ಪುಟ:ಅನ್ನಪೂರ್ಣಾ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಟಿ.ಸಿ ಕೊಂಡಯ್ಯ

೧೯

ತನಗೇ ತಿಳಿಯದ ಹಾಗೆ ಕೊಂಡಯ್ಯ ಕೂಗಾಡಲು ಆರಂಭಿಸಿದ್ದ.
"ಗೇಟು ತೆರೆಯಿರಿ” ಎನ್ನುತ್ತಿದ್ದ. ಆತನೊಬ್ಬ ಗೇಟಿನ ಹೊರಗಿಂದ.
ಮೂರುಸಾವಿರ ಜನ ವುಳಗಿಂದ. ನಡುವೆ ಕಬ್ಬಿಣದ ಭೀಮದ್ವಾರ ಮತ್ತಿ
ಬ್ಬರು ಬಡಕಲು ಮೋರೆಯ ಪೋಲೀಸರು. ಮೊದಮೊದಲು ಕೆಲಸಗಾರರಿಗೆ,
ಟಿ.ಸಿ.ಕೊಂಡಯ್ಯ ಏನು ಮಾಡುತ್ತಿದ್ದನೆಂಬುದು ಗೊತ್ತಾಗಲಿಲ್ಲ.ಆತನೂ
ತಮ್ಮ ಪಕ್ಷವೇ ಎಂದು ತಿಳಿದಾಗ ಅವರಿಗೆ ಸಂತೋಷವಾಯಿತು.ಕೂಗು
ಬಲವಾಯಿತು.
ಪೋಲೀಸರು ಹೆದರಿ ಗೇಟು ತೆರೆದು ಓಡಿಹೋದರು. ಹೊರಬಂದ ಆ
ಪ್ರವಾಹದೊಡನೆ ಕೊಂಡಯ್ಯನೂ ಲೀನವಾಗಿ ತೇಲಿಹೋದ.ಅವನಿಗೆ
ಎಚ್ಚರ ತಿಳಿದಾಗ ನಗರದ ಮನೂರನೆಯ ಬೀದಿಗೆ ಬಂದು ತಲಪಿದ್ದ!
... ಮರುದಿನವೇ ಕೊಂಡಯ್ಯನಿಗೆ ಗುಂತಕಲ್ಲಿಗೆ ವರ್ಗವಾಯಿತು. ಆತ
ಕೂಲಿಗಾರರನ್ನು ಉದ್ರೇಕಿಸುತ್ತಿದ್ದನೆಂದು ವರದಿ ಹೋಗಿತ್ತೆಂದು ಅದಕ್ಕಾಗಿ
ಒಡನೆಯೇ ಟ್ರಾನ್ಸಫರ್ ಆಯಿತೆಂದೂ ಕಿಂವದಂಶಿ ಬಂತು.
ವರ್ಗವಾದ ವಾರ್ತೆ ಹಿತಕರವಾಗಿತ್ತು; ಆದರೆ ಕೇಳಿದ ಕಿಂನದಂತಿ
ಮಾತ್ರ ಅವನ ಮೈಯಲ್ಲೆಲ್ಲ ಬೆವರಿಳಿಸಿತು.
ಆದರೂ ನಸುನಕು ಆತ ಹೇಳಿಕೊಂಡ: "ನಮ್ಮಣ್ಣ ಸಾವಿರ ಸಲ
ಹೇಳಿದ್ದ ಯೂನಿಯನ್ ಕೆಲಸ ಮಾಡೂಂತ. ಈಗಲಾದರೂ ಆತನಿಗೆ
ತೃಪ್ತಿಯಾದೀತು...."
ಮನೆ ಸಾಮಾನುಗಳನ್ನೆಲ್ಲ ಗೆಳೆಯನೊಬ್ಬನ ಮನೆಯಲ್ಲಿಟ್ಟು, ಕ್ವಾರ್ಟರ್ಸ
ಖಾಲಿ ಮಾಡಿ,ಬರಿಯ ಬೆಡ್ದಿಂಗೊಂದನ್ನೇ ಹೊತ್ತುಕೊಂಡು, ಮಾರನೆ ದಿನ
ಮು೦ಜಾನೆ ಕೊಂಡಯ್ಯ ಗುಂತಕಲ್ಲಿಗೆ ಪ್ರಯಾಣ ಬೆಳಸಿದ.
ದೇಹಕೃಶವಾಗಿದ್ದರೂ,ಮನಸ್ಸು ಅರಳಿತ್ತು. ಯಾವುದೋ ಆಸೆ
ಚಿಗುರಿತ್ತು
"ಊರಿಗೆ ಸಮೀಪ ಹೋಗುತ್ತಿದ್ದೇನಿ. ಹಳೆಯ ನೆನಪನ್ನೆಲ್ಲ ಮರೆತು
ಹೊಸ ಜೀವನ ಶುರು ಮಾಡಬೇಕು"--- ಎಂಬೊಂದು ನಿರ್ಧಾರ, ನಿಧಾನ
ವಾಗಿ ಆ ಮನಸ್ಸಿನಲ್ಲಿ ರೂಪಿತವಾಯಿತು