ಪುಟ:ಅನ್ನಪೂರ್ಣಾ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿರುಕನೋರ್ವನೂರ ಮುಂದೆ....

ಅದೇ ಮನೆ, ಅದೇ ಕಿಟಕಿ, ಅದೇ ಹುಡುಗಿ. ಅವಳು ನೋಡುತ್ತಿದ್ದ
ರೀತಿಯೊ ! ಇಲ್ಲ, ಆಕೆ ಕಸಬಿನವಳಲ್ಲ. ನೋಡಿದರೇ ಗೊತ್ತಾಗುತ್ತಿತ್ತು ___
ಅದು ಸಂಭಾವಿತರ ಸದ್ಗ್ರುಹಸ್ಥರ ಮನೆಯೆಂದು. ಆ ವಿಶಾಲವಾದ ಹೂ __
ದೋಟ, ತಾರಸಿಯ ಎರಡು ಮಹಡಿಯ ಭವ್ಯ ಮನೆ, ಎತ್ತರದ ವಿಲಾಯತಿ
ನಾಯಿ.... ಘನವಾದ ಬ್ಯೂಕ್ ಕಾರು....ರೇಡಿಯೋ ಸಂಗೀತ. ಆ ಹುಡು
ಗಿಯೂ ಹಾಡುತ್ತಿದ್ದಳು ಒಮ್ಮೊಮ್ಮೆ; " ಓ ಆಜಾ ಮೋರೇ ರಾಜಾ.... "
ಸದಾನಂದ ಬಹಳ ಹೋತ್ತು ಯೋಚಿಸಿದ, ತನಗೋಸ್ಕರವೇ ಇರ
ಬಹುದೇ ಆಕೆ ಹಾಡಿದ್ದು ? ತಾನೇ ಏನು ಅವಳ "ರಾಜಾ? ಎಂಥ
ಹುಚ್ಚು ! ಮಾಸಿದ ಷರಾಯಿ_ಷರಟು , ಎಣ್ಣೆ ಕಾಣದ ತಲೆಗೂದಲು,
ಸಾಬೂನು ಸಮಿಪಸದ ಶರೀರ....
ಅವನು ಕಾಲೇಜಿನಲ್ಲಿದ್ದಾಗ ಯಾರೋ ಒಮ್ಮೆ ಹೇಳಿದ್ದರು " ವಿಚಿತ್ರ
ಕಣ್ಣುಗಳಿವೆಯಪ್ಪ ನಿನಗ__ಎಂಥ ಸೌಂದರ್ಯ ! " ಎಂತ. ಇರಬಹುದೆ ?
ಈ ಹುಡುಗಿ ಈ ಕಣ್ಣುಗಳಿಗೆ ಮಾರುಹೋಗಿರಬಹುದೆ ?
ಆ ಸಂಜೆ ಆಳು ಬಂದು ಅವನನ್ನು ಕರೆದ. ....ಸುಂದರವಾಗಿ ಅಲಂ
ಕ್ರುತವಾದ್ದ ಪಡಸಾಲೆಯಲ್ಲಿ ಅವನು ಬಂದು ನಿಂತುದಾಯಿತು.
ವಯಸ್ಸಾದ ಹೆಂಗಸೊಬ್ಬಳು ಬಂದು ಒರಟು ಧ್ವನಿಯಲ್ಲಿ ಕೇಳಿದಳು:
" ದಿನವೂ ಎದುರು ಜಗಲಿಯಲ್ಲಿ ಯಾಕೆ ಕೂತಿರ್ತೀಯಾ ? "
" ಈಚೆಗೆ ವಾಕಿಂಗ್ ಬಂದವನು ಮುಂದೆ ನಡೆಯಲಾಗದೆ ಅಲ್ಲಿ
ವಿಶ್ರಾಂತಿ ಪಡೀತೇನೆ. "
" ನಿನಗೇನಾದರೂ ಕೆಲಸ ಬೇಕೆ ? "
" ಈ ಒಂದು ವರ್ಷದಿಂದ ಅದನ್ನೇ ಹುಡುಕುತ್ತಿದ್ದೇನೆ. "
" ಏನು ಕೆಲಸ ಮಾಡಬಲ್ಲೆ ? "