ಪುಟ:ಅನ್ನಪೂರ್ಣಾ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೋಟರಿಯ ಕೆಳಗೆ

೨೫

ನಡೆಸಿದ್ದರು ಸ್ಟಿಕ್ಕು, ಲೆಡ್ಡು, ಗಾಲಿಗಳು ಚಿತ್ರವಿಚಿತ್ರವಾಗಿ ಹರಡಿಹೋಗಿ
ದ್ದುವು.
ಆನಂದ್, ಮತ್ತೆ ತನ್ನ ಕುರ್ಚಿಯ ಬಳಿಗೆ ಬಂದ. ಏನಾದರೂ
ಮ್ಯಾಟರ್ ಬರೆಯಬೇಕು. ಪ್ರಾದೇಶಿಕ ಸುದ್ದಿ ಸಮಾಚಾರಗಳನ್ನು ಎಡಿಟ್
ಮಾಡಬೇಕು.
ನ್ಯೂಸ್ ಎಡಿಟರ ಮೇಜಿನ ಮೇಲಿಂದ ರಾತ್ರೆ ಬಂದಿದ್ದ. ಪಿ. ಟ. ಐ.
ಮೆಸ್ಸೇಜುಗಳನ್ನು ಓದೋಣವೆನ್ನಿಸಿತು. ಆದರೆ ಮನಸ್ಸಾಗಲಿಲ್ಲ.
"ಹಿಂದೂ" ಬಂತು ಯಾಂತ್ರಿಕವಾಗಿ ಆನಂದ್ ಆ ಕಾಲಂಗಳ
ಮೇಲೆ ದ್ರುಷ್ಟಿಯೋಡಿಸಿದ. "ವಿಶ್ವದಾದ್ಯಂತ ಮೇ ದಿನಾಚರಣೆ....ಮಾಸ್ಕೋ
ಪೆಕಿಂಗ್ ಗಳಲ್ಲಿ ಅದ್ಭುತ ಪರೇಡ್.... " ಹುಂ! ಶ್ರಮಜೀವಿಗಳ ಮೇ ದಿನ.
....ಆದರೆ ಇಲ್ಲಿ ಮೇ ದಿನವೇ, ಮೊದಲ ದಿನವೇ, ನಿರುದ್ಯೋಗದ
ಸಂದೇಶ ಬಂದಿತ್ತು.
ಆನಂದ್ ಏನನ್ನೋ ಬರೆಯ ಹೊರಟ. ಅಮೆರಿಕದ ನ್ಯೂಸ್ ಶೀಟು
ಗಳ ಖಾಲಿ ಮಗ್ಗುಲಮೇಲೆ , ಲೇಖನಿಯೋಡಿತು. ಗ್ಯಾಲಿಪ್ರೂಫ್, ಪೇಜ್
ಪ್ರೂಫ್, ಮೆಸಿನ್ ಪ್ರೂಫ್, ಟ್ರೆಡಲ್, ಸಿಲಿಂಡರ್, ರೋಟರಿ....ಎಂದೆಲ್ಲ
ಲೇಖನಿ ಗೀಚಿತು. ರೋಟರಿ ಎಂಬ ಶಬ್ದವನ್ನು ನಾಲ್ಕು ಸಲ ಬರೆಯಿತು.
ಕುಂಬಳಕಾಯಿಯಂಥ ದೊಡ್ಡಕ್ಷರಗಳಲ್ಲಿ ಅದು ಮೂಡಿತು.
....ಮಧ್ಯಾಹ್ನ ಪ್ರೆಸ್ಸಿನ ಸೈಕಲನ್ನೇರಿ ಆನಂದ್ ಮನೆಗೆ ಹೊರಟ.
ಅರ್ಧ ಫರ್ಲಾಂಗು ಹೋಗುವವರಿಗೂ ಎದುರು ಚಕ್ರ ಪಂಕ್ಚರಾಗಿದ್ದುದು
ಗೊತ್ತೇ ಆಗಲಿಲ್ಲ. ಪಂಕ್ಚರ್ ತೆಗೆಸಲು ಕಾಸಿರಲಿಲ್ಲ. ಸೈಕಲನ್ನು ಮೆತ್ತಗೆ
ವಾಪಸು ತಳ್ಳಿ, ಆ ಪಂಕ್ಚರಿಗೆ ತಾನೇ ಕಾರಣನೇನೋ ಎಂಬ ಮನೋಭಾವನ
ಯಿಂದ, ನಡೆದುಕೊಂಡೇ ಆನಂದ್ ಹೊರಟು ಹೋದ.
ತಾರಾ ಒಂದೊಂದುತುತ್ತು ಅನ್ನವಿಟ್ಟಿದ್ದಳು. ಎರಡೆರಡು ಚಪಾತಿ.
"ರಾತ್ರಿಗೆ ಅಕ್ಕಿಯಿಲ್ಲ, ಆರೇಳು ಚಪಾತಿಗೆ ಸಾಲುವಷ್ಟು ಹಿಟ್ಟಿದೆ," ಎಂದು
ತಾರಾ ಬಾಶ್ಮಿ ಕೊಟ್ಟಳು.
ಆನಂದ್ ಮಾತಾಡಲಿಲ್ಲ ತಲೆಬಾಗಿಸಿಕೊಂಡು "ಹೂಂ" ಎಂದ
ಮಜ್ಜಿಗೆ ನೀರಿನ ಶಾಸ್ತ್ರ ಮುಗಿಸಿ ಆತ ತಲೆ ಎತ್ತಿದ. ತಾರಾ ನಿಂತಿದ್ದಳು.