ಪುಟ:ಅನ್ನಪೂರ್ಣಾ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ರೋಟರಿಯ ಕೆಳಗೆ

ಮೇ ದಿನಾಂಕ ಎರಡು. ಬೆಳಗಾಗಿದೆ. ಬೆಳಗಗಿರಲೇಬೇಕು. ಎಂದು
ಆನಂದ್, ಮುಖವನ್ನು ಅರ್ಥ ಮರೆ ಮಾಡಿದ್ದ ಮುಸುಕಿನೊಳಗಿಂದಲೆ
ಕಣ್ಣು ತೆರೆಯದೆಯೇ, ಯೋಚಿಸುತ್ತಿದ್ದಾನೆ. ಎರಡು ವರ್ಷ್ದದ ಮಗು ಎದ್ದು
ಕುಳಿತು ಚೀರಾಡುತ್ತಿದೆ. ತಾರಾ ಭುಜ ಕುಲುಕುತ್ತಾ ಎಬ್ಬಿಸುತ್ತಿದ್ದಾಳೆ.
"ಏಳೇಂದ್ರೆ....ಏಳೆ...."
"ಹೂಂ ಊಂ."
ಕಾಲುಗಳು ಸೆಳೆಯುತ್ತಿವೆ. ಕಾಲಬೆರಳುಗಳು ನೆಟಕೆಗಾಗಿ ಹಾತೊರೆ ಯುತ್ತಿದೆ. ಕ್ಷೀಣಗೊಂಡ ದೇಹ, "ಇನ್ನಿಷ್ಟು-ಇನ್ನಿಷ್ಟು ನೆದ್ದೆ" ಎಂದು ಕರೆದು ಕೇಳುತ್ತಿದೆ. ಆದರೂ ಏಳಲೇಬೆಕು. ತಾರಾ ಹೇಳುತ್ತಿದ್ದಾಳೆ. "ಸಕ್ಕರೆ ಇಲ್ಲಾರೀ...." "ಹೂ. ಸಕ್ಕರೆ ಇಲ್ಲದೆ ಕಾಫಿ ಕುಡಿಯೋಣವಂತೆ." ....ಎದ್ದು ಕುಳಿತ ಆನಂದ್ ಮಗುವನ್ನೆತ್ತಿಕೊಂಡ. ಅಳಬೇಡವೆಂದು ಸಂತೈಸಿದ. ಮೂಲೆಗೆ ಬಿದ್ದಿದ್ದ ಅಮೇರಿಕನ್ ರಿಪೊರ್ಟರನ್ನು ಎತ್ತಿಕೊಂಡು ಬೊಂಬೆ ತೋರಿಸಿದ. ಅಮೆರಿಕದ ಬೊಂಬೆ ನೋಡಿದ ಮೇಲೆಯೂ ಮಗ ಅಳುತ್ತಲೇ ಇತ್ತು. ಅದೊಂದು ಗೂಡುಮನೆ. ಒಂದು ಮಲಗುವ ರೂಮು. ಅದೇ "ದಿವಾಣಖಾನೆ"!ಇನ್ನೊಂದು ಅಡುಗೆಯ ಕೊ ಡಿ.ಅಲ್ಲಿಯೇ ಬಚ್ಚಲು ಸೌದೆ ಒಲೆಯಿಂದ ಹೊರಟ ಹೊಗೆ ಮಲಗುವ ರೊಮನ್ನು ಹಾದು, ಒಡೆದ ಗಾಜಿನ ಕಿರಿಯ ಕಿಟಕಿಯ ಮೂಲಕ ಹೊರಕ್ಕೆ ಹೋಗುತ್ತಿತ್ತು. ಉಪಸಂಪಾದಕ ಆನಂದ್ ಅದನ್ನೇ ನೋಡುತ್ತ ಕುಳಿತ. ಅಳುತ್ತಿದ್ದ ಮಗುವಿನಿಂದ ಅವನ ದೃಷ್ಟಿ ದೊರ ಸರಿಯಿತು. ಎಲ್ಲವು ಉರಿದು ಹೊ