ಪುಟ:ಅನ್ನಪೂರ್ಣಾ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೋಟರಿಯ ಕೆಳಗೆ ನೊಡನೆ ಅಲ್ಲೀಗೇ ಕಳುಹಿಸಿಬಿಡುವುದು. ತಾನು ಸುತ್ತಾಡುವುದು....ಇಲ್ಲ.
ಪತ್ರಿಕೋದ್ಯಮ ಬಿಡಬಾರದು....ಎಲ್ಲಾದರೂ ದೊಡ್ಡ ಪತ್ರಿಕೆಯಲ್ಲಿ, ಸದ್ಯ
ಕಡಿಮೆ ಸಂಬಳವಾದರೂ ಸರಿ, ಸೇರಿಕೊಳ್ಳಬೇಕು. ಬೇರೆ ಉದ್ಯೋಗ
ವೆಂದರೆ, ಸಿಗುವುದಾದರೂ ಎಲ್ಲಿ ? ಕೋಡಿಸುವುದಾದರೂ ಯಾರೂ?
ಪತ್ರಿಕೋದ್ಯಮದ ರೊಮಾನ್ಸ್ ಇಲ್ಲಿಗೇ ಮುಕ್ತಾಯವಾಗಬೇಕೇ ?
ತಾನೂ, ಕೂದಲೆಲ್ಲ ಮೂವತ್ತರೊಳಗೇ ಸಂಪೂರ್ಣವಾಗಿ ನರೆತು ಹೋಗು
ವಂತೆ ದುಡಿದು, ಜೀವಂತ ಸಮಾಧಿಯಲ್ಲಿ ಆಡಗಲೆ ? ಎಂಥ ಭೀಕರ
ರಾತ್ರೆ....
ನಿಧಾನವಾಗಿ ನಿದ್ದೆ ನುಸುಳಿಕೊಂಡು ಬಂದು ದಯೆ ತೋರಿಸಿತು....
ಒಂದು ಸ್ವಪ್ನ ಆತನಿಗೆ.
__ಭವ್ಯವಾದೊಂದು ಮಹಾಮುದ್ರಣಾಲಯ. ಒಂಟಿಯಷ್ಟು ಎತ್ತ
ರದ, ನಾಲ್ಕು ಆನೆಯಷ್ಟು ಗಾತ್ರದ ರೋಟರಿಯಂತ್ರವೊಂದು ಕೆಲಸ ನಡೆಸಿದೆ.
ಒಂದು ದೊಡ್ಡ ದೈನಿಕ, ದೊಡ್ಡ ಸಾಪ್ತಾಹಿಕ, ದೊಡ್ಡಮಾಸಿಕ, ಬಣ್ಣ ಬಣ್ಣ
ಗಳಲ್ಲಿ ಅಚ್ಚಾಗಿ, ಮಡಿಕೆಯಾಗಿ, ಹೊದಿಕೆಯಾಗಿ, ಅಚ್ಚು ಕಟ್ಟಾಗಿ ಜತೆ
ಯಾಗಿಯೇ ರಾಶಿ ಬೀಳುತ್ತಿದೆ. ಮೂಲೆಯಲ್ಲಿ ನಾಲ್ಕಾರು ಟ್ರೆಡಲ್ , ಎರಡು
ಮೂರು ಸಿಲಿಂಡರ ಅಳುತ್ತಾ ನಿಂತಿವೆ. ತನ್ನ ಪರಿಚಯದ ನುರಿತ ಪತ್ರಿ
ಕೋದ್ಯಮಿಗಳೂ ಸಾಹಿತಿ ಪತ್ರಿಕೋದ್ಯೋಗಿಗಳೂ ಅಲ್ಲಿ ಕಸಗುಡಿಸು
ತ್ತಿದ್ದಾರೆ.
__ತಾನು ನಿಂತಿರುವುದು ಒಂದು ಮೂಲೆಯಲ್ಲಿ. ‌ಮೈಮೆಲೆ ಕೌಪೀ
ನದ ಹೊರತು ಬೇರೆ ಬಟ್ಟಿಯಿಲ್ಲ. ತಲೆಯ ಮೇಲೆ ಜುಟ್ಟಿದೆ. ಯಾವು
ಯಾವುದೋ ದಾರ ಕೊರಳಲ್ಲಿದೆ. ತಾನು ಹುಡುಗನಾಗಿದ್ದಾಗ ಇದ್ದಂತೆ.
__ಯಾವನೋ‌‌ ಒಬ್ಬ ಭೂಪತಿ ಎತ್ತರದಲ್ಲಿ‌ ದೂರದಲ್ಲಿ ಕೂತು ನಗು
ತ್ತಿದ್ದಾನೆ. ತಿಂದು ಬೆಳೆದ ಹಿರಿ ದೇಹ. ಆ ಮುಖಕ್ಕೆ ರೂಪವಿಲ್ಲ. ಬಣ್ಣವೋ
ಗೋದಿಗೆಂಪು ಅರಚುತ್ತಿದ್ದಾನೆ, " ಏ ಹುಡುಗ!"
__ತಾನು ಹುಡುಗನಲ್ಲ, ತನಗೆ ಮಗುವಿದೆ, ಎನ್ನಲು ಆನಂದ
ಯತ್ನಿಸುತ್ತಾನೆ. ಮಾತು ಹೊರಡುವುದಿಲ್ಲ. ಓಡಲೆತ್ನಿಸುತ್ತಾನೆ. ಆದರೆ
ಬಾಗಿಲ ಬಳಿ ಪಠಾಣ ಕಾವಲುಗಾರರಿದ್ದಾರೆ. ಎತ್ತ ಓಡಿದರೂ ರೋಟರಿ