ಪುಟ:ಅನ್ನಪೂರ್ಣಾ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೋಟರಿಯ ಕೆಳಗೆ

೨೧



ಯಾಗಿ ಹೋಗುತ್ತಿದೆ. ಎಲ್ಲವೂ ತಾನು ಕಂಡಿದ್ದ ಕನಸು, ತನ್ನ ಆದರ್ಶ,
ತನ್ನ ಬಾಳ್ವೆ-ಎಲ್ಲವು!
ಮೇ ಮೊದಲದಿನ, ನೋಟೀಸು ಬಂದಿತ್ತು. ಎಂಟನೆ ತಾರೀಖಿನಿಂದ
ಕೆಲಸದಿಂದ ವಜಾ, ಒಬ್ಬನೇ ಅಲ್ಲ, ಇಡೀ ಸಂಪಾದಕ ಮಂಡಲವೇ ವಜಾ.
ఒందాಣೆ ಬೆಲೆಯ ಅವರ ಆ ದಿನಪತ್ರಿಕೆಯ ನಿಂತುಹೋಗಬಹುದು
ಒಂದೂವರೆ ಆಣೆ ಬೆಲೆಯ ದಿನಪತ್ರಿಕೆಯ ಮಾಲೀಕರು ಅವನ್ನು ಕೊಂಡು
ಕೊಂಡಿದ್ದರು. ಆದರೆ ಹಳೆಯ ಪತ್ರಿಕೆಯಲ್ಲಿ ದುಡಿಯುತ್ತಿದ್ದವರನ್ನು ಅವರು
ಕೊಳ್ಳలిల్ల....
ಮನೆಯೆಂಬ ಕಟ್ಟಡದ ಹೊರಗೆ, ' ಆನಂದ್ ಬಿ. ಎಸ್. ಸಿ. ಪತ್ರಿ
ಕೋದ್ಯೋಗಿ' ಎಂಬ ಹೆಸರುಹಲಿಗೆ, ತೂಗಾಡುತ್ತಿದೆ. ಅದನ್ನು ದೊರ
ಕಿಸಲು ಒಂದೂವರೆ ರೂ. ಖರ್ಚು ತಗಲಿತ್ತು....ಒಂದೂವರೆರೂಪಾಯಿ....ಈ
ದಿನವಾದರೂ ಕೀಶನ ತರಬೇಕು. ಕೊಡುವ ಆರು ಔನ್ಸನ್ನು ಕೊಂಡು
ಕೊಳ್ಲುವ ಸಾಮರ್ಥ್ಯ ಇಲ್ಲದೆ ಹೋಯಿತಲ್ಲ!
ಇನ್ನು ಮುಂದೇನು? ಎ೦ಟು ವರ್ಷದ ಪತ್ರಿಕೋದ್ಯಮಿ ಜೀವನದ
ಬಳಿಕವೂ ಮತ್ತೆ ಕಾಡಿಸುತ್ತಿರುವುದು ಅದೇ ಸವಾಲು-ಮುಂದೇನು?
ಎದ್ದು ನಿಂತ ಆನಂದ್ ಕಿಟಕಿಯಿಂದ ಹೊರನೋಡಿದ ಸೂರ್ಯ
ರಶ್ಮಿ ಕಣ್ಣನ್ನು ಕುಕ್ಕಿತು. ಮುಖ ತಿರುಗಿಸಿ, ಕಿಟಕಿಗೆ ಬೆನ್ನು ಮಾಡಿ, ರೂಮಿನ
ಉದ್ದಗಲಕ್ಕೂ ಶೂನ್ಯ ದೃಷ್ಟಿಯನ್ನು ಬೀಗಿದ. ಎಲ್ಲಾ ಚೆದರಿಹೋಗಿದೆ.
ಬರೆಯಲೆಂದು ತಂದ್ದಿದ, ಒಂದು ಮುಗ್ಗುಲು ಖಾಲಿ ಇದ್ದ, ಅಮೇರಿಕನ್
ಇನ್ಫರ್ಮೇಷನ್ ಸರ್ವೀಸಿನ ಹಾಳೆಗಳ ರಾಶಿಯೆಲ್ಲ ಚೆದರಿಹೋಗಿದೆ.
ಭವಿಷ್ಯತ್ತಿನ ಭವ್ಯ ಕಟ್ಟಡದ ನಿರ್ಮಾಣಕ್ಕೆಂದು ತಂದಿದ್ದ, ಕಲ್ಪನೆಯ
ಸಾಮಗ್ರಿಗಳೆಲ್ಲ ಕರಗಿಹೋದ ಹಾಗೆ... ಅರಗಿನ ಮನೆಯಾದ ಆ ಕನಸಿನ
ಮನೆ....
ತಾರಾಗೆ ಆ ಸುದ್ದಿ ತಿಳಿಸಬೇಕು. ಆದರೆ ಧೈರ್ಯ ಸಾಲದು. ಆರು
ತಿಂಗಳ ಬಸುರಿ ಆಕೆ . ಮೊದಲ ಗಂಡನ ಬಳಿಕ ತಾವು ಬಯಸಿದ ಹೆಣ್ಣು
ಕೂಸೆಂದು ಬರುವುದೆಂದು ಅವರು ನಿರೀಕ್ಷಣೆಯ ಸುಖವನ್ನು ಅನುಭವವಿಸಿ