ಪುಟ:ಅನ್ನಪೂರ್ಣಾ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ಅನ್ನಪೂಣಾ೯

ಎಂದು ಯಾವಾಗಲೂ ಆತ ತಿಳಿದಿದ್ದ. ತನ್ನನ್ನು ನೋಡಿದ ಹುಡುಗಿಯರು
ತನ್ನನ್ನು ಪ್ರೀತಿಸದೆ ಬೇರೆ ಗತಿಯೇ ಇಲ್ಲ ಎಂದು ಆತನ ದೃಢ ನಂಬಿಕೆ.
ಹೊಟೆಲಲ್ಲಿ ಸಾಲ, ಧೋಭಿಯಲ್ಲಿ ಸಾಲ, ಪುಸ್ತಕದಂಗಡಿಯಲ್ಲಿ ಸಾಲ,
ಸ್ನೇಹಿತರಲ್ಲಿ-ಬರೇ ನಮಸ್ಕಾರ. ಪರಿಚಯವಿದ್ದವರಲ್ಲೂ ಕೂಡಾ-ಸಾಲ !
ಹೀಗಿದ್ದರೂ ಯಾವುದಾದರೊಂದು ಸಭೆಯಲ್ಲಿ, ನೃತ್ಯಕೂಟದಲ್ಲಿ, ವಿವಾಹ
ಸಮಾರಂಭದಲ್ಲಿ ಶ್ರೀಮಂತರ - ಆ ಗರ್ಭ ಶ್ರೀಮಂತರ - ಅತಿ ಸುಂದರಿಯಾದ
ಹುಡುಗಿಯೊಬ್ಬಳು ತನ್ನನ್ನು ಪ್ರಥಮ ದೃಷ್ಟಿಗೇ ಪ್ರೀತಿಸುವಳೆಂಬ ಬಗ್ಗೆ,
ಅವನಿಗೆ ಸಂಶಯವೇ ಇರಲಿಲ್ಲ.
ಈಗ, ಮನೆ ಮಗುಚಿಕೊಂಡ ಹಾಗೆ....ಆಕಾಶ ಕಳಚಿಕೊಂಡ ಹಾಗೆ....
ನಾಭಿಯಲ್ಲೇ ನಡುಕ !
ಫೋನ್ ಟ್ರಿಣ್ ಗುಟ್ಟುತ್ತಲೆ ಇತ್ತು.
ಟೆಲಿಪ್ರಿಂಟರ್, ಇನ್ನೇನು ದೀರ್ಘ ನಿದ್ರೆ ಇಲ್ಲಿ ಬರಲಿದೆ ಎಂದು
ತಿಳಿದೂ, ಕಚ ಕಚಗುಟ್ಟುತ್ತಲಿತ್ತು.
ಆನಂದ್, ಮೆಶಿನ್ ರೂಮಿನೊಳಕ್ಕೆ ಹೋದ. " ನಮಸ್ಕಾರ
ಸಾರ್ ", " ನಮಸ್ಕಾರ ಸಾರ್ ", " ನಮಸ್ಕಾರ ಸಾರ್ ". " ಒಂದು
ತಿಂಗಳ ಸಂಬಳಾನಾದ್ರೂ ಜಾಸ್ತಿ ಕೊಡಲ್ವೆ ಸಾರ್ ", "ನೀವೇ ಒಂದು
ಪೇಪರ್‌ ಹೊರಡ್ಸಿ ಸಾರ್."
ಆನಂದ್ ಮುಗುಳ್ನಕ್ಕ. ಆ ನಗು ಬೆಪ್ಪನ ನಗುವಿನ ಹಾಗಿದೆ ಎನಿಸಿ
ತವನಿಗೆ.
ಟ್ರೆಡಲ್ ತೂಕಡಿಸುತ್ತಿತ್ತು. ಸಿಲಿಂಡರ್‌ ಆಯಾಸಗೊಂಡು ಮಲ
ಗಿತ್ತು. ಸಿಲಿಂಡರಿಗೆಲ್ಲ ಗೊತ್ತು ಅಲ್ಲಿನ ರಹಸ್ಯ. ಅದು ದಿನವೂ ಮುದ್ರಿಸು
ವುದು ಬರೇ ಎರಡು ಸಾವಿರ. ಅಷ್ಟಾದರೂ, ಅಲ್ಲಿ ಇಲ್ಲಿ, ತನ್ನ ಆ ಕೀಲಿ
ಈ ಕೀಲಿ ಕಳಚಿದೆ. ಆದರೆ ಜಾಹೀರಾತುದಾರರಿಗೆ " ಅತಿ ವಿಸ್ತಾರವಾದ
ಪ್ರಸಾರ ಸಂಖ್ಯೆ, ೧೫,೦೦೦ ! ನಮ್ಮದು ಫಸ್ಟ ಕ್ಲಾಸ್ ಮಶಿನ್ ಇವರೆ...."
ಬೈಂಡಿಂಗ್ ರೂಮಿನಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿತ್ತು. ಕಂಪೋಸಿಂಗ್
ವಿಭಾಗದವರು " ಮುಂದೇನು? ” ಎಂಬ ವಿಷಯದ ಬಗ್ಗೆ ಚರ್ಚಾಕೂಟ