ಪುಟ:ಅನ್ನಪೂರ್ಣಾ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೨

ಅನ್ನಪೂರ್ಣಾ

ದ್ದರು. ಈಗ ಆ ನಿರೀಕ್ಷಣೆ ಶೂಲಪ್ರಾಯವಾಗಿದೆ. ಮಗು ಬರಬಹುದು
ಹುಡುಗಿಯೇ ಹುಟ್ಟಲೂಬಹುದು; ಮುಂದೆ ? ಅದರ ಪಾಲನೆ, ಪೋಷಣೆ?
ಏಪ್ರಿಲ್ ತಿಂಗಳ ಸಂಬಳದಿಂದ ಐವತ್ತು ರೂಪಾಯಿ ಆಗಲೆ ಆತ
ಮುಂಗಡ ಪಡೆದಿದ್ದ. ಉಳಿದುದು ಐವತ್ತು ರೂಪಾಯಿ. ಆದರಿಂದ ಹಳ್ಳಿ
ಯಲ್ಲಿರುವ ಇಳಿವಯಸ್ಸಿನ ತಾಯ್ತಂದೆಯರಿಗೆ ಕಳಿಸಬೇಕು. ಉಳಿದ
ಇಪ್ಪತ್ತರಲ್ಲಿ ಮುಂದೆ ಜೀವನ-ಕೆಲಸ ದೊರೆಯುವವರೆಗೂ ಇನ್ನೊಬ್ಬ
ಮಾಲೀಕನಿಂದ ಸಂಬಳ ಕೈ ಸೇರುವವರೆಗೂ!
.....ಬಾಡಿಗೆಗೆ, ಹಾಲಿನಾಕೆಗೆ, ಸೌದೆಗೆ, ರೇಶನ್ನಿಗೆ....
ಮೇ ತಿಂಗಳಲ್ಲಿ ಮುಂಗಡ ಪಡೆದು, ತಾರಾಗೊಂದು ಪ್ರಿಂಟ್-ಸೀರೆ
ಕೊಳ್ಳಬೇಕು; ಜೂನತಿಂಗಳಲ್ಲಿ ಮುಂಗಡ ಪಡೆದು ತನಗೊಂದು ಲಿನನ್
ಬುಶ್ ಕೋಟು ಮತ್ತು ರೇಡಿಮೇಡ್ ಪ್ಯಾಂಟು ಖರೀದಿ ಮಾಡಬೇಕು
ತನ್ನ ೪೪ರ ಮಾಡೆಲ್ ಶೂಸಿಗೆ ಈಗಲಾದರೂ' ಸೋಲ್ಸ ” ಹಾಕಬೇಕು.
ಎಷ್ಟೊಂದು ಯೋಜನೆಗಳಿದ್ದುವು!
"ಸೋಲ್" ಹಾಕುವುದ; ಚಪ್ಪಲಿಗೆ ಆತ್ಮ ಸೇರಿಸುವುದು! ಆತ್ಮ
ಎಂಬುದುಂಟೆ ? ಕೊಟ್ಟಧೀಶ ಮಾಲಿಕರೆನ್ನುವವರಿಗೆ ಆತ್ಮವೆಂಬುದುಂಟೆ?
ಅವರಿಗೆಲ್ಲ, ಬಿಸ್ಕತ್ತಿನ ಮುಖ ನೋಡದ ಎಳೆಯಮಗ, 'ಶ್ರೀಮಂತದ'
ಸುಖ ನೋಡದ ಗರ್ಭಿಣಿ ಹೆಂಡತಿ.... ಇಂಥ ಸಂಬಂಧಿಕರು ಇರುವುದುಂಟೆ ?
ಅಖಿಲ ಭಾರತ ಕಲಾ-ವಸ್ತುಪ್ರದರ್ಶನವನ್ನು ತಾರೆಯೂ ತಾನೂ
ನೋಡಬೇಕೆಂದು ಆನಂದ್ ಯೋಚಿಸಿದ್ದ. ಪತ್ರಿಕೆಗೆಂದು ಬಂದಿದ್ದ ಪಾಸನ್ನು
ಮಾಲೀಕರು ಒಯ್ದಿದ್ದರು. ಆತ ದುಡ್ಡು ಕೊಟ್ಟೀ ಹೋಗಬೇಕಿತ್ತು. ಹತ್ತನೆ
ತಾರೀಖಿಗೋ ಹದಿನೈದನೆ ತಾರೀಖಿಗೋ ಸಂಬಳ ಬಂದ ಮೇಲೆ ಹೋಗೋಣ
ವೆಂದು ಆತ್ಮ ಭಾವಿಸಿದ್ದ.... ಸದ್ಯಃ ವಸ್ತುಪ್ರದರ್ಶನ ಆಗ್ನಿಗೆ ಆಹುತಿಯಾಗಿ
ಒಂದೂವರೆ- ಎರಡು ರೂಪಾಯಿ ಕೈ ಬಿಟ್ಟು ಹೋಗುವ ಪರಿಸ್ಥಿತಿ ತಪ್ಪಿತು....
ತಾರಾ ಕೇಳಿದಳು:"ಏನಿದು ಹೀಗೆ ? ಮುಖಾನಾದರೂ ತೊಳ
ಕೊಳ್ಳಿ...."
ಆನಂದ್ ಚಲಿಸಿದ.... ಗಲ್ಲವನ್ನು ಮುಟ್ಟಿ ನೋಡಿದ. ಮೂರನೆಯ
ದಿನದ ಗಡ್ಡ. ಇನ್ನೂ ಒಂದು ದಿನ ಮುಂದಕ್ಕೆ ಹೋಗಲಿ ಎಂದುಕೊಂಡು