿತು . ಕಮಲಳನ್ನಾತ ಸ್ಮರಿ
ಸಿದ. ತನ್ನ ತಾಯಿ ತಂದೆ ಅಣ್ಣ -ಎಲ್ಲರೂ ನೆನಪಿಗೆ ಮರಳಿ ಬಂದರು.
XXXX
ಹೀಗೆ ದಿನ ಕಳೆಯಿತು. ಕಮಲೆಗೆ ಮುಟ್ಟು ನಿಂತುದು,ಅದರ ಅರ್ಥ,
ಅನಂತರದ ಕೆಲವು ತಿಂಗಳು,ಕಮಲೆಯಲ್ಲಾದ ಬದಲಾವಣೆ, ಆ ಹೊಸ
ಅನುಭವ.....ಕೊಂಡಯ್ಯನಲ್ಲೇ ಮಾರ್ಪಾಟನ್ನುಂಟುಮಾಡಿದುವು.ರೇಶನ್
ಕಾರ್ಡಿನಲ್ಲಿ ದೊರೆಯುತ್ತಿದ್ದ ಜೋಳವನ್ನಾತ ಬಿಟ್ಟುಬಿಟ್ಟು ಕಮಲೆಗೆ ಕಷ್ಟ
ವಾಗಬಾರದೆಂದು 'ಬ್ಲಾಕ್ ' ನಿಂದ ಅಕ್ಕಿ ತಂದ. ಸಂಪಾದನೆ ಸಾಲುತ್ತಿರ
ಲಿಲ್ಲ ಕಡಿಮೆ ಮಾಡಿದ್ದ 'ಹನಿಡ್ಯೂ' ಸಿಗರೇಟನ್ನು ಸಂಪೂರ್ಣವಾಗಿಯೇ
ನಿಲ್ಲಿಸಿದ.ಆದರೂ, ಸಂಬಳಗಿಂಬಳ ಎರಡೂ ಸಾಲುತ್ತಿರಲಿಲ್ಲ.
ಈ ನಡುವೆ ಅವನಿಗೆ ಒಂದೇಸವನೆ ಜ್ವರ ಬರುತ್ತಿತ್ತು. ರೈಲ್ವೆ ಆಸ್ಪ
ತ್ರೆಯ ಔಷಧಿಯಿಂದ ಪ್ರಯೋಜನವಾಗಲಿಲ್ಲವೆಂದು ಖಾಸಗಿ ಡಾಕ್ಟರಲ್ಲಿಗೆ
ಹದ. ಅದಕ್ಕೆ ದುಡ್ಡು ಬೇಕಾಯಿತು. ತನ್ನದೇ ಆದ ಸರಕಾರವನ್ನು
ಶಪಿಸುತ್ತ ಶಪಿಸುತ್ತ ಕೊಂಡಯ್ಯ ಸಾಲ ಮಾಡಿದ.
ಊರಿಗೆ ಅಣ್ಣನಿಗೆ ಕಾಗದ ಬರೆದು ಕಮಲೆಗೆ ಸ್ಥಿತಿಗತಿಯ ಬಗ್ಗೆ
ಸಲಹೆ ಕೇಳಿದ್ದಾಯಿತು. ಅಣ್ಣ ಮಾವನ ಮನೆಗೆ ಬರೆದರೇನೋ.
ಕೊಡಯ್ಯನ ಅತ್ತೆ -ಮಾವ ಇಬ್ಬರೂ ಬಂದು, ಗರ್ಭಿಣಿಯಾದ ಮಗಳನ್ನು
ಮೈಮುಟ್ಟಿ ನೋಡಿದರು. ಅಕ್ಕಿಯಿಲ್ಲದ-ಜೋಳ ಬೆಳೆಯುವ-ಕನ್ನಡ,ದೇಶ
ದಿಂದ, ತಮ್ಮ ಮಗಳನ್ನು ಕರಕೊಂಡೇಹೋದರು.
ಹೊರಟ ದಿನ ಮಾವ ನಗುತ್ತ ಅಭಿಮಾನಪಡುತ್ತ ಹೇಳಿದ."ಕೊಂಡ
ಯ್ಯಗಾರು, ಇದು ಸುಡುಗಾಡಿನ ಪಟ್ಟಣ. ನಮ್ಮ ಕಡೆಗೇ ವರ್ಗಮಾಡಿಸಿ
ಕೊಳ್ಳಿ. ಪ್ರಯತ್ನಿಸಿ"
ಕಮಲಮ್ಮ ಊರಿಗೆ ಹೋದ ಮೇಲೆ ' ಬಿಕೋ ' ಎನ್ನುತಿದ್ದ ಮನೆ
ಮಸಣವಾಗಿ ತೋರಿತು ಕೊಂಡಯ್ಯನಿಗೆ. ಪುನಃ ಆತ ಒಂದೇಸವನೇ ಸಿಗ
ರೇಟು ಸೇದಲು ಶುರುಮಾಡಿದ. ಬಿಡುವು ದೊರೆತಾಗಲೆಲ್ಲ ಪತ್ತೇದಾರಿ ಕತೆ
ಗಳನ್ನೋದತೊಡಗಿದ. ಏನೇನೋ ತೃಪ್ತಿಯಾಗಲಿಲ್ಲ. ಏನೇನೋ ರಾಜ
ಕೀಯ ಪತ್ರಿಕೆಗಳನ್ನೋದತೊಡಗಿದ. ಆದರೂ ಮನಸ್ಸು ಸಿಮಿತಕ್ಕೆ ಬರಲಿಲ್ಲ.